ADVERTISEMENT

ಇಳೆ ತಂಪಾಗಿಸಿದ ಮಳೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 3:47 IST
Last Updated 22 ಸೆಪ್ಟೆಂಬರ್ 2021, 3:47 IST
ಗದಗ ನಗರದಲ್ಲಿ ಮಂಗಳವಾರ ಮಧ್ಯಾಹ್ನ ಸುರಿದ ಮಳೆಯ ನಡುವೆ ಕೊಡೆ ಹಿಡಿದು ಸೈಕಲ್‌ನಲ್ಲಿ ಸಾಗಿದ ಚಿಣ್ಣರು
ಗದಗ ನಗರದಲ್ಲಿ ಮಂಗಳವಾರ ಮಧ್ಯಾಹ್ನ ಸುರಿದ ಮಳೆಯ ನಡುವೆ ಕೊಡೆ ಹಿಡಿದು ಸೈಕಲ್‌ನಲ್ಲಿ ಸಾಗಿದ ಚಿಣ್ಣರು   

ಗದಗ: ಅವಳಿ ನಗರಗಳಾದ ಗದಗ ಬೆಟಗೇರಿಯಲ್ಲಿ ಮಂಗಳವಾರ ಮಧ್ಯಾಹ್ನ ಒಂದು ಗಂಟೆಗೂ ಹೆಚ್ಚು ಸಮಯ ಸಾಧಾರಣ ಮಳೆ ಸುರಿಯಿತು.

ಮಂಗಳವಾರ ಬೆಳಿಗ್ಗೆಯಿಂದಲೂ ಬಿಸಿಲು ಮೋಡಗಳ ನಡುವೆ ಚಿಣ್ಣಾಟ ನಡೆದಿತ್ತು. ನಗರದಲ್ಲಿ ಬೆಳಿಗ್ಗೆ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ 12ರ ನಂತರ ಬಿಸಿಲಿನ ವಾತಾವರಣ ಕಂಡುಬಂತು. ಬಳಿಕ ಆಗಸದಲ್ಲಿ ಮತ್ತೇ ಮೋಡಗಳು ಮೇಳೈಸಿದವು. ವಾತಾವರಣದಲ್ಲಿ ಬದಲಾವಣೆ ಆಗಿ ಮಧ್ಯಾಹ್ನ 2.30ರ ಸುಮಾರಿಗೆ ಮಳೆ ಆರಂಭಗೊಂಡಿತು. ಒಮ್ಮೆ ಬಿರುಸಾಗಿ, ಮತ್ತೊಮ್ಮೆ ತುಂತುರಾಗಿ ಮಳೆ ಸುರಿಯಿತು. ಒಂದು ಗಂಟೆಗೂ ಹೆಚ್ಚು ಸಮಯ ಮಳೆ ಸುರಿದಿದ್ದರಿಂದಾಗಿ ಇಳೆ ತಂಪಾಯಿತು.

ಮಂಗಳವಾರ ಸುರಿದ ಮಳೆ ಮತ್ತೊಮ್ಮೆ ನಗರದಲ್ಲಿರುವ ಚರಂಡಿಗಳ ಅವ್ಯವಸ್ಥೆಯ ದರ್ಶನ ಮಾಡಿಸಿತು. ಕಟ್ಟಿಕೊಂಡಿದ್ದ ಚರಂಡಿಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದ ಕಾರಣ ಅದು ಕೊಳೆಚೆಯನ್ನೆಲ್ಲಾ ರಸ್ತೆಗೆ ತಂದು ಹರವಿತು. ಸಾಕಷ್ಟು ರಸ್ತೆಗಳಲ್ಲಿ ಚರಂಡಿ ತ್ಯಾಜ್ಯ ಹರಡಿಕೊಂಡಿದ್ದು ಕಂಡುಬಂತು.

ADVERTISEMENT

ಸಂಜೆ ನಂತರವೂ ಹನಿ ಮಳೆ ಆಗುತ್ತಿದ್ದರಿಂದ ನಗರದಲ್ಲಿ ಜನಸಂಚಾರ ಕಡಿಮೆ ಆಗಿತ್ತು. ವ್ಯಾಪಾರ ವಹಿವಾಟು ಕೂಡ ಮಂದಗತಿಯಲ್ಲಿ ಸಾಗಿತ್ತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.