ನರಗುಂದ: ಪಟ್ಟಣದ ಶಾಸಕ ಸಿ.ಸಿ.ಪಾಟೀಲರ ಕಾರ್ಯಾಲಯದಲ್ಲಿ ಭಾರತೀಯ ಜನಸಂಘದ ಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿ ಅವರ ಸ್ಮೃತಿ ದಿನ ಹಾಗೂ ನರಗುಂದದ ಜಗನ್ನಾಥ್ ರಾವ್ ಜೋಶಿ ಅವರ ಜನ್ಮ ದಿನಾಚರಣೆ ಮಂಗಳವಾರ ಬಿಜೆಪಿ ಯುವ ಮುಖಂಡ ಉಮೇಶಗೌಡ ಪಾಟೀಲ ನೇತೃತ್ವದಲ್ಲಿ ನಡೆಯಿತು.
ಉಮೇಶಗೌಡ ಪಾಟೀಲ ಮಾತನಾಡಿ, ‘ಶ್ಯಾಮ ಪ್ರಸಾದ್ ಮುಖರ್ಜಿ ಹಾಗೂ ಜಗನ್ನಾಥ್ ರಾವ್ ಜೋಶಿಯವರು ಪಕ್ಷದ ಏಳಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಇಬ್ಬರ ವಿಚಾರಧಾರೆಗಳು, ಆದರ್ಶಗಳು, ಧೈರ್ಯ, ಸೇವಾ ಮನೋಭಾವ ಹಾಗೂ ರಾಷ್ಟ್ರಪ್ರೇಮ ಸರ್ವರಿಗೂ ಸ್ಪೂರ್ತಿದಾಯಕ’ ಎಂದರು.
ಪಕ್ಷದ ಮಂಡಲ ಅಧ್ಯಕ್ಷ ನಾಗನಗೌಡ ತಿಮ್ಮನಗೌಡ್ರ, ಶಿವಾನಂದ ಮುತ್ತವಾಡ, ಬಸವರಾಜು ಪಾಟೀಲ, ಒಬಿಸಿ ಗದಗ ಜಿಲ್ಲಾ ಅಧ್ಯಕ್ಷರಾದ ಸಿದ್ದೇಶ್ ಹೂಗಾರ, ಪುರಸಭೆ ಉಪಾಧ್ಯಕ್ಷ ಚಂದ್ರುಗೌಡ ಪಾಟೀಲ, ಸದಸ್ಯರಾದ ಪ್ರಶಾಂತ್ ಜೋಶಿ, ದೇವಣ್ಣ ಕಲಾಲ, ರಾಚನಗೌಡ ಪಾಟೀಲ, ಪವಾಡೆಪ್ಪ ವಡ್ಡಿಗೇರಿ, ಅನಿಲ ಧರೆಯಣ್ಣವರ, ಈರಣ್ಣ ಹೊಂಗಲ, ಸಂಗಮೇಶ ಕಂಠಿ, ವಿಠ್ಠಲ ಹವಾಲ್ದಾರ್, ಪ್ರವೀಣ ವಡ್ಡರ, ಕಾರ್ತಿಕ ಚೌದರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.