ನರೇಗಲ್: ಸಮೀಪದ ಅಬ್ಬಿಗೇರಿ ಗ್ರಾಮದ ಬಾಲಕರ ಸರ್ಕಾರಿ ಮಾದರಿ ಕೇಂದ್ರ ಶಾಲೆಯಲ್ಲಿ 18 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿ 1998ರಲ್ಲಿ ನಿವೃತ್ತಿ ಹೊಂದಿದ್ದ ಶಿಕ್ಷಕ ವಿರೂಪಾಕ್ಷಪ್ಪ ಬಳಗೇರಿ ಅವರು ₹1 ಲಕ್ಷ ಹಣವನ್ನು ಶಾಲೆಗೆ ಸೋಮವಾರ ದೇಣಿಗೆಯಾಗಿ ನೀಡಿದರು.
ವಿರೂಪಾಕ್ಷಪ್ಪ ಬಳಗೇರಿ ಮಾತನಾಡಿ, ‘ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟು ಅದರ ಬಡ್ಡಿ ಹಣವನ್ನು ಬಹುಮಾನ ರೂಪದಲ್ಲಿ ವಿದ್ಯಾರ್ಥಿಗಳಿಗೆ ನೀಡಬೇಕು. ಶಿಕ್ಷಕನ ಪಾತ್ರ ಕೇವಲ ಪಾಠ ಹೇಳುವುದು ಮಾತ್ರವಲ್ಲದೇ ಶಾಲೆ ಅಭಿವೃದ್ದಿಗೊಳ್ಳುವಂತೆ ಜಾಗೃತಿ ವಹಿಸಬೇಕು’ ಎಂದರು.
ದೇಣಿಗೆ ನೀಡಿದ ನಿವೃತ್ತ ಶಿಕ್ಷಕರನ್ನು ಸೋಮವಾರ ಗ್ರಾಮದ ಹಿರಿಯರು ಸನ್ಮಾನಿಸಿ ಗೌರವಿಸಿದರು. ನಿವೃತ್ತ ಬಿಇಒ ಶಂಕರ ಹೂಗಾರ, ಬಸವರಾಜ ವೀರಾಪುರ, ಎಸ್‌ಡಿಎಂಸಿ ಅಧ್ಯಕ್ಷ ಡಿ.ಬಿ. ಬಿಲ್ಲರ, ಉಪಾಧ್ಯಕ್ಷೆ ಬಿ.ಎಸ್. ತೆಗ್ಗಿನಕೇರಿ, ಸದಸ್ಯೆ ಅನ್ನಪೂರ್ಣ ಹಂಚಿನಾಳ, ಕೆಜಿಎಸ್ ಶಾಲೆಯ ಮುಖ್ಯ ಶಿಕ್ಷಕ ಡಿ.ಎಚ್. ಪರಂಗಿ, ಆರ್.ವಿ. ಬೆಲ್ಲದ, ಆರ್.ಡಿ. ರಂಗಣ್ಣವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.