ADVERTISEMENT

ಗಲಾಟೆ ಮಾಡಿದವರು ಕಾಂಗ್ರೆಸ್‌ ಚೇಲಾಗಳು: ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2021, 5:42 IST
Last Updated 21 ಡಿಸೆಂಬರ್ 2021, 5:42 IST

ಗದಗ: ‘ಮಹಾರಾಷ್ಟ್ರದಲ್ಲಿ ಗಲಾಟೆ ಮಾಡಿದವರಲ್ಲಿ ಕಾಂಗ್ರೆಸ್‌ ಪಕ್ಷದ ಕೆಲವು ಕಿಡಿಗೇಡಿಗಳು, ಚೇಲಾಗಳು ಹಾಗೂ ಅವರಿಗೆ ಬೇಕಿದ್ದ ಕಾರ್ಯಕರ್ತರು ಇದ್ದಾರೆ’ ಎಂದು ಸಚಿವ ಶ್ರೀರಾಮುಲು ಆರೋಪಿಸಿದರು.

ಗದಗ ನಗರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿ, ‘ರಾಷ್ಟ್ರ ನಾಯಕರ ಪುತ್ಥಳಿ
ಗಳಿಗೆ ಹಾನಿ ಮಾಡುವ ಪ್ರಕರಣಗಳು ಹಿಂದಿನಿಂದಲೂ ನಡೆಯುತ್ತಿವೆ. ಇಂತಹವುಗಳನ್ನು ಯಾರು ಮಾಡಿಸುತ್ತಿದ್ದಾರೆ ಎಂಬ ವಿಚಾರ ಬಹಳ ಸ್ಪಷ್ಟವಾಗಿ ಕಾಣಿಸುತ್ತದೆ’ ಎಂದು ಹೇಳಿದರು.

‘ಎಂಇಎಸ್‌ನವರು ಮುಂಚಿ ನಿಂದಲೂ ಪುಂಡಾಟಿಕೆ ಮೆರೆಯುತ್ತಿದ್ದಾರೆ. ಅವರ ಜತೆ ಸೇರಿಕೊಳ್ಳುವ, ಇಂತಹ ಕೃತ್ಯಕ್ಕೆ ಕುಮ್ಮಕ್ಕು ನೀಡುವವರನ್ನೂ ಬಂಧಿಸಲಾಗುವುದು. ಮಹಾರಾಷ್ಟ್ರ ಸಿಎಂ ಪ್ರಚೋದನೆಯೂ ಎಂಇಎಸ್‌ನವರಿಗೆ ಇದೆ’ ಎಂದು ದೂರಿದರು.

ADVERTISEMENT

ಸಿಎಂ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಮುಖ್ಯಮಂತ್ರಿ ಬದಲಾವಣೆ ಕೇವಲ ಊಹಾಪೋಹ. 2023ರ ವಿಧಾನಸಭಾ ಚುನಾವಣೆ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ನಡೆಯಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.