ರೋಣ: ತಾಲ್ಲೂಕಿನ ಕೌಜಗೇರಿ ಗ್ರಾಮದಲ್ಲಿ ಮೊಹರಂ ಆಚರಣೆ ವೇಳೆಯಲ್ಲಿ ಆಲೈ ದೇವರು ಹೊತ್ತ ಫಕೀರಸಾಬ್ ರಾಜ್ಯದ ರಾಜಕೀಯ ಭವಿಷ್ಯವಾಣಿ ನುಡಿದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬದಲಾವಣೆ ಅಷ್ಟು ಸುಲಭವಲ್ಲ ಎಂಬ ಭವಿಷ್ಯವಾಣಿ ನುಡಿದ ಘಟನೆ ನಡೆದಿದೆ.
ಭಾನುವಾರ ಮೊಹರಂ ಆಚರಣೆ ಭಾಗವಾಗಿ ಅಗ್ನಿ ಹಾಯುವ ಸಂದರ್ಭದಲ್ಲಿ ಭವಿಷ್ಯವಾಣಿ ನುಡಿಯುವ ಸಂಪ್ರದಾಯವಿದ್ದು ಫಕೀರಸಾಬ್ ಎಂಬುವವರು ಈ ವರ್ಷ ಕೂಡ ಭವಿಷ್ಯ ನಡೆದಿದ್ದು, ಸಾಮಾನ್ಯವಾಗಿ ಪ್ರತಿ ವರ್ಷ ಮಳೆ ಬೆಳೆಗೆ ಸಂಬಂಧಿಸಿದಂತೆ ಭವಿಷ್ಯ ವಾಣಿ ನುಡಿಯಲಾಗುತ್ತಿತ್ತು. ಆದರೆ ಈ ವರ್ಷ ರಾಜ್ಯ ರಾಜಕೀಯದ ಕುರಿತು ಭವಿಷ್ಯ ನುಡಿಯಲಾಗಿದೆ. ಕುತೂಹಲ ಕೆರಳಿಸಿದೆ.
‘ಹಾಲುಮತದ ಕೈಯಲ್ಲಿ ಅಧಿಕಾರ ಇದೆ. ಹಾಲು ಕೆಟ್ಟರೂ ಹಾಲುಮತ ಕೆಡಲು ಸಾಧ್ಯವಿಲ್ಲ. ಸಿದ್ದರಾಮಯ್ಯನವರ ಬದಲಾವಣೆ ಕಠಿಣ ಐತಿ. ಹಾಲುಮತದ ಕೈಯಲ್ಲಿ ಅಧಿಕಾರ ಕೊಟ್ಟಿರೀ ಸಿಎಂ ಬದಲಾವಣೆ ಸುಲಭ ಇಲ್ಲ. ಅವರಾಗಲೇ ಒಲ್ಲೆ ಅಂತ ಬಿಟ್ರ ಅಧಿಕಾರ ಇನ್ನೊಬ್ಬರಿಗೆ ಹೊಕ್ಕೇತಿ ನದಿ ಒಳಗ ಈಜು ಬರುವ ಭೂಪಬೇಕು. ಅಧಿಕಾರ ಬದಲಾಗಬೇಕಾದ್ರ ಅಂದಾಗ ಮಾತ್ರ ಅಧಿಕಾರ ಬದಲಾಕ್ಕೇತಿ ಇಲ್ಲಾಂದ್ರ ಇಲ್ಲ’ ಎಂಬ ಭವಿಷ್ಯವನ್ನು ನುಡಿದಿದೆ.
ಅಧಿಕಾರ ಬದಲಾವಣೆ ಕೂಗು ರಾಜಕೀಯದಲ್ಲಿ ಕೇಳಿ ಬರುತ್ತಿರುವ ಸಂದರ್ಭದಲ್ಲಿ ಹೊರ ಬಿದ್ದಿರುವ ಭವಿಷ್ಯವಾಣಿ ರಾಜ್ಯ ರಾಜಕೀಯ ಕುರಿತು ಸ್ಥಳೀಯ ಮಟ್ಟದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.