ADVERTISEMENT

ಶರಣರ ಚಿಂತನೆ ನಿತ್ಯ ನೂತನ: ಗಂಗಾಧರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 11:38 IST
Last Updated 24 ಜೂನ್ 2025, 11:38 IST
ರೋಣ ಪಟ್ಟಣದಲ್ಲಿ ನಡೆದ ಮೌನಯೋಗಿ ಮಲ್ಲಯ್ಯಜ್ಜನವರ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಕೊತಬಾಳ ಅಂಕಲಗಿ ಮಠದ ಗಂಗಾಧರ ಸ್ವಾಮೀಜಿ ಮತ್ತು ರೋಣ ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ ಪಾಲ್ಗೊಂಡಿದ್ದರು
ರೋಣ ಪಟ್ಟಣದಲ್ಲಿ ನಡೆದ ಮೌನಯೋಗಿ ಮಲ್ಲಯ್ಯಜ್ಜನವರ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಕೊತಬಾಳ ಅಂಕಲಗಿ ಮಠದ ಗಂಗಾಧರ ಸ್ವಾಮೀಜಿ ಮತ್ತು ರೋಣ ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ ಪಾಲ್ಗೊಂಡಿದ್ದರು   

ರೋಣ: ‘ಧಾರ್ಮಿಕ ಚಿಂತನೆಗಳ ಮೂಲಕ ಜನಮಾನಸದಲ್ಲಿ ಅಜರಾಮರವಾಗಿ ಉಳಿದುಕೊಂಡಿರುವ ಶರಣರ ಚಿಂತನೆಗಳು ಇಂದಿಗೂ ಸಹ ನಿತ್ಯ ನೂತನವಾಗಿವೆ’ ಎಂದು ಕೊತಬಾಳ ಅಂಕಲಗಿ ಅಡಿವಿ ಸಿದ್ದೇಶ್ವರ ಮಠದ ಗಂಗಾಧರ ಸ್ವಾಮೀಜಿ ಹೇಳಿದರು.

ಪಟ್ಟಣದ ವಿರುಪಾಕ್ಷಪ್ಪ ಪೂಜಾರ ಇವರ ನಿವಾಸದಲ್ಲಿ ಮಂಗಳವಾರ ನಡೆದ ಮೌನಯೋಗಿ ಮಲ್ಲಯ್ಯಜ್ಜನವರ 10ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಬೆಳಿಗ್ಗೆ 6 ಗಂಟೆಗೆ ರುದ್ರಾಭಿಷೇಕ, ಮಧ್ಯಾಹ್ನ 12 ಗಂಟೆಗೆ ಪುಣ್ಯಾರಾಧನೆಯ ಸಕಲ ವಿಧಿ ವಿಧಾನಗಳು ನೆರವೇರಿದ ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು.

ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ, ಶಿವಾನಂದ ಮಠದ ಶ್ರವಣಕುಮಾರ ಸ್ವಾಮೀಜಿ, ಶೇಖರಯ್ಯಸ್ವಾಮಿ ಮಲಕಸಮುದ್ರಮಠ, ತೋಟಪ್ಪ ನವಲಗುಂದ, ಶಿವಣ್ಣ ನವಲಗುಂದ, ಅಬ್ದುಲ್‌ಸಾಬ ಹೊಸಮನಿ, ರಾಜಣ್ಣ ಸುಂಕದ, ರಾಜಣ್ಣ ಗಿರಡ್ಡಿ, ವಿರುಪಾಕ್ಷಪ್ಪ ಪೂಜಾರ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.