ADVERTISEMENT

ಸದೃಢ ದೇಹಕ್ಕಾಗಿ ಕ್ರೀಡೆ ಅವಶ್ಯ: ಬುರಡಿ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2024, 14:50 IST
Last Updated 2 ಆಗಸ್ಟ್ 2024, 14:50 IST
ಗದಗ ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪ್ರೌಢಶಾಲೆಗಳ ‘ಎ’ ಗ್ರುಪ್‌ ಮಟ್ಟದ ಕ್ರೀಡಾಕೂಟವನ್ನು ಬಿಇಒ ಆರ್.ಎಸ್. ಬುರಡಿ ಉದ್ಘಾಟಿಸಿದರು
ಗದಗ ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪ್ರೌಢಶಾಲೆಗಳ ‘ಎ’ ಗ್ರುಪ್‌ ಮಟ್ಟದ ಕ್ರೀಡಾಕೂಟವನ್ನು ಬಿಇಒ ಆರ್.ಎಸ್. ಬುರಡಿ ಉದ್ಘಾಟಿಸಿದರು   

ಗದಗ: ಶಹರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಬಸವೇಶ್ವರ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ ಆಶ್ರಯದಲ್ಲಿ ಕೆ.ಎಚ್. ಪಾಟೀಲ ಕ್ರೀಡಾಂಗಣದಲ್ಲಿ ಪ್ರೌಢಶಾಲೆಗಳ ‘ಎ’ ಗ್ರುಪ್‌ ಮಟ್ಟದ ಕ್ರೀಡಾಕೂಟ ನಡೆಯಿತು.

ಕ್ರೀಡಾಕೂಟ ಉದ್ಘಾಟಿಸಿದ ಬಿಇಒ ಆರ್.ಎಸ್.ಬುರಡಿ, ‘ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆ ಅತ್ಯಂತ ಮಹತ್ವದ್ದು. ನಮ್ಮ ಸದೃಢ ದೇಹಕ್ಕಾಗಿ ಕ್ರೀಡೆ ಅವಶ್ಯಕ’ ಎಂದು ತಿಳಿಸಿದರು.

ಶಾಲಾ ಸಂಸ್ಥೆಯ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟಿ ಕ್ರೀಡಾ ಧ್ವಜಾರೋಹಣ ನೆರವೇರಿಸಿ, ‘ಸೋಲದೇ ಗೆದ್ದರೆ ಮಂದಹಾಸ, ಸೋತು ಗೆದ್ದರೆ ಇತಿಹಾಸ. ಹಾಗಾಗಿ ಕ್ರೀಡಾಪಟುಗಳು ಕ್ರೀಡೆಗಳಲ್ಲಿನ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು’ ಎಂದು ಹೇಳಿದರು.

ADVERTISEMENT

ಮುಖ್ಯ ಶಿಕ್ಷಕ ಎಂ.ಕೆ. ಬಂಡಿಹಾಳ ಮಾತನಾಡಿದರು. ಕ್ರೀಡಾಕೂಟದಲ್ಲಿ 12 ಪ್ರೌಢಶಾಲೆಗಳ ಕ್ರೀಡಾಪಟುಗಳು ಭಾಗವಹಿಸಿದ್ದರು. ಅರಟಾಳ ರುದ್ರಗೌಡ, ಡಿ.ಇಡಿ. ಕಾಲೇಜಿನ ಪ್ರಾಚಾರ್ಯ ಎಸ್.ಎಚ್. ರಾಮದುರ್ಗ, ಶಿಕ್ಷಕರಾದ ನಿಂಬನಗೌಡರ, ಕ್ರೀಡಾಕೂಟದ ನಿರ್ಣಾಯಕರು ಇದ್ದರು.

ವಿದ್ಯಾರ್ಥಿನಿಯರಾದ ವೇದಾ ಮತ್ತು ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಕೆ.ಬಿ. ಜಾಲವಾಡಗಿ ನಿರೂಪಿಸಿದರು. ಶಿಕ್ಷಕಿ ಪ್ರಿಯಾ ನಾಗಲೋಟಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಶಯನಾಜ್‌ ಬಚನಳ್ಳಿ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಸುಧಾರಾಣಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.