ADVERTISEMENT

ತುಂಗಾ ತೀರದ ಸುಂದರ ಶಾಲೆ

ಗ್ರಾಮಸ್ಥರು, ಶಿಕ್ಷಕರ ಸಹಭಾಗಿತ್ವ; ಸಹಕಾರ ತತ್ವದಡಿ ಸರ್ಕಾರಿ ಶಾಲೆ ಅಭಿವೃದ್ಧಿ

ಮಂಜುನಾಥ ಆರಪಲ್ಲಿ
Published 6 ಅಕ್ಟೋಬರ್ 2018, 6:56 IST
Last Updated 6 ಅಕ್ಟೋಬರ್ 2018, 6:56 IST
ಶಿರಹಟ್ಟಿ ತಾಲ್ಲೂಕಿನ ಹೊಳೆ ಇಟಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಸ್ವಾಗತ ಕೋರುವ ಹಸಿರು ಕಮಾನು
ಶಿರಹಟ್ಟಿ ತಾಲ್ಲೂಕಿನ ಹೊಳೆ ಇಟಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಸ್ವಾಗತ ಕೋರುವ ಹಸಿರು ಕಮಾನು   

ಶಿರಹಟ್ಟಿ: ತಾಲ್ಲೂಕಿನ ಗಡಿ ಗ್ರಾಮ ಹೊಳೆ ಇಟಗಿ, ಧಾರ್ಮಿಕ ಮತ್ತು ರಾಜಕೀಯ ಮಹತ್ವವುಳ್ಳ ತುಂಗಾನದಿ
ಯೊಂದಿಗೆ ಅವಿನಾಭವ ಸಂಬಂಧ ಹೊಂದಿರುವ ಪುಟ್ಟ ಗ್ರಾಮ. ಈ ಗ್ರಾಮದಲ್ಲಿ, ತುಂಗಾ ನದಿ ತಟದಲ್ಲಿ ತಲೆ ಎತ್ತಿರುವ ಸರ್ಕಾರಿ ಪ್ರಾಥಮಿಕ ಶಾಲೆ ಹಸಿರ ಸೊಬಗಿನಿಂದ ಕಂಗೊಳಿಸುತ್ತಿದೆ.

ತಾಲ್ಲೂಕು ಕೇಂದ್ರದಿಂದ ಈ ಗ್ರಾಮ 40 ಕಿ.ಮೀ ದೂರದಲ್ಲಿದೆ. ಹೊಳೆ ಇಟಗಿ ಗ್ರಾಮಕ್ಕೆ ಮೊದಲ ಬಾರಿ ಬಂದ
ವರಿಗೆ ತುಂಗಾ ನದಿ ನೀರು ಹರಿವ ನೀನಾದ ಹಾಗೂ ನದಿ ತಟದಲ್ಲಿರುವ ಈ ಸರ್ಕಾರಿ ಪ್ರಾಥಮಿಕ ಶಾಲೆಯ ಪರಿಸರ ಸೊಬಗು ಅಚ್ಚರಿ ಮೂಡಿಸದೇ ಇರದು.

ಮುಖ್ಯಶಿಕ್ಷಕ ಎಸ್‌.ಎಸ್‌. ಹುಲ್ಲಲ್ಲಿ ನೇತೃತ್ವದ ಶಿಕ್ಷಕ ಬಳಗ, ಗ್ರಾಮಸ್ಥರ ಸಹಕಾರ ಪಡೆದು, ಈ ಶಾಲೆಯನ್ನು ನವವಧುವಿನಂತೆ ಕಂಗೊಳಿಸುವಂತೆ ಮಾಡಿದ್ದಾರೆ. ಸಹಕಾರ ತತ್ವದಡಿ ಸರ್ಕಾರಿ ಶಾಲೆಯನ್ನು ಅಭಿವೃದ್ಧಿ ಮಾಡ
ಬಹುದು ಎನ್ನುವುದಕ್ಕೂ ಇದು ಉದಾಹರಣೆಯಾಗಿದೆ.

ADVERTISEMENT

ಶಾಲೆ ಶತಮಾನಕ್ಕಿಂತ ಹಳೆಯದು.ಸದ್ಯ ಇಲ್ಲಿ 1ರಿಂದ 7ನೇ ತರಗತಿವರೆಗೆ 310 ವಿದ್ಯಾರ್ಥಿಗಳಿದ್ದಾರೆ. ₹ 2 ಲಕ್ಷ ವ್ಯಯಿಸಿ, ಶಾಲಾ ದುರಸ್ತಿ, ಸುಣ್ಣಬಣ್ಣ ಬಳಿಯುವುದು ಹಾಗೂ ಸುಂದರ ಕೈತೋಟ ಅಭಿವೃದ್ಧಿ ಮಾಡಲಾಗಿದೆ. ಇದರ ಹಿಂದೆ ಸಾಂಘಿಕ ಶ್ರಮದ ಸಾರ್ಥಕ್ಯ ಅಡಗಿದೆ.

ಶಾಲೆಯ ಆವರಣದಲ್ಲಿ ನಿತ್ಯ ವಸಂತ ಕಂಗೊಳಿಸುತ್ತಿದೆ. ಆವರಣ ದಲ್ಲೇ ಇನ್ನೊಂದು ಬದಿಯಲ್ಲಿ ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ಅಗತ್ಯ ಇರುವ ತರಕಾರಿಗಳನ್ನು ಬೆಳೆಯಲಾ ಗಿದೆ. ಸಬ್ಬಸಗಿ, ಕ್ಯಾರೆಟ್‌, ಪಾಲಕ್‌, ಬೀಟ್‌ರೂಟ್‌ ಸೇರಿ ಹಲವು ಬಗೆಯಸೊಪ್ಪು, ತರಕಾರಿ ಬೆಳೆಯಲಾಗಿದೆ.

ಮಲೆನಾಡಿನ ಶಾಲೆಗಳನ್ನು ನೆನಪಿಗೆ ತರುವಂತಹ ವಾತಾವರಣ ಇಲ್ಲಿದೆ. ಸಾಕಷ್ಟು ಸಸಿಗಳನ್ನು ನೆಡಲಾಗಿದೆ. ಶಾಲಾ ಅನುದಾನದ ಸದ್ಬಳಕೆ ಹಾಗೂ ಗ್ರಾಮ ಪಂಚಾಯ್ತಿ ನೆರವು ಶಾಲೆಯ ಪ್ರಗತಿಗೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.