ADVERTISEMENT

ಜನರ ಆಶೋತ್ತರಗಳಿಗೆ ಸ್ಪಂದಿಸಿ

ಸುತ್ತೂರು ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2016, 9:35 IST
Last Updated 23 ಜನವರಿ 2016, 9:35 IST
ಹಾಸನಾಂಬ ಕಲಾಕ್ಷೇತ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಅವರನ್ನು ನಾಗರಿಕರ ಪರವಾಗಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸನ್ಮಾನಿಸಿದರು
ಹಾಸನಾಂಬ ಕಲಾಕ್ಷೇತ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಅವರನ್ನು ನಾಗರಿಕರ ಪರವಾಗಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸನ್ಮಾನಿಸಿದರು   

ಹಾಸನ: ‘ಸ್ನೇಹಜೀವಿಯಾಗಿ ಗುರುತಿಸಿ ಕೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಮುಂದಿನ ದಿನಗಳಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ, ಅಭಿವೃದ್ಧಿಯತ್ತ  ಜಿಲ್ಲೆ ಕೊಂಡೊಯ್ಯು ವಂತಾಗಲಿ’ ಎಂದು ಸುತ್ತೂರು ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾರೈಸಿದರು.

ನಗರದ ಹಾಸನಾಂಬ ಕಲಾಕ್ಷೇತ್ರ ದಲ್ಲಿ ನಾಗರಿಕ ವೇದಿಕೆ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ‘ಸಚಿವ ಎ. ಮಂಜು ಅವರಿಗೆ ಅಭಿನಂದನಾ ಸಮಾರಂಭ’ದ ಸಾನ್ನಿಧ್ಯವಹಿಸಿ ಮಾತನಾಡಿದರು.

‘ವಿದ್ಯಾರ್ಥಿ ದಿನಗಳಿಂದಲೇ ರಾಜಕೀಯ ಪ್ರವೃತ್ತಿ ಬೆಳೆಸಿಕೊಂಡ ಮಂಜು, ಇಂದು ಉನ್ನತಮಟ್ಟಕ್ಕೇರಿ ದ್ದಾರೆ. ಸಹಜವಾಗಿಯೇ ಜಿಲ್ಲೆಯ ಜನರಿಗೆ ಅವರ ಮೇಲೆ ಆಶಾಭಾವ ಉಂಟಾಗಿದೆ. ಜಿಲ್ಲೆಯಾದ್ಯಂತ ತಲೆ ದೋರಿರುವ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಇದಕ್ಕೆ ಜಿಲ್ಲೆಯ ಜನರ ಹಾಗೂ ದೇವರ ಆಶೀರ್ವಾದ ಇರಲಿದೆ’ ಎಂದರು.

‘ಒಬ್ಬ ವ್ಯಕ್ತಿ ತನ್ನ ಕ್ಷೇತ್ರದಲ್ಲಿ ಪರಿಣತಿ ಹೊಂದಬೇಕೆಂದರೆ ಕಾಲಾವಕಾಶ ಬೇಕು. ತಾಳ್ಮೆ, ಸಂಯಮ ಹಾಗೂ ಪ್ರಾಮಾಣಿಕತೆ ಮುಖ್ಯ. ಇಂದಿನ ದಿನಗ ಳಲ್ಲಿ ಯಾವುದಾದರೊಂದು ಅಧಿಕಾರ ಸಿಕ್ಕರೆ ಅಹಂಕಾರ ತೋರುವ ಜನ ಹೆಚ್ಚಾಗಿದ್ದಾರೆ. ಆದರೆ, ಎ. ಮಂಜು ಮೊದಲಿರುವ ಹಾಗೆಯೇ ತಮ್ಮ ವ್ಯಕ್ತಿತ್ವ ಉಳಿಸಿಕೊಂಡಿದ್ದಾರೆ. ಆದ್ದರಿಂದಲೇ ಅವರಿಂದ ಜಿಲ್ಲೆಯ ಜನರು ಬದಲಾವಣೆ ಬಯಸಿದ್ದಾರೆ’ ಎಂದರು.

ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಮಾತ ನಾಡಿ, ‘ವ್ಯಕ್ತಿ ತಾನು ಎಷ್ಟೇ ಉನ್ನತಮಟ್ಟ ಕ್ಕೇರಿದರೂ ಹೆತ್ತ ತಾಯಿ, ಹೊತ್ತ ನಾಡು ಮರೆಯಬಾರದು. ಇಂತಹ ದಿನಗಳಲ್ಲಿ ಸಜ್ಜನಿಕೆ ರಾಜಕಾರಣಿ ಕಾಣುವುದು ಅಪರೂಪ. ಜೀವನದ ಪ್ರತಿಯೊಂದು ಹಂತದಲ್ಲಿ ಸೋಲು– ಗೆಲುವ ಕಂಡ ಮಂಜು, ಈ ಕ್ಷೇತ್ರದಲ್ಲಿ ಪರಿಣತಿ ಸಾಧಿಸಿ ದ್ದಾರೆ. ಜಿಲ್ಲೆ ಅಭಿವೃದ್ಧಿ ಕುರಿತ ಅವರ ಕನಸು ಬಹುದೊಡ್ಡದಿದೆ. ಮುಂದಿನ ದಿನಗಳಲ್ಲಿ ಅವರ ಕಾರ್ಯ ಯೋಜನೆ ಸಾಕಾರಗೊಳ್ಳಲಿ’ ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾ ಡಿದ ಸಚಿವ ಎ. ಮಂಜು, ‘ಅರಕಲ ಗೂಡು ತಾಲ್ಲೂಕಿನ ಹನ್ಯಾಳು ಗ್ರಾಮ ದಲ್ಲಿ ಜನಿಸಿದ ನನಗೆ ರಾಜಕೀಯ ಪಾಠ ಕಲಿಸಿದ್ದು ಬೆಂಗಳೂರು. ಆದರೆ, ನಾನು ಹುಟ್ಟಿದ ಊರಿನಲ್ಲೇ ರಾಜಕೀಯ ವೃತ್ತಿ ಆರಂಭಿಸಿದೆ. ಅಂದಿನ ದಿನಗಳಲ್ಲಿ ರಾಜಕೀಯ ದಲ್ಲಿ ಬೆಳೆಯುವುದು ಕಷ್ಟವಾಗಿತ್ತು.

