ADVERTISEMENT

ದುಡಿಮೆಯ ಒಂದು ಭಾಗ ದಾನಕ್ಕೆ ಮೀಸಲಿಡಿ: ರಡ್ಡೇರ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2024, 15:58 IST
Last Updated 12 ಆಗಸ್ಟ್ 2024, 15:58 IST
ಮುಂಡರಗಿಯ ವೆಂಕಟೇಶ್ವರ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು
ಮುಂಡರಗಿಯ ವೆಂಕಟೇಶ್ವರ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು   

ಮುಂಡರಗಿ: ‘ದಾನ ಮಾಡುವುದು ಸತ್ಕಾರ್ಯವಾಗಿದ್ದು, ಸಮಾಜದಲ್ಲಿ ಸಾವಿರಾರು ಕುಟುಂಬಗಳು ದಾನಿಗಳು ನೀಡುವ ದೇಣಿಗೆಯನ್ನು ಅವಲಂಬಿಸಿವೆ. ನಾವೆಲ್ಲ ಪ್ರತಿವರ್ಷ ನಮ್ಮ ದುಡಿಮೆಯ ಶೇ 35ರಷ್ಟು ಭಾಗವನ್ನು ದಾನ, ಧರ್ಮಕ್ಕೆ ಮೀಸಲಿಡಬೇಕು’ ಎಂದು ನಿವೃತ್ತ ಡಿಡಿಪಿಐ ಎಂ.ಎ.ರಡ್ಡೇರ ತಿಳಿಸಿದರು.

ರಡ್ಡಿ ಬಳಗವು ಪಟ್ಟಣದ ಬೃಂದಾವನ ವೃತ್ತದಲ್ಲಿರುವ ವೆಂಕಟೇಶ್ವರ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.

‘ನಮ್ಮ ನಾಡಿನಲ್ಲಿ ಬಾಳಿಹೋದ ಶರಣರು, ಸಂತರು, ಮಹಾತ್ಮರು ನಾವು ಹೇಗೆ ಬದುಕಬೇಕು ಎನ್ನುವುದನ್ನು ತಿಳಿಸಿದ್ದಾರೆ. ಕುಟುಂಬವನ್ನು ನಿರ್ವಹಿಸುವ, ಎಲ್ಲರನ್ನೂ ಪ್ರೀತಿ, ಗೌರವದಿಂದ ಕಾಣುವ, ದಾನ ಮಾಡುವ ಬಗೆಯನ್ನು ಶರಣೆ ಹೇಮರಡ್ಡಿ ಮಲ್ಲಮ್ಮ ತಿಳಿಸಿಕೊಟ್ಟಿದ್ದಾರೆ’ ಎಂದರು.

ADVERTISEMENT

ಭೂಮಿಕಾ ರಾಜೂರ ಮಾತನಾಡಿ, ‘ವಿಶೇಷ ಸಾಧನೆ ಮಾಡಿದ ಮಹನೀಯರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಮಾಜ ಗುರುತಿಸಿ ಸನ್ಮಾನ ಮಾಡುತ್ತಿರುವುದು ಸಂತಸದ ಸಂಗತಿ. ಇದು ಇತರರಿಗೂ ಸಾಧನೆ ಮಾಡಲು ಪ್ರೇರಣೆಯಾಗುತ್ತದೆ’ ಎಂದು ತಿಳಿಸಿದರು.

ಅಭಿಷೇಕ ಶೀರನಹಳ್ಳಿ, ಲಕ್ಷ್ಮಿ ಮಂಟಗಣಿ, ಶಿಲ್ಪಾ ಚನ್ನಳ್ಳಿ, ಅರುಣಾ ಶೀರನಹಳ್ಳಿ, ಸಂಗೀತಾ ಕಬ್ಬೇರಹಳ್ಳಿ, ಪೃಥ್ವಿ ಕಬ್ಬೇರಹಳ್ಳಿ, ಆದರ್ಶ ಮಾಲಿಪಾಟೀಲ, ಸಂಕಲ್ಪ ಪಾಟೀಲ, ಶಾಂತಾ ಇಮ್ರಾಪೂರ ಅವರನ್ನು ಸನ್ಮಾನಿಸಲಾಯಿತು.

ನಿವೃತ್ತ ಮುಖ್ಯ ಶಿಕ್ಷಕ ಎಸ್.ಎಸ್.ಗಡ್ಡದ, ಶಿಕ್ಷಕ ಎಸ್.ಕೆ.ರಾಜೂರ, ರಾಜ್ಯ ರಡ್ಡಿ ಸಮಾಜದ ಉಪಾಧ್ಯಕ್ಷ ಕೆ.ವಿ.ಹಂಚಿನಾಳ, ಪ್ರಗತಿಪರ ರೈತ ಈಶ್ವರಪ್ಪ ಹಂಚಿನಾಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.