ADVERTISEMENT

ಶಿರಹಟ್ಟಿ | ರಾಷ್ಟ್ರ ಹಾಕಿ ತಂಡಕ್ಕೆ ನೇಹಾ ಮುಟಗಾರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 7:32 IST
Last Updated 2 ಆಗಸ್ಟ್ 2025, 7:32 IST
ನೇಹಾ ಮುಟಗಾರ
ನೇಹಾ ಮುಟಗಾರ   

ಶಿರಹಟ್ಟಿ: ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಶಂಕರ ಮುಟಗಾರ ಅವರ ಮಗಳು ನೇಹಾ ಮುಟಗಾರ ಆಂಧ್ರ ಪ್ರದೇಶದ ಕಾಕಿಯಲ್ಲಿ ನಡೆಯಲಿರುವ 15ನೇ ಇಂಡಿಯಾ ಜ್ಯೂನಿಯರ್ ವುಮೇನ್ ನ್ಯಾಷನಲ್ ಚಾಂಪಿಯನ್-2025 ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ನೇಹಾ ಮುಟಗಾರ ಪ್ರಸ್ತುತ ಮಡಿಕೇರಿಯಲ್ಲಿ ದ್ವೀತಿಯ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದು, ಸ್ಪೋರ್ಟ್ಸ್ ಅಥೋರಿಟಿ ಆಫ್ ಇಂಡಿಯಾ (ಎಸ್ಎಐ) ವಸತಿ ನಿಲಯದಲ್ಲಿ ಕ್ರೀಡಾ ತರಬೇತಿ ಪಡೆಯುತ್ತಿದ್ದಾರೆ. ಜುಲೈ 8ರಂದು ಬೆಂಗಳೂರಿನ ಹಾಕಿ ಕರ್ನಾಟಕ ಕ್ರೀಡಾಂಗಣದಲ್ಲಿ ನಡೆದ ನ್ಯಾಷನಲ್ ಕೋಚಿಂಗ್‌ನಲ್ಲಿ ಭಾಗವಹಿಸಿ ನಂತರ ಏರ್ಪಡಿಸಲಾಗಿದ್ದ, ಎಲ್ಲಾ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಿ 15ನೇ ಇಂಡಿಯಾ ಜ್ಯೂನಿಯರ್ ವುಮೇನ್ ನ್ಯಾಷನಲ್ ಚಾಂಪಿಯನ್-2025ಕ್ಕೆ ಕರ್ನಾಟಕದಿಂದ ಆಯ್ಕೆಯಾಗಿದ್ದಾರೆ.

ಪ್ರಸ್ತುತ ಸ್ಪರ್ಧೆಗೆ ದೇಶದ 28 ರಾಜ್ಯಗಳು, 7 ಕೇಂದ್ರಾಡಳಿತ ಪ್ರದೇಶಗಳು ಭಾಗವಹಿಸಲಿವೆ. ನೇಹಾ ಮುಟಗಾರ ಕರ್ನಾಟಕ ತಂಡದ ಪರವಾಗಿ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.