ADVERTISEMENT

ತುಂಗಭದ್ರಾ ನದಿಗೆ ನೀರು; ಎಚ್ಚರದಿಂದ ಇರಲು ಸೂಚನೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2025, 13:38 IST
Last Updated 6 ಫೆಬ್ರುವರಿ 2025, 13:38 IST
<div class="paragraphs"><p>ತುಂಗಭದ್ರಾ ನದಿ</p></div>

ತುಂಗಭದ್ರಾ ನದಿ

   

ಗದಗ: ವಿಜಯನಗರ ಜಿಲ್ಲೆ, ಹೂವಿನಹಡಗಲಿ ತಾಲ್ಲೂಕು, ಮೈಲಾರ ಗ್ರಾಮದ ಮೈಲಾರಲಿಂಗೇಶ್ವರ ಸ್ವಾಮಿಯ ವಾರ್ಷಿಕ ಕಾರ್ಣಿಕೋತ್ಸವದ ಪ್ರಯುಕ್ತ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಫೆಬ್ರುವರಿ 5 ರಿಂದ 11 ರವರೆಗೆ ಒಟ್ಟು 5,800 ಕ್ಯೂಸೆಕ್ಸ್ ಪ್ರಮಾಣದ ನೀರನ್ನು ಭದ್ರಾ ನದಿಗೆ ಹರಿಸಲಾಗುವುದು.

ಈ ಅವಧಿಯಲ್ಲಿ ಸಾರ್ವಜನಿಕರು ಮತ್ತು ರೈತರು ನದಿಯಲ್ಲಿ ತಿರುಗಾಡುವುದು, ದನಕರುಗಳನ್ನು ಮೇಯಿಸುವುದು ಮತ್ತು ತೋಟಗಾರಿಕೆ ಸಂಬಂಧಿಸಿದ ಕೆಲಸ ಮಾಡುವುದು ಇತ್ಯಾದಿಗಳನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಮತ್ತು ರೈತರು ನದಿ ದಂಡೆಯಲ್ಲಿ ಪಂಪ್‍ಸೆಟ್ ಅಳವಡಿಸುವುದು ಮತ್ತು ಅನಧಿಕೃತವಾಗಿ ನೀರೆತ್ತುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಪ್ರಕಟಣೆಯನ್ನು ಹೊರಡಿಸಲಾಗಿದೆ.

ADVERTISEMENT

ಫ್ಯಾಷನ್ ಡಿಸೈನರ್ ಉಚಿತ ಹೊಲಿಗೆ ತರಬೇತಿಗಾಗಿ ಅರ್ಜಿ ಆಹ್ವಾನ

ಗದಗ: ಅಪಾರೆಲ್‌ ಟ್ರೈನಿಂಗ್ ಆ್ಯಂಡ್‌ ಡಿಸೈನ್ ಸೆಂಟರ್, ಕೌಶಲ ವಿಕಾಸ ಮತ್ತು ಉದ್ಯಮಶೀಲತಾ ಸಚಿವಾಲಯದ ಸಹಭಾಗಿತ್ವದಲ್ಲಿ ಎಲ್ಲ ಹಿಂದುಳಿದ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಕೌಶಲಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳಾದ 6 ತಿಂಗಳ ಅವಧಿಯ ಫ್ಯಾಷನ್ ಡಿಸೈನರ್ ಉಚಿತ ಹೊಲಿಗೆ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವವರು ಗದಗ ಜಿಲ್ಲೆಯ ನಿವಾಸಿಯಾಗಿರಬೇಕು, 20 ರಿಂದ 40 ವಯೋಮಾನದವರಾಗಿರಬೇಕು, ಕನಿಷ್ಠ 12ನೇ ತರಗತಿ, ಐಟಿಐ, ಡಿಪ್ಲೊಮಾ ಪಾಸಾಗಿರಬೇಕು. ಎಲ್ಲ ಹಿಂದುಳಿದ ವರ್ಗಕ್ಕೆ ಸೇರಿದ ಮೇಲಿನ ಅರ್ಹತೆಯನ್ನು ಹೊಂದಿರುವ ಆಸಕ್ತ ಅಭ್ಯರ್ಥಿಗಳು ಅಪಾರೆಲ್‌ ಟ್ರೈನಿಂಗ್ ಆ್ಯಂಡ್‌ ಡಿಸೈನ್ ಸೆಂಟರ್ (ಎ.ಟಿ.ಡಿ.ಸಿ) 1ನೇ ಮಹಡಿ, ಕುಷ್ಟಗಿ ಬಿಲ್ಡಿಂಗ್, ಪಾಲಾ ಬದಾಮಿ ರಸ್ತೆ ಬೆಟಗೇರಿ-ಗದಗ, ಈ ವಿಳಾಸಕ್ಕೆ ದೃಢೀಕೃತ ದಾಖಲೆಗಳ 4 ಪ್ರತಿಗಳೊಂದಿಗೆ ಹಾಗೂ ಇತ್ತೀಚಿನ 6 ಭಾವಚಿತ್ರದೊಂದಿಗೆ ಫೆ.22ರ ಒಳಗೆ ಅರ್ಜಿ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.

ಮಾಹಿತಿಗೆ: 98442 36030, 96066 40980 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.