ADVERTISEMENT

‘ಸಿದ್ಧಲಿಂಗ ಶ್ರೀ ತತ್ವಗಳು ಚಿರಂತನ’

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2023, 15:38 IST
Last Updated 8 ನವೆಂಬರ್ 2023, 15:38 IST
ನರಗುಂದ ತಾಲ್ಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ನಡೆದ ಶಿವಾನುಭವ ಹಾಗೂ ತೋಂಟದ ಸಿದ್ಧಲಿಂಗ ಶ್ರೀಗಳ 5ನೇ ಪುಣ್ಯಸ್ಮರಣೋತ್ಸವದಲ್ಲಿ ಪ್ರಾಥಮಿಕ ವಿಭಾಗದಲ್ಲಿ ಉದ್ದಜಿಗಿತದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಅಂಜಿತಾ ಚಲವಾದಿಯನ್ನು ಸನ್ಮಾನಿಸಲಾಯಿತು
ನರಗುಂದ ತಾಲ್ಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ನಡೆದ ಶಿವಾನುಭವ ಹಾಗೂ ತೋಂಟದ ಸಿದ್ಧಲಿಂಗ ಶ್ರೀಗಳ 5ನೇ ಪುಣ್ಯಸ್ಮರಣೋತ್ಸವದಲ್ಲಿ ಪ್ರಾಥಮಿಕ ವಿಭಾಗದಲ್ಲಿ ಉದ್ದಜಿಗಿತದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಅಂಜಿತಾ ಚಲವಾದಿಯನ್ನು ಸನ್ಮಾನಿಸಲಾಯಿತು   

ನರಗುಂದ: ‘ಪೀಠ, ಸಿಂಹಾಸನವನ್ನು ಧಿಕ್ಕರಿಸಿ ವೈಭವೀಕರಣದ ವ್ಯವಸ್ಥೆಗೆ ತಿಲಾಂಜಲಿ ಹಾಡಿದವರು ಗದಗ ತೋಂಟದಾರ್ಯ ಮಠದ ಲಿಂ.ಸಿದ್ಧಲಿಂಗ ಶ್ರೀಗಳ ತತ್ವಗಳು ಚಿರಂತನ’ ಎಂದು

ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಎಚ್.ತಿಗಡಿ ಹೇಳಿದರು.

ತಾಲ್ಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಬುಧವಾರ ನಡೆದ 351ನೇ ಮಾಸಿಕ ಶಿವಾನುಭವ ಹಾಗೂ ತೋಂಟದ ಸಿದ್ಧಲಿಂಗ ಶ್ರೀಗಳ 5ನೇ ಪುಣ್ಯಸ್ಮರಣೋತ್ಸವದಲ್ಲಿ ಮಾತನಾಡಿದರು.

ADVERTISEMENT

‘ಅಭಿನವ ಬಸವಣ್ಣನಂತಿದ್ದ ಸಿದ್ಧಲಿಂಗ ಶ್ರೀಗಳು ಪ್ರಗತಿಪರ ಚಿಂತಕರು. ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಆ ಮೂಲಕ ಲಕ್ಷಾಂತರ ಬಡ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದವರು. ತ್ರಿವಿಧ ದಾಸೋಹದ ಮೂಲಕ ಗದುಗಿನ ಹೆಸರನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿದ ಕೀರ್ತಿ ಪೂಜ್ಯರಿಗೆ ಸಲ್ಲುತ್ತದೆ. ಅಪ್ಪಟ ಬಸವ ತತ್ವದ ದಂಡನಾಯಕರಾಗಿದ್ದ ಪೂಜ್ಯರು ಬಸವಾಚರಣೆಯನ್ನು ಅಕ್ಷರಶಃ ಪಾಲಿಸಿದವರು’ ಎಂದರು.

ಶಾಂತಲಿಂಗ ಶ್ರೀ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಪ್ರಾಥಮಿಕ ವಿಭಾಗದಲ್ಲಿ ಉದ್ದಜಿಗಿತದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಅಂಜಿತಾ ಚಲವಾದಿಯನ್ನು ಮಠದಿಂದ ಸತ್ಕರಿಸಲಾಯಿತು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ  ಜಿಲ್ಲಾ ಘಟಕದ ಅದ್ಯಕ್ಷ ಚೆನ್ನಬಸಪ್ಪ ಕಂಠಿ, ಜೆ.ಆರ್.ಕದಂ, ಸಂಗಪ್ಪ ಪೂಜಾರ, ಮುಖ್ಯಶಿಕ್ಷಕ ಜಿ.ಎಚ್ ಕಾಂಬಳೆ, ಪಿ.ಎಸ್.ಅಣ್ಣಿಗೇರಿ, ಆರ್.ಬಿ.ಚಿನಿವಾಲರ, ಮಹಾಂತೇಶ ಹಿರೇಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.