ADVERTISEMENT

ಲಾಕ್‌ಡೌನ್‌ ನಡುವೆಯೇ ಅನಗತ್ಯ ಓಡಾಟ

ಭಾನುವಾರದ ಸಂಪೂರ್ಣ ಲಾಕ್‌ಡೌನ್‌ಗೆ ತಗ್ಗುತ್ತಿರುವ ಜನ ಬೆಂಬಲ

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 14:18 IST
Last Updated 12 ಜುಲೈ 2020, 14:18 IST
ಲಾಕ್‌ಡೌನ್‌ ನಡುವೆಯೇ ಭಾನುವಾರ ಗದುಗಿನಲ್ಲಿ ಕುಡಿಯುವ ನೀರು ತುಂಬಿಕೊಳ್ಳಲು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಸಾರ್ವಜನಿಕ ನಳದ ಎದುರು ಸೇರಿದ್ದ ಮಹಿಳೆಯರು
ಲಾಕ್‌ಡೌನ್‌ ನಡುವೆಯೇ ಭಾನುವಾರ ಗದುಗಿನಲ್ಲಿ ಕುಡಿಯುವ ನೀರು ತುಂಬಿಕೊಳ್ಳಲು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಸಾರ್ವಜನಿಕ ನಳದ ಎದುರು ಸೇರಿದ್ದ ಮಹಿಳೆಯರು   

ಗದಗ: ಕೊರೊನಾ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ತ್ರಿಶತಕದ ಗಡಿ ದಾಟಿರುವ ಜಿಲ್ಲೆಯಲ್ಲಿ ಭಾನುವಾರದ ಸಂಪೂರ್ಣ ಲಾಕ್‌ಡೌನ್‌ಗೆ ಸಾರ್ವಜನಿಕರಿಂದ ನಿರೀಕ್ಷಿತ ಬೆಂಬಲ ವ್ಯಕ್ತವಾಗಲಿಲ್ಲ.

ಕಳೆದ ಭಾನುವಾರಕ್ಕೆ (ಜುಲೈ 5) ಹೋಲಿಸಿದರೆ ಈ ಭಾನುವಾರ ಅನಗತ್ಯವಾಗಿ ರಸ್ತೆಗಿಳಿಯುವವರ ಸಂಖ್ಯೆ ಹೆಚ್ಚಿತ್ತು. ಬೆಳಿಗ್ಗೆ ರಸ್ತೆಗಿಳಿದವರಿಗೆ ಪೊಲೀಸರು ಎಚ್ಚರಿಕೆ ನೀಡಿ ವಾಪಸ್‌ ಮನೆಗಳಿಗೆ ಕಳುಹಿಸಿದರು. ರಸ್ತೆಗಳಲ್ಲಿ ಅಲ್ಲಲ್ಲಿ ಬ್ಯಾರಿಕೇಡ್‌ ಹಾಕಲಾಗಿತ್ತು. ಆಸ್ಪತ್ರೆ, ಔಷಧ ಅಂಗಡಿ, ಅಗತ್ಯ ವಸ್ತು ಹಾಗೂ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಇತರೆ ಚಟುವಟಿಕೆಗಳು ಸಂಪೂರ್ಣ ಬಂದ್‌ ಆಗಿದ್ದವು.

ಔಷಧಿ, ಪತ್ರಿಕೆ, ಹಾಲು, ತರಕಾರಿ, ವಾಯುವಿಹಾರ, ನೀರು ತರುವ ನೆಪದಲ್ಲಿ ಬೆಳಿಗ್ಗೆ ಒಂದಿಷ್ಟು ಜನರು ಮನೆಯಿಂದ ಹೊರಗೆ ಬಂದಿದ್ದರು. 11 ಗಂಟೆಯ ನಂತರ ಜನ ಸಂಚಾರ ಕಡಿಮೆ ಇತ್ತು. ಆದರೆ, ಸಂಜೆ 4 ಗಂಟೆ ಕಳೆಯುತ್ತಿದ್ದಂತೆ ಜನರು ಮತ್ತೆ ರಸ್ತೆಗಿಳಿದಿರು. ವಾಹನಗಳ ಸಂಚಾರವೂ ಹೆಚ್ಚಿತ್ತು.

ADVERTISEMENT

ಭಾನುವಾರ ಮದ್ಯ ಮಾರಾಟವನ್ನು ನಿಷೇಧಿಸಲಾಗಿತ್ತು. ಮಾಂಸ ಮತ್ತು ಮೀನು ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಕೆಲವು ಬಡಾವಣೆಗಳ ಒಳಗಿನ ಚಿಕ್ಕ ದಿನಸಿ ಅಂಗಡಿಗಳು ತೆರೆದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.