
ಮುಂಡರಗಿ: ‘ವಿಜ್ಞಾನ, ತಂತ್ರಜ್ಞಾನ ಕೇತ್ರ ಅಗಾಧವಾಗಿ ಬೆಳೆದಿದ್ದು, ಸಾಕಷ್ಟು ಉದ್ಯೋಗವಕಾಶ ಸೃಷ್ಟಿಯಾಗುತ್ತಲಿವೆ. ವಿದ್ಯಾರ್ಥಿಗಳು ವಿಜ್ಞಾನ ವಿಷಯದಲ್ಲಿ ಆಸಕ್ತಿ ಹೊಂದಿ ಉತ್ತಮ ಸಾಧನೆ ಮಾಡಬೇಕು’ ಎಂದು ಮಾಜಿ ಸಚಿವ ಎಸ್.ಎಸ್. ಪಾಟೀಲ ಹೇಳಿದರು.
ಸ್ಥಳೀಯ ಜಗದ್ಗುರು ತೋಂಟದಾರ್ಯ ಸಿಬಿಎಸ್‌ಸಿ ವಸತಿ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮಾತನಾಡಿದ ಅವರು, ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಮಾದರಿಗಳು ಅದ್ಭುತವಾಗಿವೆ. ಶಿಕ್ಷಕರು ಆಸಕ್ತ ವಿದ್ಯಾರ್ಥಿಗಳನ್ನು ಗುರುತಿಸಿ ವಿಶೇಷ ತರಬೇತಿ ನೀಡಬೇಕು’ ಎಂದು ಸೂಚಿಸಿದರು.
ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ, ಶಾಲಾ ಆಡಳಿತ ಮಂಡಳಿಯ ಹಿರಿಯ ಸದಸ್ಯ ಕೊಟ್ರೇಶಪ್ಪ ಅಂಗಡಿ ಮಾತನಾಡಿದರು. ವಿದ್ಯಾರ್ಥಿಗಳು ತಯಾರಿಸಿದ ಇಸ್ರೋ ಚಂದ್ರಯಾನ, ಸಾಲುಮರದ ತಿಮ್ಮಕ್ಕ ವೃಕ್ಷ ಸಂತತಿ, ವ್ಶೆಜ್ಞಾನಿಕ ಸಾರಿಗೆ ನಿಯಮ, ಪವನ ವಿದ್ಯುತ್ ಶಕ್ತಿ, ಮಾನವನ ದೇಹ ರಚನಾ ಕ್ರೀಯೆ, ಕಪ್ಪತಗುಡ್ಡ ಮೊದಲಾದ ವಿಜ್ಞಾನ ಮಾದರಿಗಳು ವೀಕ್ಷಕರ ಗಮನ ಸೆಳೆದವು.
ಹೇಮಗಿರೀಶ ಹಾವಿನಾಳ, ಈಶ್ವರಪ್ಪ ಬೆಟಗೇರಿ, ನವೀನಕುಮಾರ ಎಸ್.ಬಿ., ಹನುಮೇಶ ನಡಕಟ್ಟಿನ, ಪ್ರಾಚಾರ್ಯ ಶರಣಕುಮಾರ ಬುಗುಟಿ, ವೀರೇಶ ಕುಬಸದ, ಗಿರೀಶ ಅನಗೌಡರ, ಸ್ನೇಹಾ, ಗೀತಾ, ಶರಾವತಿ, ಚೇತನಾ, ಸುವರ್ಣಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.