ನರೇಗಲ್: ಪಟ್ಟಣ ಸೇರಿದಂತೆ ಜಕ್ಕಲಿ, ಕೋಡಿಕೊಪ್ಪ, ಅಬ್ಭಿಗೇರಿ, ಮಾರನಬಸರಿ, ಬೂದಿಹಾಳ, ನಿಡಗುಂದಿ, ನಿಡಗುಂದಿ ಕೊಪ್ಪ, ಕುರುಡಗಿ, ಕೊಚಲಾಪುರ, ಯರೇಬೇಲೇರಿ, ಕೋಟುಮುಚಗಿ, ಹಾಲಕೆರೆ, ದ್ಯಾಂಪುರ, ಮಲ್ಲಾಪುರ, ಹೊಸಳ್ಳಿ, ಕಳಕಾಪುರ, ತೋಟಗಂಟಿ ಗ್ರಾಮದಲ್ಲಿ ಸೀಗೆ ಹುಣ್ಣಿಮೆ ಸಂಭ್ರಮ ಮನೆಮಾಡಿತ್ತು.
ದೇವಸ್ಥಾನ ಹಾಗೂ ಮನೆಗಳಲ್ಲಿ ಪ್ರತಿಷ್ಠಾಪಿಸಿದ ಸೀಗವ್ವ ಮತ್ತು ಗೌರವ್ವನ ಮೂರ್ತಿಗಳಿಗೆ ಹೆಣ್ಣುಮಕ್ಕಳು ಶ್ರದ್ಧಾ–ಭಕ್ತಿಯಿಂದ ಪೂಜೆ ಮಾಡಿದರು. ಸಕ್ಕರೆಯಿಂದ ತಯಾರಿಸಿದ ಆರತಿ ಗೊಂಬೆಗಳು, ಹೊನ್ನಂಬ್ರಿ, ಆಣ್ಣಿ, ಚೆಂಡು ಹಾಗೂ ಸೇವಂತಿಕೆ ಹೂವುಗಳನ್ನು ತಟ್ಟೆಯಲ್ಲಿಟ್ಟುಕೊಂಡು, ಗ್ರಾಮೀಣ ಸೊಗಡಿನ ಹಾಡುಗಳನ್ನು ಹಾಡಿದರು. ಮೂರ್ತಿಗಳನ್ನು ಪ್ರತಿಷ್ಠಾಪಿಸದಿದ್ದವರು ದೇವಸ್ಥಾನಕ್ಕೆ ಹೋಗಿ ಆರತಿ ಬೆಳಗಿ ಪ್ರಾರ್ಥಿಸಿದರು.
ನರೇಗಲ್ ಪಟ್ಟಣದ 3ನೇ ವಾರ್ಡಿನ ಜಕ್ಕಲಿ ರೋಡ್ ಆಶ್ರಯ ಕಾಲೊನಿಯಲ್ಲಿ ಆಂಜನೇಯ, ನಾಗಪ್ಪನ ಮೂರ್ತಿಗಳಿಗೆ ಯುವತಿಯರು ಸಕ್ಕರೆ ಆರತಿ ಬೆಳಗಿದರು.
ಸರೋಜಾ ರಾಠೋಡ, ಜ್ಯೋತಿ ರಾಠೋಡ, ರುಕ್ಮಿಣಿ ಇಟಗಿ, ರೇಣುಕಾ ಕೊಂಡಿ, ಕವಿತಾ ಹಿರೇಮಠ, ಕಾವೇರಿ ರಾಠೋಡ, ನೇತ್ರಾವತಿ ರಾಠೋಡ, ವಿಸ್ಮಯ ರಾಠೋಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.