ADVERTISEMENT

ಕವಿತೆಯ ಅಂದ ಹೆಚ್ಚುಸುವ ಪ್ರಾಸ: ಇಳೆ-ಮಳೆ ಕುರಿತ ಕವಿಗೋಷ್ಠಿಯಲ್ಲಿ ಪೊಲೀಸ್‌ ಪಾಟೀಲ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 5:22 IST
Last Updated 16 ಅಕ್ಟೋಬರ್ 2025, 5:22 IST
ಮುಂಡರಗಿ ತಾಲ್ಲೂಕು ಕಸಾಪ ಹಾಗೂ ಶರಣ ಸಾಹಿತ್ಯ ಪರಿಷತ್ತುಗಳು ಕ.ರಾ.ಬೆಲ್ಲದ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಇಳೆ-ಮಳೆ ಕವಿಗೋಷ್ಠಿಯನ್ನು ಆರ್.ಎಲ್.ಪೊಲೀಸ್‌ ಪಾಟೀಲ ಉದ್ಘಾಟಿಸಿದರು
ಮುಂಡರಗಿ ತಾಲ್ಲೂಕು ಕಸಾಪ ಹಾಗೂ ಶರಣ ಸಾಹಿತ್ಯ ಪರಿಷತ್ತುಗಳು ಕ.ರಾ.ಬೆಲ್ಲದ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಇಳೆ-ಮಳೆ ಕವಿಗೋಷ್ಠಿಯನ್ನು ಆರ್.ಎಲ್.ಪೊಲೀಸ್‌ ಪಾಟೀಲ ಉದ್ಘಾಟಿಸಿದರು   

ಮುಂಡರಗಿ: 'ಸ್ವಾನುಭವ ಹಾಗೂ ತನ್ನ ಸುತ್ತಮುತ್ತ ಜರುಗುವ ಸಂಗತಿಗಳ ಸೂಕ್ಷ್ಮತೆ ಗಮನಿಸುವ ಕವಿಗಳ ಕವಿತೆಗಳು ಓದುಗರಿಗೆ ಮುದ ನೀಡುತ್ತವೆ. ಪ್ರಾಸಗಳ ಜೊತೆಗೆ ಅಕ್ಷರ ಜೋಡಣೆಯು ಕವಿತೆಗಳ ಅಂದವನ್ನು ಹೆಚ್ಚಿಸುತ್ತವೆ' ಎಂದು ಹಿರಿಯ ಸಾಹಿತಿ ಆರ್.ಎಲ್.ಪೋಲಿಸ್‌ ಪಾಟೀಲ ತಿಳಿಸಿದರು.

ತಾಲ್ಲೂಕು ಕಸಾಪ ಹಾಗೂ ಶರಣ ಸಾಹಿತ್ಯ ಪರಿಷತ್ತುಗಳು ಸೋಮವಾರ ಇಲ್ಲಿಯ ಕ.ರಾ.ಬೆಲ್ಲದ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 'ಇಳೆ-ಮಳೆ' ಕುರಿತ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾರನಾಡಿದರು.

ಶ್ರೇಷ್ಟ ಸಾಹಿತ್ಯ ಜನಪದರ ಅಂಗಳದಲ್ಲಿ ಹುಟ್ಟುತ್ತದೆ. ಬರಿಗಣ್ಣಿನಿಂದ ಕಂಡದ್ದನ್ನು ಒಳಗಣ್ಣಿನಿಂದ ಆಸ್ವಾಧಿಸಿ ಅದ್ದನ್ನು ಅಕ್ಷರ ರೂಪಕ್ಕಿಳಿಸುವುದು ಸವಾಲಿನ ಕೆಲಸವಾಗಿದ್ದು, ಶ್ರೇಷ್ಟ ಕವಿಗಳು ಮಾತ್ರ ಅದನ್ನು ಸಾಧಿಸಬಲ್ಲರು ಎಂದು ಅಭಿಪ್ರಾಯಪಟ್ಟರು.

ADVERTISEMENT

ಪ್ರಾಚಾರ್ಯ ಸಂತೋಷ ಹಿರೇಮಠ ಮಾತನಾಡಿ, ಓದು, ಬರಹ ಬಲ್ಲವರೆಲ್ಲ ಬರೆದ ಕವಿತೆಗಳು ಕವಿತೆಗಳಾಗಲಾರವು. ಭಾವನೆಗಳನ್ನು ಅಚ್ಚು ಕಟ್ಟಾಗಿ ಅಕ್ಷರ ರೂಪದಲ್ಲಿ ಸೆರೆ ಹಿಡಿದಾಗ ಮಾತ್ರ ಅದು ಉತ್ತಮ ಕಾವ್ಯವಾಗಬಲ್ಲದು ಎಂದು ತಿಳಿಸಿದರು.

ಕಸಾಪ ತಾಲ್ಲೂಕು ಘಟಕದ ಅದ್ಯಕ್ಷ ಎಂ.ಜಿ.ಗಚ್ಚಣ್ಣವರ ಮಾತನಾಡಿ, ತಾಲ್ಲೂಕಿನ ಎಲ್ಲ ಸಾಹಿತ್ಯಾಸಕ್ತರ ನೆರವಿನಿಂದ ವರ್ಷದುದ್ದಕ್ಕೂ ವಿವಿಧ ಕಾರ್ಯಕ್ರಮಗಳನ್ನು ನೆರವೇರಿಸಲು ಸಾದ್ಯವಾಗಿದೆ ಎಂದು ಹರ್ಷವ್ಯಕ್ತಪಡಿಸಿದರು.

ನಿಂಗು ಸೊಲಗಿ ಮಾತನಾಡಿದರು. ಹಿರಿಯ ಕವಿ ಶಂಕರ ಕುಕನೂರ ಅವರು ಕವಿಗೋಷ್ಠಿಯ ನೇತೃತ್ವ ವಹಿಸಿಕೊಂಡಿದ್ದರು. 16ಕವಿಗಳು 'ಇಳೆ-ಮಳೆ' ಕುರಿತು ಕವನ ವಾಚಿಸಿದರು.

ರಮೇಶಗೌಡ ಪಾಟೀಲ ಪ್ರಾರ್ಥಿಸಿದರು. ಮಂಜುನಾಥ ಮುಧೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀಣಾ ಪಾಟೀಲ ನಿರೂಪಿಸಿದರು. ಎಂ.ಐ.ಮುಲ್ಲಾ ವಂದಿಸಿದರು.

ಸಿ.ಕೆ.ಗಣಪ್ಪನವರ, ಸುರೇಶ ಬಾವಿಹಳ್ಳಿ, ಕೃಷ್ಣಾ ಸಾವುಕಾರ, ಮಂಜುಳಾ ಇಟಗಿ, ಪಾಲಾಕ್ಷಿ ಗಣದಿನ್ನಿ‌, ಶೋಭಾ ಮೇಟಿ, ಎಂ.ಎನ್.ಶಿರನಹಳ್ಳಿ, ರವಿ ದೇವರೆಡ್ಡಿ, ಸಂತೋಷ ಮುರುಡಿ, ಗಿರಿಜಾ ಸೂಡಿ, ಕಳಕಪ್ಪ ಜಲ್ಲಿಗೇರಿ, ಕೊಟ್ರೇಶ ಜವಳಿ,ಮೊಹನ ಪಾಟೀಲ, ಈರಣ್ಣ ಸೊರಟೂರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.