ADVERTISEMENT

ಕುಡಿಯುವ ನೀರಿನ ಯೋಜನೆ ಅನುಷ್ಠಾನ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 8:40 IST
Last Updated 17 ಅಕ್ಟೋಬರ್ 2012, 8:40 IST

ಬಾಣಾವರ: ಹಿರಿಯ ನಾಗರಿಕರು, ಪಟ್ಟಣದ ಪ್ರಮುಖರು, ಪಕ್ಷಾತೀತವಾಗಿ ಶಾಶ್ವತ ಕುಡಿಯುವ ನೀರಿನ ಯೋಜ ನೆಯ ಅನುಷ್ಠಾನಕ್ಕಾಗಿ ಸರ್ಕಾರದ ಬಳಿ ನಿಯೋಗ ತೆರಳುವ ಅವಶ್ಯಕತೆ ಇದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಬಿಕಾ ರಮೇಶ್ ತಿಳಿಸಿದರು.

ಪಟ್ಟಣದ ಗ್ರಾಮ ಪಂಚಾಯಿತಿ ಆವರಣದಲ್ಲಿ ಮಂಗಳವಾರ ಹಮ್ಮಿಕೊ ಳ್ಳಲಾಗಿದ್ದ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಾಣಾವರ ಹೋಬಳಿಯಲ್ಲಿ ಮಳೆ ಅಭಾವದಿಂದ ಅಂತರ್ಜಲ ಮಟ್ಟ ಕುಸಿದು ಬೇಸಿಗೆ ಮುನ್ನವೇ ನೀರಿನ ಸಮಸ್ಯೆ ಆರಂಭವಾಗಿದೆ. ಈಗ ಇರುವ ಕೊಳವೆ ಬಾವಿಗಳು ಬತ್ತಿವೆ. ಹೆಚ್ಚುತ್ತಿ ರುವ ಜನಸಂಖ್ಯೆಗೆ ತಕ್ಕಂತೆ ನೀರು ಪೂರೈಸಲು ಕೆರೆ ಕಟ್ಟೆಗಳಿಗೆ ನೀರು ಹಾಯಿಸುವಂತೆ ಸರ್ಕಾರಕ್ಕೆ ಮನವಿ ಮಾಡಲು ಸದ್ಯದಲ್ಲೇ ಮಹಿಳೆಯರನ್ನು ಒಳಗೊಂಡ ನಿಯೋಗ  ಕರೆದುಕೊಂಡು ಹೋಗಲಾಗುವುದು ಎಂದರು.

  ಕೃಷಿ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಬಿ.ಸಿ. ಶ್ರೀನಿವಾಸ್ ಮಾತನಾಡಿ, ಅಧಿಕಾರಿಗಳು ಪಟ್ಟಣದಲ್ಲಿ ಹೆಚ್ಚುತ್ತಿ ರುವ ಸಮಸ್ಯೆಗಳಿಗೆ ತಕ್ಕಂತೆ ಸ್ಪಂದಿಸಿ ಕೆಲಸ ಮಾಡಬೇಕು ಎಂದರು.

ನಿವೃತ್ತ ಮುಖ್ಯಾಧಿಕಾರಿ ರಾಮ ಕೃಷ್ಣಯ್ಯ ಮಾತನಾಡಿ, ಗ್ರಾಮ ಪಂಚಾ ಯಿತಿ ಕಚೇರಿಯಲ್ಲಿ ಜನರ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡ ಬೇಕು. ಗ್ರಾಮ ಸಭೆಗಳಲ್ಲಿ ಎಲ್ಲ ಇಲಾಖಾ ಅಧಿಕಾರಿಗಳು ಬಂದು ಸರ್ಕಾರದ ಯೋಜನೆಗಳ ವಿವರ ಜನರಿಗೆ ತಿಳಿಸು ವಂತೆ ಕ್ರಮಕೈಗೊಳ್ಳಬೇಕು ಎಂದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ವಿಶಾಲಕ್ಷಮ್ಮ ಮಾತನಾಡಿ, ಪಟ್ಟಣದಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದ್ದು, ವೈಜ್ಞಾನಿಕ ಮಾದರಿಯಲ್ಲಿ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಬೇಕು. ಅಲ್ಲಿ ವರೆಗೂ ಸಮಸ್ಯೆ ಇರುವ ಬಡಾವಣೆ ಗಳಿಗೆ ಟ್ಯಾಂಕರ್ ಮೂಲಕ  ಪಂಚಾಯಿ ತಿಯವರು ಕನಿಷ್ಠ ಒಂದು ಮನೆಗೆ 10 ಕೂಡ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.

