ADVERTISEMENT

ಗದಗ | ತೋಂಟದಾರ್ಯ ಮಠದಲ್ಲಿ 2707ನೇ ಶಿವಾನುಭವ ಇಂದು

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2024, 15:34 IST
Last Updated 18 ಆಗಸ್ಟ್ 2024, 15:34 IST

ಗದಗ: ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ಸೋಮವಾರ ಸಂಜೆ 7.30ಕ್ಕೆ ಎಡೆಯೂರು ಜಗದ್ಗುರು ತೋಂಟದಾರ್ಯ ಮಠದಲ್ಲಿ 2,707ನೇ ಶಿವಾನುಭವ ನಡೆಯಲಿದ್ದು, ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಶಿವಾನುಭವ ಕಾರ್ಯಕ್ರಮದಲ್ಲಿ ಲಿಂ. ತೋಂಟದ ಸಿದ್ಧಲಿಂಗ ಸ್ವಾಮೀಜಿಯವರ ಪಟ್ಟಾಧಿಕಾರ ಸುವರ್ಣ ಮಹೋತ್ಸವದ ಅಂಗವಾಗಿ ವಿಶೇಷ ಉಪನ್ಯಾಸ ನಡೆಯಲಿದೆ.

‘ತೋಂಟದ ಸಿದ್ಧಲಿಂಗ ಸ್ವಾಮೀಜಿಯವರ ಪರಿಸರ ಪ್ರೀತಿ’ ಎಂಬ ವಿಷಯ ಕುರಿತು ಪ್ರೊ. ಸಿ.ಎಸ್.ಅರಸನಾಳ ಉಪನ್ಯಾಸ ನೀಡಲಿದ್ದಾರೆ. ಶ್ರಾವಣ ಮಾಸದ ಅಂಗವಾಗಿ ‘ಶಿವಶರಣೆಯರ ವಚನಾನುಭಾವ’ ಕುರಿತು ಗಿರಿಜಕ್ಕ ಧರ್ಮರೆಡ್ಡಿ ಪ್ರವಚನ ನೀಡಲಿದ್ದಾರೆ.

ADVERTISEMENT

ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ಸಂಗಡಿಗರಿಂದ ವಚನಸಂಗೀತ ಕಾರ್ಯಕ್ರಮ ನಡೆಯಲಿದೆ. ಖುಷಿ ಎಂ. ಲಕ್ಕುಂಡಿ ಧರ್ಮಗ್ರಂಥ ಪಠಿಸುವರು. ವರ್ಷಾ ಆರ್. ಮೇಟಿ ಅವರು ವಚನ ಚಿಂತನೆ ನಡೆಸಿಕೊಡುವರು ಎಂದು ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.