ADVERTISEMENT

ಲಕ್ಷ್ಮೇಶ್ವರ | ಆಕಸ್ಮಿಕ ಬೆಂಕಿಗೆ ತಗಡಿನ ಶೆಡ್ ಆಹುತಿ: ಅಪಾರ ನಷ್ಟ

​ಪ್ರಜಾವಾಣಿ ವಾರ್ತೆ
Published 28 ಜನವರಿ 2025, 15:17 IST
Last Updated 28 ಜನವರಿ 2025, 15:17 IST
ಲಕ್ಷ್ಮೇಶ್ವರ ತಾಲ್ಲೂಕಿನ ಬಟ್ಟೂರು ಗ್ರಾಮದಲ್ಲಿ ಮಂಗಳವಾರ ಆಕಸ್ಮಿಕ ಬೆಂಕಿಗೆ ಆಹುತಿಯಾದ ತಗಡಿನ ಶೆಡ್‍ನ ಮನೆ
ಲಕ್ಷ್ಮೇಶ್ವರ ತಾಲ್ಲೂಕಿನ ಬಟ್ಟೂರು ಗ್ರಾಮದಲ್ಲಿ ಮಂಗಳವಾರ ಆಕಸ್ಮಿಕ ಬೆಂಕಿಗೆ ಆಹುತಿಯಾದ ತಗಡಿನ ಶೆಡ್‍ನ ಮನೆ   

ಲಕ್ಷ್ಮೇಶ್ವರ: ತಾಲ್ಲೂಕಿನ ಬಟ್ಟೂರು ಗ್ರಾಮದ ಚನ್ನಬಸವ್ವ ಫಕ್ಕೀರಪ್ಪ ಬಾರ್ಕಿ ಅವರಿಗೆ ಸೇರಿದ ತಗಡಿನ ಮನೆ ಸುಟ್ಟು ಭಸ್ಮವಾಗಿದ್ದು ಮನೆಯಲ್ಲಿದ್ದ ಚಿನ್ನ, ಬೆಳ್ಳಿಯ ಆಭರಣಗಳು, ಕಟ್ಟಿಗೆ ಪೀಠೋಪಕರಣಗಳು, ಕಪಾಟುಗಳು, ದವಸ ಧಾನ್ಯಗಳು, ಪಾತ್ರೆಗಳು, ಕೃಷಿ ಸಲಕರಣೆಗಳು ಸುಟ್ಟು ಲಕ್ಷಾಂತರ ರೂಪಾಯಿ ಹಾನಿ ಉಂಟಾಗಿದೆ.

ಎರಡು ಮೂರು ದಿನದ ಹಿಂದೆ ಸಂಘದಲ್ಲಿ ಸಾಲ ಮಾಡಿ ತಂದಿದ್ದ ಹಣವನ್ನು ಮನೆಯಲ್ಲಿ ಇಟ್ಟಿದ್ದು ಅದೂ ಸಹ ಬೆಂಕಿಗೆ ಆಹುತಿಯಾಗಿದೆ.

‘ನಾವು ಕೂಲಿ ಕೆಲಸಕ್ಕೆ ಹೋದಾಗ ಯಾವ ರೀತಿ ಬೆಂಕಿ ತಾಗಿದೆಯೋ ಗೊತ್ತಿಲ್ಲ. ನಾವು ತಗಡಿನ ಶೆಡ್‍ನಲ್ಲಿ ಬದುಕು ಸಾಗಿಸುತ್ತಿದ್ದೇವೆ. ಆದರೆ ಈವರೆಗಾದರೂ ನಮಗೆ ಆಶ್ರಯ ಮನೆ ಕೊಟ್ಟಿಲ್ಲ’ ಎಂದು ಮನೆ ಮಾಲೀಕ ಫಕ್ಕೀರಪ್ಪ ನೋವು ವ್ಯಕ್ತಪಡಿಸಿದರು.

ADVERTISEMENT

ವಿಷಯ ತಿಳಿಯುತ್ತಿದ್ದಂತೆ ಗ್ರಾಮ ಲೆಕ್ಕಾಧಿಕಾರಿ ಗುರುರಾಜ ಹವಳದ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.