  ಪತ್ರಕರ್ತ ಬಿ.ಆರ್. ಮಹಾಲಿಂಗಪ್ಪ ಮಾತನಾಡಿ, ಸ್ಮಶಾನದ ಬಳಿ ಇರುವ ಕೊಳವೆಬಾವಿಯಿಂದ ನೀರು ಸರಬರಾಜಿಗೆ ಕೈಗೊಳ್ಳಬೇಕು ಎಂದರು.

ಸಹಾಯಕ ಕಾರ್ಯಪಾಲಕ ರಾಮಚಂದ್ರ ಮಾತನಾಡಿ, ಎರಡನೇ ಹಂತದ ಹೇಮಾವತಿ ನೀರು ಸರಬರಾಜು ಯೋಜನೆಯ ಪ್ರಕ್ರಿಯೆ ಟೆಂಡರ್ ಹಂತದಲ್ಲಿದೆ. ಆ ಯೋಜನೆಯಲ್ಲಿ ಬಾಣಾವರವೂ ಸೇರಿದಂತೆ ಸುತ್ತಲಿನ ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಕಾಣಲಿದೆ. ಪಟ್ಟಣದಲ್ಲಿ ಈಗಾಗಲೇ 1 ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ಕಟ್ಟಲು ಉದ್ದೇಶಿಸಿದ್ದು, ಸ್ಥಳ ಪರಿಶೀಲನೆ ನಡೆಯುತ್ತಿದೆ ಎಂದರು.

ರೇಷ್ಮೆ ಇಲಾಖೆ ಅಧಿಕಾರಿ ರುದ್ರೇಶ್ ಮಾತನಾಡಿ, ರೈತರಿಗೆ ಹಿಪ್ಪು ನೇರಳೆ ಬೆಳೆಯಲು ಸಹಾಯ ಧನ ನೀಡುವುದ ಲ್ಲದೆ ಉಚಿತ ತರಬೇತಿ ನೀಡಲಾಗುವುದು ಎಂದರು.

ಅರಣ್ಯ ಇಲಾಖೆಯ ಜನಾರ್ದನ ಮಾತನಾಡಿ, ಬಾಣಾವರ ಪಂಚಾಯಿತಿ ವ್ಯಾಪ್ತಿಗೆ ಬರುವ ರೈತರಿಗೆ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಲ್ಲಿ ಉಚಿತ ಸಸಿ ನೀಡಿ ಅವುಗಳ ಸಂರಕ್ಷಣೆಗಾಗಿ ಧನ ಸಹಾಯ ನೀಡಲಾಗುವುದು ಎಂದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿ. ವಾಸಪ್ಪ, ಗ್ರಾಮ ಪಂಚಾಯಿತಿ ಸದಸ್ಯ ರಾದ ಆರೀಫ್ ಜಾನ್, ವಿಶಾಲಕ್ಷಮ್ಮ, ಪುಪ್ಪಾ ಪ್ರಕಾಶ್, ಜಯಮ್ಮ, ಮಮತಾ ಜಯರಾಂ, ಇತಿಯಾಜ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಓಂಕಾರಮೂರ್ತಿ ಇತರರು ಇದ್ದರು. ಗ್ರಾಮ ಪಂಚಾಯಿತಿ ಸದಸ್ಯ ಜಿ.ಕೆ. ಸತೀಶ್ ಸ್ವಾಗತಿಸಿ, ಕಾರ್ಯದರ್ಶಿ ಶಾರದಮ್ಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.