ADVERTISEMENT

ಎತ್ತಿನಹೊಳೆಯಿಂದ ಬರಪೀಡಿತ ಪ್ರದೇಶಕ್ಕೆ ನೀರು: ಶಾಸಕ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2012, 9:25 IST
Last Updated 5 ನವೆಂಬರ್ 2012, 9:25 IST

ಜಾವಗಲ್: ಎತ್ತಿನ ಹೊಳೆ ನೀರಾವರಿ ಯೋಜನೆಯಡಿ ಸಂಗ್ರಹವಾಗುವ ನೀರನ್ನು ಜಾವಗಲ್ ಸೇರಿದಂತೆ
ಹಳೇಬೀಡು ಮತ್ತು ಅರಸೀಕೆರೆ ತಾಲ್ಲೂಕಿನ ಕೆರೆಗಳಿಗೂ ಹರಿಸಬೇಕು ಎಂದು ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ತಿಳಿಸಿದರು.

ಜಾವಗಲ್ ಸಮೀಪದ ಕರಗುಂದ ಗ್ರಾಮದಲ್ಲಿ ಶನಿವಾರ ರಾತ್ರಿ ಕುವೆಂಪು ಕನ್ನಡ ಗೆಳೆಯರ ಬಳಗ ಏರ್ಪಡಿಸಿದ್ದ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎತ್ತಿನ ಹೊಳೆ ನೀರಾವರಿ ಯೋಜನೆಗೆ ಸೌಲಭ್ಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕರಗುಂದ ಗ್ರಾಮದಿಂದಲೇ ಪಾದ ಯಾತ್ರೆ ಆರಂಭಿಸುವುದಾಗಿ ತಿಳಿಸಿದ ಅವರು, ಈ ಯೋಜನೆಯಡಿ ಬರಗಾಲ ಪೀಡಿತ ಪ್ರದೇಶಗಳ ಕೆರೆಗಳಿಗೆ ಮೊದಲು ನೀರಾವರಿ ಸೌಲಭ್ಯ ಕಲ್ಪಿಸಿ ನಂತರ ಬೇರೆ ಕಡೆಗಳಿಗೆ ನೀರು ಹರಿಸಬೇಕು ಎಂದರು.

ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷ ಜಾವಗಲ್ ಪ್ರಸನ್ನಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ಹುಚ್ಚೇಗೌಡ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಪ್ರೇಮಮ್ಮ ನಿಂಗಪ್ಪ, ತಾಲ್ಲೂಕ್ ಪಂಚಾಯಿತಿ ಮಾಜಿಉಪಾಧ್ಯಕ್ಷ ರಂಗಾಪುರ ಶಿವಶಂಕರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕಲ್ಯಾಣಪ್ಪ ಮಾತನಾಡಿದರು.

ಬಹುಮಾನವನ್ನು ಎಪಿ.ಎಂಸಿ ಮಾಜಿ ಸದಸ್ಯ ಸಿಂಗಟಗೆರೆ ರಾಮಣ್ಣ ನೀಡಿ ಗೌರವಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕುವೆಂಪು ಕನ್ನಡ ಗೆಳೆಯರ ಬಳಗದ ಅಧ್ಯಕ್ಷ ಸುರೇಶ್‌ವಹಿಸಿದ್ದರು. ವೇದಿಕೆಯಲ್ಲಿ ತಾಲ್ಲೂಕ್ ಪಂಚಾಯಿತಿ ಸದಸ್ಯೆ ಚಿಕ್ಕಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬೀರಮ್ಮ ಉಪಾಧ್ಯಕ್ಷೆ ಲತಾ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ ರೆಡ್ಡಿ, ಕಾರ್ಯದರ್ಶಿ ಶಿವನಂಜಪ್ಪ ರೆಡ್ಡಿ, ಕಲಾವಿದ ನರಸಿಂಹ ಶೆಟ್ಟಿ, ಶಿಕ್ಷಕ ಸ್ವಾಮಿ, ಶಂಕರನಹಳ್ಳಿ ಪ್ರಭಾಕರ, ಕೆ.ಎಸ್.ರವಿಕುಮಾರ್, ಮನುಕುಮಾರ್, ಚಂದ್ರಶೇಖರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.