ADVERTISEMENT

ಮುಂಡರಗಿ | ಪಟ್ಟಣಕ್ಕೆ ತಂಪೆರೆದ ಮಳೆ

​ಪ್ರಜಾವಾಣಿ ವಾರ್ತೆ
Published 13 ಮೇ 2025, 15:37 IST
Last Updated 13 ಮೇ 2025, 15:37 IST
ಮುಂಡರಗಿಯ ಕೊಪ್ಪಳ ವೃತ್ತದಲ್ಲಿ ಬೈಕ್ ಸವಾರರು ಸುರಿಯುವ ಮಳೆಯಲ್ಲಿಯೇ ಛತ್ರಿ ಹಿಡಿದು ಸಾಗಿದರು
ಮುಂಡರಗಿಯ ಕೊಪ್ಪಳ ವೃತ್ತದಲ್ಲಿ ಬೈಕ್ ಸವಾರರು ಸುರಿಯುವ ಮಳೆಯಲ್ಲಿಯೇ ಛತ್ರಿ ಹಿಡಿದು ಸಾಗಿದರು   

ಮುಂಡರಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಮಂಗಳವಾರ ಸುಮಾರು ಅರ್ಧಗಂಟೆ ಕಾಲ ರಭಸದಿಂದ ಮಳೆ ಸುರಿಯಿತು. ಹಲವು ದಿನಗಳಿಂದ ಬಿಸಿಲಿನ ಬೆಗೆಯಲ್ಲಿ ತತ್ತರಿಸಿದ್ದ ಜನರು ಸುರಿದ ಸಾಧಾರಣ ಮಳೆಯಿಂದಾಗಿ ನಿಟ್ಟುಸಿರು ಬಿಡುವಂತಾಯಿತು.

ಸಂಜೆ ಮೂರು ಗಂಟೆಗೆ ಆರಂಭವಾದ ಬಿರುಸು ಮಳೆಯು ಅರ್ಧಗಂಟೆಗೂ ಹೆಚ್ಚು ಸಮಯ ಜೋರಾಗಿ ಸುರಿಯಿತು. ಪಟ್ಟಣದ ದೊಡ್ಡ ಚರಂಡಿಗಳೆಲ್ಲ ತುಂಬಿ, ಗಲೀಜು ನೀರು ರಸ್ತೆಯ ಮೇಲೆ ಹರಿಯಿತು. ಪಟ್ಟಣದ ನೂತನ ಬಡಾವಣೆಗಳಲ್ಲಿ ನಿರ್ಮಿಸಲಾಗಿರುವ ಕಚ್ಚಾ ರಸ್ತೆಗಳೆಲ್ಲ ಕೆಸರುಮಯವಾದವು.

ತಾಲ್ಲೂಕಿನ ತುಂಗಭದ್ರಾ ನದಿ ದಂಡೆಯ ಹೆಸರೂರು, ಕೊರ್ಲಹಳ್ಳಿ, ಗಂಗಾಪುರ, ಶೀರನಹಳ್ಳಿ, ಶಿಂಗಟಾಲೂರ ಮೊದಲಾದ ಭಾಗಗಳಲ್ಲಿ ರೈತರು ಅಪಾರ ಪ್ರಮಾಣದ ಭತ್ತ ಬೆಳೆದಿದ್ದಾರೆ. ಬೆಳೆ ಕೊಯ್ಲಿಗೆ ಬಂದಿದೆ. ಮಳೆ ಸುರಿದರೆ ಭತ್ತದ ಕೊಯ್ಲಿಗೆ ತೀವ್ರ ಹಿನ್ನಡೆಯಾಗಿ, ರೈತರು ಭಾರಿ ನಷ್ಟ ಅನುಭವಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.