ADVERTISEMENT

ಮಳೆಗಾಗಿ ಕೋಟಿ ಜಪಯಜ್ಞ ಆರಂಭ

​ಪ್ರಜಾವಾಣಿ ವಾರ್ತೆ
Published 14 ಜೂನ್ 2019, 13:24 IST
Last Updated 14 ಜೂನ್ 2019, 13:24 IST
ನರಗುಂದದ ವಾಸವಿ ಕಲ್ಯಾಣ ಮಂಟಪದಲ್ಲಿ ಮಳೆಗಾಗಿ ಆರ್ಯವೈಶ್ಯ ಸಮಾಜದ ಆಶ್ರಯದಲ್ಲಿ ಮಳೆಗಾಗಿ ಕೋಟಿ ಜಪಯಜ್ಞ ಆರಂಭವಾಯಿತು.
ನರಗುಂದದ ವಾಸವಿ ಕಲ್ಯಾಣ ಮಂಟಪದಲ್ಲಿ ಮಳೆಗಾಗಿ ಆರ್ಯವೈಶ್ಯ ಸಮಾಜದ ಆಶ್ರಯದಲ್ಲಿ ಮಳೆಗಾಗಿ ಕೋಟಿ ಜಪಯಜ್ಞ ಆರಂಭವಾಯಿತು.   

ನರಗುಂದ: ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆರ್ಯವೈಶ್ಯ ಸಮಾಜದಿಂದ ಶಿವಪಂಚಾಕ್ಷರಿ ಕೋಟಿ ಜಪ ಯಜ್ಞ ಆರಂಭವಾಯಿತು.

9 ದಿನಗಳ ಕಾಲ ನಡೆಯುವ ಈ ಜಪಯಜ್ಞದಲ್ಲಿ ಬೆಳಿಗ್ಗೆ ಎರಡು ಗಂಟೆಗಳ ಕಾಲ ಪಟ್ಟಣದ ವಿವಿಧ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು. ‘ಈ ಭಾಗದ ರೈತ ಸಮುದಾಯ ಬರದಿಂದ ತತ್ತರಿಸಿದೆ. ರೈತ ನಿತ್ಯ ಮುಗಿಲಿನತ್ತ ಮುಖ ಮಾಡಿ ಮಳೆಗಾಗಿ ಎದುರು ನೋಡುತ್ತಿದ್ದಾನೆ, ಮಳೆರಾಯ ಕೃಪೆ ತೋರುತ್ತಿಲ್ಲ. ಆದ್ದರಿಂದ ಜೂನ್ 14ರಿಂದ 22ರವರೆಗೆ ನಿತ್ಯ ಬೆಳಿಗ್ಗೆ 6.30ರಿಂದ 8 ಗಂಟೆಯವರೆಗೆ ಜಪಯಜ್ಞ ನಡೆಸಲಾಗುತ್ತಿದೆ’ ಎಂದು ಇದರ ನೇತೃತ್ವ ವಹಿಸಿರುವ ಸಂತೋಷ ಆನಗುಂದಿ ಹೇಳಿದರು.

ಜಪಯಜ್ಞದಲ್ಲಿ ಆರ್ಯವೈಶ್ಯ ಸಮಾಜದ ಅಶೋಕ ಗುಜಮಾಗಡಿ. ಗೋವಿಂದ ಇಂಗಳಳ್ಳಿ, ಶಕುಂತಲಾ ಮಂಗನಹಳ್ಳಿ, ವಾಸವಿ ಯುವತಿ ಸಂಘದ ಅಧ್ಯಕ್ಷೆ ರಶ್ಮಿ ಆನೇಗುಂದಿ, ಕಾಶಿನಾಥ ಪತ್ತೇಪುರ, ಮಂಜಣ್ಣ ಬೆಳಗಾವಿ, ವೆಂಕಣ್ಣ ಗುಜಮಾಗಡಿ, ಗೋಪಾಲಕೃಷ್ಣ ಆನೇಗುಂದಿ, ಸುರೇಶ ಪಟ್ಟದಕಲ್ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.