ಶಿರಹಟ್ಟಿ: ‘ಗೆರಿಲ್ಲಾ ಯುದ್ಧ ತಂತ್ರದ ರೂವಾರಿಯಾಗಿದ್ದ ಸಂಗೊಳ್ಳಿ ರಾಯಣ್ಣ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ. ದೇಶಕ್ಕಾಗಿ ಮಡಿದ ರಾಯಣ್ಣ ಶೌರ್ಯದ ಪ್ರತೀಕ’ ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.
ಸಂಗೊಳ್ಳಿ ರಾಯಣ್ಣ ಜಯಂತಿ ಅಂಗವಾಗಿ ಉತ್ಸವ ಮೂರ್ತಿ ಕೊಡುಗೆಯಾಗಿ ನೀಡಿದ ಸ್ಥಳೀಯ ವಿದ್ಯಾನಗರದ ಮೂರ್ತಿದಾನಿ ರಾಮಣ್ಣ ಕಂಬಳಿ ಅವರ ಮಹಾಮನೆಯ ಆವರಣದಲ್ಲಿ ರಾಯಣ್ಣ ಮೂರ್ತಿಗೆ ಪುಷ್ಪಾರ್ಪಣೆ ಮಾಡುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
‘ಶೌರ್ಯ, ಪರಾಕ್ರಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಯೊಬ್ಬರಿಗೂ ಸ್ಪೂರ್ತಿಯ ಚಿಲುಮೆ. ಕಿತ್ತೂರು ಚನ್ನಮ್ಮನ ಬಲಗೈ ಬಂಟನಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಕಿಚ್ಚು ಹಚ್ಚಿದ ಮೊದಲ ಕ್ರಾಂತಿ ಕಿಡಿಯೇ ರಾಯಣ್ಣ. ಇಂತಹ ಮಹಾನ್ ಹೋರಾಟಗಾರನ ದೇಶಪ್ರೇಮ ಇಂದಿನ ಯುವಕರಲ್ಲಿ ಒಡಮೂಡಬೇಕು. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರೊಂದಿಗೆ ಅವರನ್ನು ನಿತ್ಯ ಆರಾಧಿಸೋಣ’ ಎಂದು ಹೇಳಿದರು.
ಹಾಲುಮತ ಗುರುಗಳಾದ ಸಿದ್ದಯ್ಯ ಅಮೋಘೀಮಠ, ರಾಮಣ್ಣ ಕಂಬಳಿ, ಫಕೀರೇಶ ರಟ್ಟಿಹಳ್ಳಿ, ಸಂತೋಷ ಕುರಿ, ಸುನೀಲ ಮಹಾಂತಶೆಟ್ಟರ, ನಾಗರಾಜ ಲಕ್ಕುಂಡಿ, ಪ್ರವೀಣಗೌಡ ಪಾಟೀಲ, ಜೆ.ಆರ್.ಕುಲಕರ್ಣಿ, ಶಂಕರ ಮರಾಠೆ, ಬಿ.ಡಿ.ಪಲ್ಲೇದ, ನಿಂಗಪ್ಪ ಬನ್ನಿ, ಗೂಳಪ್ಪ ಕರಿಗಾರ, ಪುಲಕೇಶಿ ಸ್ವಾಮಿ, ಬಸವರಾಜ ವಡವಿ, ದೇವು ಪೂಜಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.