ADVERTISEMENT

ಅಂಬೇಡ್ಕರ್ ಸಮಾನತೆ ಸಾರಿದ ವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 8:10 IST
Last Updated 21 ಏಪ್ರಿಲ್ 2012, 8:10 IST

ಹೊಳೆನರಸೀಪುರ: ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯ ದಿನವನ್ನು ಸಮಾನತೆಯ ದಿನವನ್ನಾಗಿ ಆಚರಿಸಿದರೆ ಅವರಿಗೆ ನಾವು ಹೆಚ್ಚಿನ ಗೌರವ ನೀಡಿದಂತಾಗುತ್ತದೆ ಎಂದು ಕೆ.ಆರ್.ಪೇಟೆ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಕೆ.ಆರ್. ಯೋಗೇಶ್ ನುಡಿದರು.

ಶುಕ್ರವಾರ ಗೃಹ ವಿಜ್ಞಾನ ಕಾಲೇ ಜಿನಲ್ಲಿ ಆಯೋಜಿಸಿದ್ದ 121ನೇ ಅಂಬೇ ಡ್ಕರ್ ಜಯಂತಿಯಲ್ಲಿ ಮಾತನಾಡಿದರು.ಅಂಬೇಡ್ಕರ್ ಅವರು ಪರಿಶಿಷ್ಟ ಜಾತಿ ಜನರಿಗಾಗಿ ಮಾತ್ರ ಸಮಾನತೆ ನೀತಿ ಹೇಳಲಿಲ್ಲ. ಎಲ್ಲ ನೊಂದ ವರ್ಗದ ಜನ ರಿಗಾಗಿ ಸಾರಿದ್ದಾರೆ ಎಂದು ನುಡಿದರು.

ಭಾರತೀಯರೆಲ್ಲರೂ ದೇಶದ ಕಾನೂನು ಅರಿತು ಅದಕ್ಕೆ ಗೌರವ ತರುವಂತೆ ನಡೆದುಕೊಂಡರೆ ಭಾರತದ ಗೌರವ ಹೆಚ್ಚುತ್ತದೆ ಎಂದರು. ಪ್ರದ್ಯಾಪಕ ರಮೇಶ್ ಪ್ರಾಂಶುಪಾಲ ಎಚ್. ಚನ್ನವೀರಪ್ಪ ಇದ್ದಾರೆ.

ಮುಕ್ತ ವಿವಿ ಪರೀಕ್ಷೆ ಆರಂಭ: ಮೈಸೂರು ಮುಕ್ತ ವಿಶ್ವವಿದ್ಯಾನಿಲಯದ ವಾರ್ಷಿಕ ಪರೀಕ್ಷೆ ಶುಕ್ರವಾರದಿಂದ ಪ್ರಾರಂಭವಾಗಿದ್ದು, ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಪರೀಕ್ಷಾ ಕೇಂದ್ರದಲ್ಲೂ ಪರೀಕ್ಷೆ ನಡೆಯಿತು.

ಇಲ್ಲಿನ 7 ಕೊಠಡಿಗಳಲ್ಲಿ ಪರೀಕ್ಷೆಗೆ ಅವಕಾಶ ಮಾಡಿಕೊಡಲಾ ಗಿದ್ದು ಮೊದಲ ದಿನದ ಕನ್ನಡ ಭಾಷೆಗೆ 200 ಪಾಲ್ಗೊಂಡಿದ್ದರು.ಕ್ಕೂ ಹೆಚ್ಚು ಜನರು ಪರೀಕ್ಷೆ ಬರೆದರು. ಪ್ರಾಂಶು ಪಾಲ ಟಿ.ಎಂ. ಪರಮೇಶ್ವರಯ್ಯ ಮುಖ್ಯ ಪರೀಕ್ಷಕರಾಗಿದ್ದು ಪರೀಕ್ಷೆಗಳಯ ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲದಂತೆ ನಡೆಯಿತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.