
ಶಿರಹಟ್ಟಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಸೇರಿದಂತೆ 8 ಸ್ಥಾನಗಳಿಗೆ /// ಅವಿರೋಧ ಆಯ್ಕೆ ನಡೆಯಿತು.
ಇಲ್ಲಿನ ನಿರೀಕ್ಷಣಾ ಮಂದಿರದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಮಹದೇವಪ್ಪ ಮಲ್ಲೇಶಪ್ಪ ಸ್ವಾಮಿ, ಉಪಾಧ್ಯಕ್ಷ–ನಿಂಗಪ್ಪ ಮೈಲಾರಪ್ಪ ಹಮ್ಮಿಗಿ, ಪ್ರಧಾನ ಕಾರ್ಯದರ್ಶಿ–ರಾಘವೇಂದ್ರ ನರಸಿಂಹ ಕುಲಕರ್ಣಿ, ಕಾರ್ಯದರ್ಶಿ–ಪ್ರದೀಪಕುಮಾರ ಎಸ್. ಗೊಡಚಪ್ಪನವರ, ಖಜಾಂಚಿ–ಭರಮಪ್ಪ ಕರಿಯಪ್ಪ ಬಳೂಟಗಿ, ಕಾರ್ಯಕಾರಿಣಿ ಸದಸ್ಯರಾಗಿ ವೀರೇಶ ಎಸ್. ಉಮನಾಬಾದಿ, ನೀಲಕಂಠಪ್ಪ ಪ್ರಕಾಶ ನಾಗಶೆಟ್ಟಿ, ಉದಯಕುಮಾರ ಹಣಗಿ ಆಯ್ಕೆಯಾದರು.
ನೂತನ ಅಧ್ಯಕ್ಷ ಮಹದೇವಪ್ಪ ಸ್ವಾಮಿ ಮಾತನಾಡಿ, ‘ಮುಂಬರುವ ದಿನಗಳಲ್ಲಿ ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘದ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಪತ್ರಕರ್ತರ ಅಹವಾಲುಗಳಿಗೆ ಸ್ಪಂದಿಸಲು ಬದ್ದ’ ಎಂದು ಭರವಸೆ ನೀಡಿದರು.
ಚುನಾವಣಾಧಿಕಾರಿಯಾಗಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಅರುಣಕುಮಾರ ಹಿರೇಮಠ, ಸಹಾಯಕ ಚುನಾವಣಾ ಅಧಿಕಾರಿಗಳಾಗಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಮಲ್ಲು ಕಳಸಾಪೂರ ಹಾಗೂ ಸಂತೋಷ ಮುರಡಿ ಕಾರ್ಯನಿರ್ವಹಿಸಿದರು.
ಪತ್ರಕರ್ತರಾದ ಚಂದ್ರು ಕುಸ್ಲಾಪೂರ,ಜಿ.ಬಿ. ಹೆಸರೂರ, ಎ.ಎಚ್. ಖಾಜಿ, ಪ್ರಕಾಶ ಮೇಟಿ, ಮಂಜುನಾಥ ಆರೆಪಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.