ADVERTISEMENT

ಕಳಪೆ ರಸ್ತೆ ಕಾಮಗಾರಿ: ನಾಗರಿಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2011, 8:55 IST
Last Updated 11 ಮಾರ್ಚ್ 2011, 8:55 IST
ಕಳಪೆ ರಸ್ತೆ ಕಾಮಗಾರಿ: ನಾಗರಿಕರ ಆಕ್ರೋಶ
ಕಳಪೆ ರಸ್ತೆ ಕಾಮಗಾರಿ: ನಾಗರಿಕರ ಆಕ್ರೋಶ   

ಹಾಸನ: ‘ನಗರ ಪಾಲಿಕೆಯವರು ಹಾಸನದ ಕೆಲವು ಪ್ರದೇಶದಲ್ಲಿ ರಸ್ತೆ ಡಾಂಬರೀಕರಣದ ಕೆಲಸ ಆರಂಭಿಸಿದ್ದು, ಕಾಮಗಾರಿಯ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೆಲವೆಡೆ ನಗರಸಭೆ ಯವರು ಹಾಕಿದ್ದ ಡಾಂಬರ್ ಕೆಲವೇ ಗಂಟೆಗಳಲ್ಲಿ ಕಿತ್ತು ಬಂದಿದೆ. ನಗರದ 6ನೇ ವಾರ್ಡ್‌ನ ಎಸ್‌ಜೆಪಿ ರಸ್ತೆಯಲ್ಲಿ ಬುಧವಾರ ಡಾಂಬರು ಹಾಕಲಾಗಿದ್ದು ಆ ರಸ್ತೆಯಲ್ಲಿ ಜನರು ನಡೆದಾಡುತ್ತಿದ್ದಾಗಲೇ ಅದು ಕಿತ್ತು ಬಂದಿರುವ ಅಂಶ ಬೆಳಕಿಗೆ ಬಂದಿತು.

ಈ ಬಗ್ಗೆ ಮಾಧ್ಯಮದವರಿಗೆ ವಿಷಯ ತಿಳಿಸಿದ ಸ್ಥಳೀಯರು ಬೂಟುಗಾಲಿನಿಂದ ಸರಿಯಾಗಿ ಒದ್ದಾಗ ಡಾಂಬರು ಕಿತ್ತುಬರುವುದನ್ನು ತೋರಿಸಿದರು. ಕಾಮಗಾರಿಗೆ ಹಾಕಲಾದ ಬಹುತೇಕ ಟಾರು ಕಿತ್ತು ಬಂದಿರುವುದು ಕಾಣಿಸಿತು. ಗುರುವಾರ ಸಂಜೆ ನಗರಸಭೆ ಅಧ್ಯಕ್ಷ ಸಿ.ಆರ್. ಶಂಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕಲ್ಲಿನಿಂದ ತಿಕ್ಕಿದಾಗ ಡಾಂಬರು ಹೊರಬರುತ್ತಿರುವುದನ್ನು ಅವರೂ ಸ್ವತಃ ಪರೀಕ್ಷಿಸಿ ನೋಡಿದರು. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.