ಶಿರಹಟ್ಟಿ: ತಾಲ್ಲೂಕಿನ ಹೊಳೆ-ಇಟಗಿ ಗ್ರಾಮದಲ್ಲಿ ಚಿಕ್ಕೋಡಿ ಮೂಲದ ಕುರಿಗಾಹಿ ಮಣಿಗಿನಿ ಪೂಜಾರಿ ಹಾಗೂ ಯಲ್ಲವ್ವ ಪೂಜಾರಿ ಎಂಬುವರು ಕುರಿಗಳು ವಿಷಪೂರಿತ ಆಹಾರ ಸೇವಿಸಿ ಸಾವನ್ನಪ್ಪಿದ್ದು, ಕುರಿಗಾಹಿಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ತಾಲ್ಲೂಕು ಕುರುಬ ಸಂಘದಿಂದ ತಹಶೀಲ್ದಾರ್ ಕೆ.ರಾಘವೇಂದ್ರ ರಾವ್ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಸಂತೋಷ ಕುರಿ, ರಾಮಣ್ಣ ಕಂಬಳಿ ಮಾತನಾಡಿ, ‘ತಾಲ್ಲೂಕಿನ ಹೊಳೆ-ಇಟಗಿ ಗ್ರಾಮದಲ್ಲಿ ಅ.5ರಂದು ವಿಷಪೂರಿತ ಆಹಾರ ಸೇವಿಸಿ ಸುಮಾರು 60 ಕುರಿಗಳು ಸಾವನ್ನಪ್ಪಿವೆ. ಕುರಿಗಾಹಿಗಳಿಗೆ ಕೂಡಲೇ ವಿಶೇಷ ಅನುದಾನದಡಿ ₹ 15 ಲಕ್ಷ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.
ತಹಶೀಲ್ದಾರ್ ಕೆ. ರಾಘವೇಂದ್ರ ರಾವ್, ಘಟನಾ ಸ್ಥಳಕ್ಕೆ ಭೇಟಿ ನೀಡಲಾಗಿದ್ದು, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಅನುಗ್ರಹ ಯೋಜನೆಯಡಿಯಲ್ಲಿ ತಲಾ ₹7500 ಪರಿಹಾರ ನೀಡಲಾಗುವುದು’ ಎಂದು ಭರವಸೆ ನೀಡಿದರು.
ಸಿದ್ದಪ್ಪ ಸ್ವಾಮಿ, ದೇವಪ್ಪ ಪೂಜಾರ, ವೀರುಪಾಕ್ಷಯ್ಯ ಹಿರೇಮಠ, ಸಚಿನ್ ಜಡಿಯವರ, ರಾಮಣ್ಣ ಬಟ್ಟೂರ, ಶಿವು ಕರಿಗಾರ, ಕಿರಣ್ ಕಟ್ಟೇಕಾರ, ಕಾರ್ತಿಕ ಗೋದಿ, ಪರಸುರಾಮ ಹುಬ್ಬಳ್ಳಿ, ಮಂಜುನಾಥ, ಠಾಣಾಜಿ ಬಿಡವೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.