ಮುಂಡರಗಿ ತಾಲ್ಲೂಕಿನ ಮುರುಡಿತಾಂಡಾದಲ್ಲಿ ಏಷ್ಯಾ ಕ್ರೀಡಾಕೂಟದ ಸರ್ಫಿಂಗ್ ವಿಭಾಗದಲ್ಲಿ ಕಂಚಿನ ಪದಕ ಪಡೆದ ಸರ್ಫರ್ ರಮೇಶ ಬೂದಿಹಾಳ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು
ಮುಂಡರಗಿ: ‘ಏಷ್ಯಾ ಸರ್ಫಿಂಗ್ ಕ್ರೀಡೆಯಲ್ಲಿ ದೇಶಕ್ಕೆ ಮೊಟ್ಟಮೊದಲ ಪದಕ ಗಳಿಸಿಕೊಟ್ಟಿರುವ ರಮೇಶ ಬೂದಿಹಾಳ ಅವರು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಅವರ ಮುಂದಿನ ಕ್ರೀಡಾ ಸಾಧನೆಗೆ ಸರ್ಕಾರದ ನಿಯಮಾನುಸಾರ ಜಿಲ್ಲಾಡಳಿತ ವತಿಯಿಂದ ಅಗತ್ಯ ನೆರವು ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ತಿಳಿಸಿದರು.
ತಾಲ್ಲೂಕಿನ ಮುರುಡಿತಾಂಡಾದಲ್ಲಿ ಸೋಮವಾರ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಸರ್ಫರ್ ರಮೇಶ ಬೂದಿಹಾಳ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕಿ ನಂದಾ ಹನರಡ್ಡಿ ಮಾತನಾಡಿ, ‘ಗ್ರಾಮೀಣ ಭಾಗದ ಕ್ರೀಡಾ ಪಟು ಇಂದು ಸರ್ಫಿಂಗ್ ಕ್ರೀಡೆಯಲ್ಲಿ ಕಂಚಿನ ಪದಕ ಪಡೆದುಕೊಂಡಿರುವುದು ಶ್ಲಾಘನೀಯ. ಇಲಾಖೆಯ ನಿಯಮಾನುಸಾರ ಅವರಿಗೆ ನೆರವು ನೀಡಲಾಗುವುದು’ ಎಂದು ಭರವಸೆ ನೀಡಿದರು.
ಬಂಜಾರ ಸಮಾಜದ ಕುಮಾರ ಮಹಾರಾಜರು ಮಾತನಾಡಿ, ‘ಮುರುಡಿತಾಂಡಾದಲ್ಲಿ ಹುಟ್ಟಿದ ರಮೇಶ ಅವರು ಇಂದು ದೇಶವೇ ಮೆಚ್ಚವಂತಹ ಸಾಧನೆ ಮಾಡಿದ್ದಾರೆ. ಮುಂಬರುವ ಕ್ರೀಡೆಗಳಲ್ಲಿ ಅವರು ಚಿನ್ನದ ಪದಕ ಗೆಲ್ಲುವಂತಾಗಲಿ’ ಎಂದು ಹಾರೈಸಿದರು.
ಯುವ ಮುಖಂಡ ಮನೋಜ ರಾಠೋಡ, ಎಸ್.ಡಿ. ರಾಠೋಡ, ರತ್ನಪ್ಪ ಮಾನಪ್ಪನಗರ ಮಾತನಾಡಿದರು. ಎಚ್.ಜೆ. ಪವಾರ ಸ್ವಾಗತಿಸಿದರು. ರಾಜು ದಾವಣಗೆರೆ ಪ್ರಾಸ್ತಾವಿಕ ಮಾತನಾಡಿದರು. ಉಮೇಶ ಬೂದಿಹಾಳ ನಿರೂಪಿಸಿ, ಲಕ್ಷ್ಮಣ ಮಾಳಿಗಿಮನಿ ವಂದಿಸಿದರು.
ತಹಶೀಲ್ದಾರ್ ಎರ್ರಿಸ್ವಾಮಿ ಪಿ.ಎಸ್., ತಾಲ್ಲೂಕು ಪಂಚಾಯಿತಿ ಇಒ ವಿಶ್ವನಾಥ ಹೊಸಮನಿ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಅರುಣಾ ಸೋರಗಾವಿ, ಕೃಷ್ಣ ರಾಠೋಡ, ಧನಸಿಂಗ್ ನಾಯಕ, ಸೋಮಲಪ್ಪ ಪವಾರ, ಸುರೇಶ ಮಾಳಗಿಮನಿ, ವಸಂತ ಮಾಳಗಿಮನಿ, ಮಾಹಾಂತೇಶ ಬೂದಿಹಾಳ, ಹನುಮಂತ ಕಡಕೋಳ, ಉಮೇಶ ರಾಠೋಡ, ಮುರೇಶ ಬಣಜಾರ, ಪಾಂಡಪ್ಪ ದೀಪಾವತ, ತುಳಚಪ್ಪ ದೀಪಾವತ, ಸುರೇಶ ಕಾರ್ಬರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.