ಗಜೇಂದ್ರಗಡ: ಸಮೀಪದ ಗುಳಗುಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಅಳಗುಂಡಿ ಗ್ರಾಮದಲ್ಲಿ ಗುರುವಾರ ನರೇಗಾ ಕಾಮಗಾರಿ ಸ್ಥಳದಲ್ಲಿ ಕೂಲಿ ಕಾರ್ಮಿಕರು ಪೆಹಲ್ಗಾಮ್‌ನಲ್ಲಿ ಉಗ್ರರ ಗುಂಡಿನ ದಾಳಿಗೆ ಬಲಿಯಾದ ಪ್ರವಾಸಿಗರಿಗೆ ಮೌನಾಚರಣೆ ಸಲ್ಲಿಸಿ ಸಂತಾಪ ಸೂಚಿಸಿದರು.
ಗ್ರಾಮ ಪಂಚಾಯಿತಿ ಸದಸ್ಯೆ ನೀಲವ್ವ ಕುರ್ತಕೋಟಿ ಮಾತನಾಡಿ, ‘ಕೈಲಾಗದ ಹೇಡಿಗಳು ಅಮಾಯಕರನ್ನು ಬಲಿ ಪಡೆದಿದ್ದಾರೆ. ಈ ಘಟನೆ ಮೂಲಕ ಪಾಕಿಸ್ತಾನದ ಕುತಂತ್ರ ಬುದ್ದಿ ಏನೆಂಬುದು ಗೊತ್ತಾಗಿದೆ. ದೇಶದ ಪ್ರತಿಯೊಬ್ಬರೂ ಈ ಘಟನೆ ಖಂಡಿಸುವುದರ ಜೊತೆಗೆ ಪಾಪಿಗಳಿಗೆ ತಕ್ಕ ಶಿಕ್ಷೆಯಾಗಬೇಕೆಂದು ಒತ್ತಾಯಿಸುತ್ತಿದ್ದಾರೆ’ ಎಂದರು.
ಕೂಲಿಕಾರ್ಮಿಕ ವೀರೇಶ ಓಲೇಕಾರ ಮಾತನಾಡಿ, ‘ಉಗ್ರರು ದಾಳಿ ನಡೆಸಿ ಅಮಾಯಕರನ್ನು ಹತ್ಯೆ ಮಾಡಿದ್ದು ಹೇಯ ಕೃತ್ಯವಾಗಿದೆ. ಕೃತ್ಯ ಎಸಗಿದವರನ್ನು ದೇವರು ಎಂದಿಗೂ ಕ್ಷಮಿಸಲಾರ. ಕೇಂದ್ರ ಸರ್ಕಾರ ಭಯೋತ್ಪಾದನೆ ನಿಗ್ರಹಕ್ಕೆ ದಿಟ್ಟ ಕ್ರಮ ಕೈಗೊಳ್ಳಲಿʼ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ಆದಿ, ಸದಸ್ಯ ನಾಗರಾಜ ಪಾಟೀಲ, ಕಾಯಕಮಿತ್ರ ಮಲ್ಲಮ್ಮ ಮಣ್ಣೂರ, ಪಂಚಾಯಿತಿ ಸಿಬ್ಬಂದಿ ಮಲ್ಲಪ್ಪ ಉಪ್ಪಾರ, ಯಮನೂರ ಓಲೇಕಾರ, ನಿಂಗರಾಜ ಗುರಿಕಾರ, ಮರಲಿಂಗಪ್ಪ ಮುತಾರಿ, ಕೂಲಿ ಕಾರ್ಮಿಕರಾದ ಶರಣು ನಾಯಕ, ಭೀಮಪ್ಪ ಶಾಂತಗಿರಿ, ಲಕ್ಷ್ಮೀ ಸುಳ್ಳದ, ಯಶೋದಾ ಲಾಲಗುಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.