ADVERTISEMENT

ಅಸೂಟಿ ಫಲಹಾರೇಶ್ವರ ಶಾಲೆಗೆ ಶೇ 73ರಷ್ಟು ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 3 ಮೇ 2019, 15:18 IST
Last Updated 3 ಮೇ 2019, 15:18 IST
ತುಂಗಾ ಕುಲಕರ್ಣಿ
ತುಂಗಾ ಕುಲಕರ್ಣಿ   

ಗದಗ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರೋಣ ತಾಲ್ಲೂಕಿನ ಅಸೂಟಿ ಗ್ರಾಮದ ಫಲಹಾರೇಶ್ವರ ಪ್ರೌಢಶಾಲೆಗೆ ಶೇ 73.33 ರಷ್ಟು ಫಲಿತಾಂಶ ಲಭಿಸಿದೆ.

ತುಂಗಾ ಕುಲಕರ್ಣಿ (ಶೇ 93.76) ಹಾಗೂ ಕೀರ್ತಿ ಮಮಟಗೇರಿ (ಶೇ 93.76) ಪ್ರಥಮ, ರಜಿತಾ ಮೊಟೆಗೌಡ್ರ (ಶೇ 89.76) ದ್ವಿತೀಯ, ಬಸವರಾಜ ತಳವಾರ (ಶೇ 88.80) ತೃತೀಯ ಅಂಕ ಪಡೆದಿದ್ದಾರೆ. ಶಾಲೆಗೆ 5 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 10 ವಿದ್ಯಾರ್ಥಿಗಳು ಪ್ರಥಮ ದರ್ಜೆ, 22 ವಿದ್ಯಾರ್ಥಿಗಳು ದ್ವಿತೀಯದರ್ಜೆ, 5 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT