ADVERTISEMENT

ಗಜೇಂದ್ರಗಡ | ಕ್ರಾಂತಿಯ ಕಿಡಿ ವಡ್ಡರ ಯಲ್ಲಣ್ಣ: ಸೋಂಪೂರ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 8:16 IST
Last Updated 31 ಜನವರಿ 2026, 8:16 IST
ಗಜೇಂದ್ರಗಡದ ಕಾಲಕಾಲೇಶ್ವರ ವೃತ್ತದಲ್ಲಿ ಕ್ರಾಂತಿವೀರ ಬೆಳವಡಿಯ ವಡ್ಡರ ಯಲ್ಲಣ್ಣ ಜಯಂತಿ ಆಚರಿಸಲಾಯಿತು
ಗಜೇಂದ್ರಗಡದ ಕಾಲಕಾಲೇಶ್ವರ ವೃತ್ತದಲ್ಲಿ ಕ್ರಾಂತಿವೀರ ಬೆಳವಡಿಯ ವಡ್ಡರ ಯಲ್ಲಣ್ಣ ಜಯಂತಿ ಆಚರಿಸಲಾಯಿತು   

ಗಜೇಂದ್ರಗಡ: ‘ನಾಡ ರಕ್ಷಣೆಗೆ ಹೋರಾಡುವುದರ ಜೊತೆಗೆ ಯುವಕರಲ್ಲಿ ನಾಡಿಪ್ರೇಮ ಹೆಚ್ಚಿಸಿ ದಂಡು ಕಟ್ಟಿಕೊಂಡು ಹೋರಾಟ ನಡೆಸಿದ ಅಪ್ರತಿಮ ವೀರ, ಕ್ರಾಂತಿಯ ಕಿಡಿ ಬೆಳವಡಿಯ ವಡ್ಡರ ಯಲ್ಲಣ್ಣನ ಕುರಿತು ಹಲವರಿಗೆ ತಿಳಿಯದಿರುವುದು ಬೇಸರದ ಸಂಗತಿʼ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದ ಅಧ್ಯಕ್ಷ ಹೆಚ್.ಎಸ್.ಸೋಂಪೂರ ಹೇಳಿದರು.

ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಭೋವಿ ಸಮಾಜ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದ ವತಿಯಿಂದ ಬುಧವಾರ ನಡೆದ ಕ್ರಾಂತಿವೀರ ಬೆಳವಡಿಯ ವಡ್ಡರ ಯಲ್ಲಣ್ಣ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

‘ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಹಲವು ಮಹನೀಯರು ತ್ಯಾಗ, ಬಲಿದಾನ ನೀಡಿದ್ದಾರೆ. ಅಂಥವರ ಸಾಲಿನಲ್ಲಿ ವಡ್ಡರ ಯಲ್ಲಣ್ಣ ಅಗ್ರಗಣ್ಯನಾಗಿದ್ದು, ಆತನ ಕುರಿತು ಸಂಶೋಧನೆಗಳು ನಡೆಯಬೇಕಿದೆ. ಈ ಕುರಿತು ಸರ್ಕಾರ ಕ್ರಮ ಕೈಗೊಳ್ಳಬೇಕುʼ ಎಂದು ಆಗ್ರಹಿಸಿದರು.

ADVERTISEMENT

ಪುರಸಭೆ ಮಾಜಿ ಅಧ್ಯಕ್ಷ ಸುಭಾಸ ಮ್ಯಾಗೇರಿ, ಮಾಜಿ ಸದಸ್ಯ ರಾಜು ಸಾಂಗ್ಲೀಕರ, ಸಮಾಜದ ಮುಖಂಡರಾದ ಯಲ್ಲಪ್ಪ ಬಂಕದ, ಬಸವರಾಜ ಬಂಕದ, ಮಾರುತಿ ಕಲ್ಲೊಡ್ಡರ, ಶರಣಪ್ಪ ರೇವಡಿ, ಮುದಿಯಪ್ಪ ಮುಧೋಳ, ಶರಣಪ್ಪ ಚಳಗೇರಿ, ವೆಂಕಟೇಶ ಬಂಕದ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.