ADVERTISEMENT

ಆಲಿಕಲ್ಲು ಮಳೆಗೆ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 6:09 IST
Last Updated 31 ಜುಲೈ 2022, 6:09 IST
ಹೊಳೆಆಲೂರ ಸಮೀಪದ ಯಾ.ಸ.ಹಡಗಲಿಯಲ್ಲಿ ಗುರುವಾರ ರಾತ್ರಿ ಸುರಿದ ಆಲಿಕಲ್ಲು ಮಳೆಯಿಂದಾಗಿ ಬೆಳೆ ಹಾನಿಯಾಗಿದೆ.
ಹೊಳೆಆಲೂರ ಸಮೀಪದ ಯಾ.ಸ.ಹಡಗಲಿಯಲ್ಲಿ ಗುರುವಾರ ರಾತ್ರಿ ಸುರಿದ ಆಲಿಕಲ್ಲು ಮಳೆಯಿಂದಾಗಿ ಬೆಳೆ ಹಾನಿಯಾಗಿದೆ.   

ಹೊಳೆಆಲೂರ: ಸಮೀಪದ ಯಾ.ಸ.ಹಡಗಲಿಯಲ್ಲಿ ಗುರುವಾರ ರಾತ್ರಿ ಸುರಿದ ಆಲಿಕಲ್ಲು ಮಳೆಯಿಂದಾಗಿ ಅಪಾರ ಹಾನಿ ಸಂಭವಿಸಿದೆ.

ಜಿಲ್ಲೆಯ ಪ್ರಮುಖ ಬೆಳೆಯಾದ ಹೆಸರು, ಮೆಕ್ಕೆಜೋಳ ಸಂಪೂರ್ಣ ಹಾಳಾಗಿದ್ದು ರೈತಾಪಿ ವರ್ಗವನ್ನು ಸಂಕಷ್ಟಕ್ಕೆ ದೂಡಿದೆ. ಕುಂಭ ದ್ರೋಣ ಮಳೆಗೆ ತತ್ತರಿಸಿರುವ ಬೆಳೆಗಳು ಸಂಪೂರ್ಣ ನೆಲಕಚ್ಚಿದ್ದು ರೈತರನ್ನು ಭವಿಷ್ಯದ ಚಿಂತೆಗೆ ತಳ್ಳಿದೆ.

ರೋಣ ತಾಲ್ಲೂಕಿನ ಬೆಳವಣಿಕಿ, ಯಾ.ಸ.ಹಡಗಲಿ, ಹೊಳೆಆಲೂರ, ಸೋಮನಕಟ್ಟಿ, ಅಸೂಟಿ, ಮಾಳವಾಡ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮಳೆಯಿಂದಾಗಿ ಅಪಾರ ಹಾನಿ ಸಂಭವಿಸಿದ್ದು, ರೈತಾಪಿ ವರ್ಗ ತೀವ್ರ ಸಂಕಷ್ಟಕ್ಕೆ ಸಿಲುಕಿದೆ ಎಂದು ರೈತರಾದ ಮಲ್ಲಯ್ಯ ಭಿಕ್ಷಾವತಿಮಠ, ಸಿದ್ದು ಕೆಂಪಶಿ, ಮಹಂತಯ್ಯ ಭಿಕ್ಷಾವತಿಮಠ, ರಮೇಶ್ ವಾಸನದ, ಕಲ್ಲನಗೌಡ ಚನ್ನಪ್ಪಗೌಡ್ರ, ಲಕ್ಷ್ಮಿ ಹಿರೇಮಠ, ಸೋಮಶೇಖರಯ್ಯ ಭಿಕ್ಷವತಿಮಠ, ರಾಜೇಶ್ವರಿ ಭಿಕ್ಷಾವತಿಮಠ, ಗಂಗಾಧರ್ ಯಲಿಗಾರ, ಕಲ್ಲಪ್ಪ ಹಡಪದ, ಮಲ್ಲಪ್ಪ ಕೆಂಪಸಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.