ಹಾಸನ: ಮಕ್ಕಳಿಗೆ ನೀಡುವ ಆಹಾರವು ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಾಗಿರಬೇಕು ಎಂದು ಡಾ.ದಿನೇಶ್ ಬಿ.ಕಬ್ಳಿಗೆರೆ ತಿಳಿಸಿದರು.
ನಗರದ ಯುನೈಟೆಡ್ ಅಕಾಡೆಮಿ ಶಾಲೆಯಲ್ಲಿ ರೋಟರಿ ಹಾಸನ -ಮಿಡ್ ಟೌನ್ ಸಂಸ್ಥೆ ಹಾಗೂ ಭಾರತೀಯ ಶಿಶು ತಜ್ಞರ ಸಂಘ ಈಚೆಗೆ ಆಯೋಜಿಸಿದ್ದ `ವಿಶ್ವ ಹದಿಹರೆಯರ ದಿನಾಚರಣೆ~ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸತ್ವಭರಿತ ಬೇಳೆ ಕಾಳುಗಳು, ಸೋಪ್ಪು, ಹಣ್ಣು, ಹಾಲಿನ ಉತ್ಪನ್ನ ಹಾಗೂ ಮೊಟ್ಟೆಯಂತಹ ಪದಾರ್ಥವನ್ನು ಸೇವಿಸುವಂತೆ ಮಾಹಿತಿ ನೀಡಿದರು.
ರೋಟರಿ ಹಾಸನ ಮಿಡ್‌ಟೌನ್ ಸಂಸ್ಥೆಯ ಅಧ್ಯಕ್ಷ ಡಾ.ಬಿ. ಸುಧೀರ್ ಹದಿಹರೆಯದವರ ಬೌದ್ಧಿಕ, ಲೈಂಗಿಕ ಹಾಗೂ ಸಂತಾನಾಭಿವೃದ್ಧಿ ಬೆಳವಣಿಗೆಗಳು ಮತ್ತು ಸಮಸ್ಯೆಗಳ ಬಗ್ಗೆ ಉಪನ್ಯಾಸ ನೀಡಿದರು.
ಮಾನಸಿಕ ತಜ್ಞೆ ಡಾ.ಶ್ರೀದೇವಿ ಹದಿಹರೆಯದವರ ಮಾನಸಿಕ ಬೆಳವಣಿಗೆ ಹಾಗೂ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು. ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ತಜ್ಞರ ಬಳಿ ಪ್ರಶ್ನೆಗಳನ್ನು ಕೇಳಿ ಪರಿಹಾರ ಕಂಡುಕೊಂಡರು.
ಸಿ.ಎಂ.ಚಂದ್ರಶೇಖರ್, ವಂದನಾ, ರೋಟರಿ ಮಿಡ್‌ಟೌನ್ ಕಾರ್ಯರ್ಶಿ ರಘು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.