ಮುಂಡರಗಿ: ಪಟ್ಟಣವು ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಲ್ಲಿ ಶನಿವಾರ ಉತ್ತಮವಾಗಿ ಮಳೆ ಸುರಿಯಿತು. ಸುಮಾರು ಅರ್ಧಗಂಟೆ ಸುರಿದ ಆಲಿಕಲ್ಲಿನ ರಭಸದ ಮಳೆಯು ಭೂಮಿಗೆ ತಂಪೆರೆಯಿತು.
ಮದ್ಯಾಹ್ನ ಎರಡು ಗಂಟೆಗೆ ಜೋರು ಗಾಳಿಯೊಂದಿಗೆ ಆರಂಭವಾದ ಮಳೆಯು ಸುಮಾರು ಅರ್ಧಗಂಟೆಗೂ ಹೆಚ್ಚುಕಾಲ ಸುರಿಯಿತು. ಬಿರುಸು ಮಳೆಯೊಂದಿಗೆ ಆಲಿಕಲ್ಲುಗಳು ಧರೆಗುರುಳಿ ಜನರಲ್ಲಿ ಹರ್ಷ ಮೂಡಿಸಿದವು.
ಮಳೆಯ ರಭಸಕ್ಕೆ ಹೂತು ಹೋಗಿದ್ದ ಚರಂಡಿಗಳ ಹೂಳೆಲ್ಲ ಕಿತ್ತು ಹೋಯಿತು. ಚರಂಡಿಗಳು ನೀರಿನಿಂದ ತುಂಬಿ ಹರಿದವು. ರಸ್ತೆಗಳು ಹಾಗೂ ಖಾಲಿ ನಿವೇಶನಗಳು ಜಲಾವೃತಗೊಂಡವು. ಪಟ್ಟಣದ ಕೆಲವು ಭಾಗಗಳಲ್ಲಿ ಚರಂಡಿಗಳು ಸಂಪೂರ್ಣವಾಗಿ ಹೂತು ಹೋಗಿದ್ದರಿಂದ ಗಲೀಜು ನೀರೆಲ್ಲ ರಸ್ತೆ ಹಾಗೂ ಅಕ್ಕಪಕ್ಕದ ಮನೆಗಳಿಗೆ ನುಗ್ಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.