ADVERTISEMENT

ಚುನಾವಣೆ ಭದ್ರತೆ: 250 ಯೋಧರು ನಿಯೋಜನೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2013, 8:19 IST
Last Updated 22 ಏಪ್ರಿಲ್ 2013, 8:19 IST

ಬೇಲೂರು: ಈ ವಿಧಾನಸಭಾ ಕ್ಷೇತ್ರದಲ್ಲಿ 265 ಮತಗಟ್ಟೆಗಳಿದ್ದು ಈ ಪೈಕಿ 37 ಮತಗಟ್ಟೆಗಳನ್ನು ಅತಿಸೂಕ್ಷ್ಮ, 70 ಮತಗಟ್ಟೆಗಳನ್ನು ಸೂಕ್ಷ್ಮ, 10 ಮತಗಟ್ಟೆಗಳನ್ನು ವಿಡಿಯೋ ಕ್ಯಾಮರಾ ಮತಗಟ್ಟೆಗಳು ಮತ್ತು 148 ಮತಗಟ್ಟೆಗಳನ್ನು ಸಾಮಾನ್ಯ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ಚುನಾವಣಾ ಭದ್ರತೆಗೆ ಸ್ಥಳೀಯ ಪೊಲೀಸರ ಜೊತೆಗೆ 250 ಅರೆ ಸೇನಾಪಡೆ ಯೋಧರನ್ನು ನಿಯೋಜಿಸಲಾಗಿದೆ ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಆರ್.ಶ್ರೀಕಾಂತ್ ತಿಳಿಸಿದರು.

ನೀತಿ ಸಂಹಿತೆ ಉಲ್ಲಂಘನೆ ಪರಿಶೀಲನೆಗೆ ಒಂಬತ್ತು ಫ್ಲೈಯಿಂಗ್ ಸ್ಕ್ವಾಡ್ ತಂಡಗಳು ಕಾರ್ಯ ನಿರ್ವಹಿಸುತ್ತಿದ್ದು, ವಾಹನಗಳ ತಪಾಸಣೆಗಾಗಿ ಚಿಕ್ಕಮಗಳೂರು ರಸ್ತೆಯ ಚನ್ನಾಪುರ ಮತ್ತು ಮೂಡಿಗೆರೆ ರಸ್ತೆಯ ಚೀಕನಹಳ್ಳಿ ಬಳಿ ಚೆಕ್‌ಪೋಸ್ಟ್‌ಗಳನ್ನ ತೆರೆಯಲಾಗಿದೆ.

ಚುನಾವಣಾ ಬಂದೋಬಸ್ತ್‌ಗೆ ಯೋಧರು ಈಗಾಗಲೇ ಬಂದಿದ್ದು, ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅತಿಸೂಕ್ಷ್ಮ ಮತಗಟ್ಟೆಯ ಪ್ರತಿ ಕೇಂದ್ರಕ್ಕೆ ಒಬ್ಬ ಅರೆ ಸೇನಾಪಡೆ ಯೋಧನನ್ನು ನೇಮಕ ಮಾಡಲಾಗುತ್ತಿದೆ. ಚುನಾವಣೆ ನಡೆಯುವ ದಿನ 15 ಪೊಲೀಸ್ ಮೊಬೈಲ್ ಸ್ಕ್ವಾಡ್‌ಗಳು ಕಾರ್ಯ ನಿರ್ವಹಿಸಲಿವೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.