
ಪ್ರಜಾವಾಣಿ ವಾರ್ತೆ
ಬಂಧನ
ಶಿರಹಟ್ಟಿ: ಸ್ಥಳೀಯ ಮಖಾನ ಗಲ್ಲಿಯ ಮೂವರು ನಿವಾಸಿಗಳು ಕಸಾಯಿಖಾನೆಯಿಂದ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ದನ- ಕರುಗಳನ್ನು ಕಡಿದು ಮಾಂಸವನ್ನು ಮಾರಾಟ ಮಾಡುತ್ತಿರುವಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಗುಲಾಮ ಹುಸೇನ ದಸ್ತಗೀರಸಾಬ ಆದ್ರಳ್ಳಿ, ಅಮಜಾದ ದಸ್ತಗೀರಸಾಬ ಆದ್ರಳ್ಳಿ, ಅಲ್ಲಾಭಕ್ಷ ದಸ್ತಗೀರಸಾಬ ಆದ್ರಳ್ಳಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಸ್ವಂತ ಲಾಭಕೋಸ್ಕರ ಅಕ್ರಮವಾಗಿ ಗೋಮಾಂಸ ಮಾರಾಟ ದಂಧೆಯಲ್ಲಿ ತೊಡಗಿದ್ದರು. ಆರೋಪಿಗಳಿಂದ 3 ಆಕಳು, 1 ಆಕಳು ಕರ, 1 ಹೋರಿಕರ, 1 ಎಮ್ಮೆ, 1 ಎಮ್ಮೆಕರ ಹಾಗೂ ಗೋವುಗಳನ್ನು ಕಡಿಯಲು ಬಳಕೆ ಮಾಡುತ್ತಿದ್ದ ಪರಿಕರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶಿರಹಟ್ಟಿ ಪೊಲೀಸ್ ಠಾಣೆಯ ಪಿಎಸ್‌ಐ ಈರಪ್ಪ ರಿತ್ತಿ ಅವರು ಸರ್ಕಾರದ ಪರವಾಗಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.