ಆದರೆ, ನನ್ನ ಅಮ್ಮನ ಆಶೀರ್ವಾದದಿಂದ ಅದು ಸಾಕಾರ ಗೊಂಡಿತು. ಸಚಿವ ಪದವಿ ಸಿಕ್ಕಿತೆಂಬ ಅಹಂ ನನಗಿಲ್ಲ. ಈ ಕನಸನ್ನು ನಾನು ಬಹಳ ದಿನಗಳ ಹಿಂದೆ ಕಂಡಿದ್ದೆ. ಜಿಲ್ಲೆಯ ಅಭಿವೃದ್ಧಿಯೇ ನನ್ನ ಪ್ರಮುಖ ಆದ್ಯತೆ ಯಾಗಿದ್ದು, ಸಾರ್ವಜನಿ ಕರ ಸಲಹೆ– ಸೂಚನೆ ಬಯಸುತ್ತೇನೆ. ಜಿಲ್ಲೆಯ ವಿವಿಧ ಯೋಜನೆಗಳ ಅಭಿವೃದ್ಧಿ ದೃಷ್ಟಿಯಿಂದ ವಾರದ ಎರಡು ದಿನ ಹಾಸನದಲ್ಲಿಯೇ ವಾಸ್ತವ್ಯ ಹೂಡುತ್ತೇನೆ. ಒಳ್ಳೆಯತನ, ಪ್ರಾಮಾಣಿಕತೆ ಹಾಗೂ ಪರಿಶ್ರಮಕ್ಕೆ ಫಲ ಸಿಗುತ್ತದೆ ಎಂಬುದನ್ನು ನಾನು ನಂಬಿದ್ದೇನೆ. ಜಿಲ್ಲೆಯ ಸೇವೆ ಮಾಡಲು ಅವಕಾಶ ನೀಡಿದ ಎಲ್ಲ ಮತದಾರರಿಗೆ ಕೃತಜ್ಞನಾಗಿರುತ್ತೇನೆ’ ಎಂದರು.

ಸಮಾಜಸೇವಕ ಡಾ.ಗುರುರಾಜ್ ಹೆಬ್ಬಾರ್, ಗಾಯಕ ಆರ್.ಕೆ. ಪದ್ಮನಾಭನ್, ಆರ್‌.ಪಿ. ವೆಂಕಟೇಶ್ ಮೂರ್ತಿ, ಶಿವಾನಂದ ತಗಡೂರು ಮಾತ ನಾಡಿದರು. ರವಿ ನಾಕಲಗೂರು ಸ್ವಾಗ ತಿಸಿದರು. ಹಾಗೂ ಚಂದ್ರಶೇಖರ್ ನಿರೂಪಿಸಿದರು.

ಸಚಿವರಿಗೆ ಪ್ರಸ್ತಾವಗಳು...
ಸಮಾರಂಭದಲ್ಲಿ ಎ. ಮಂಜು ಅವರಿಗೆ ಜಿಲ್ಲೆಯ ಅಭಿವೃದ್ಧಿ ಕುರಿತ ಕೆಲವು ಪ್ರಸ್ತಾವ ಸಲ್ಲಿಸಲಾಯಿತು. ಕೊಳೆಗೇರಿಮುಕ್ತ ಜಿಲ್ಲೆಯಾಗಿ ಪರಿವರ್ತಿಸಲು ವಸತಿ ಯೋಜನೆ ರೂಪಿಸುವುದು, ವ್ಯವಸಾಯ ಕ್ಷೇತ್ರದಲ್ಲಿ ರಾಸಾಯನಿಕಮುಕ್ತ ಜಿಲ್ಲೆಗೆ ಶ್ರಮಿಸುವುದು, ಅಂತರ್ಜಲ ವೃದ್ಧಿಗೆ ಯೋಜನೆ ರೂಪಿಸಿ ನೀರಿನ ಹಾಹಾಕಾರ ತಪ್ಪಿಸುವುದು, ವಿಶ್ವವಿದ್ಯಾಲಯವಾಗಿ ನಗರದ ಹೇಮಗಂಗೋತ್ರಿ ವಿದ್ಯಾಲಯ ಪರಿವರ್ತಿಸುವುದು, ಆಲೂಗೆಡ್ಡೆ ಬೆಳೆಯಲ್ಲಿ ಸುಧಾರಣೆ ಸಾಧಿಸು ವುದು ಸೇರಿದಂತೆ ಹಲವು ಪ್ರಸ್ತಾವ ಸಲ್ಲಿಸಲಾಯಿತು.

***
ನನ್ನ ಬಾವ ನಂಜೇಗೌಡ ಅವರು ರಾಜಕೀಯವಾಗಿ ನನ್ನನ್ನು ಬೆಳೆಸಲಿಲ್ಲ. ಆದರೆ, ನನಗೆ ಬೆಂಗಳೂರು ಪರಿಚಯಿಸಿದರು. ಅಲ್ಲಿಂದಲೇ ನಾನು ಎಲ್ಲವನ್ನೂ ಕಲಿತೆ.
-ಎ. ಮಂಜು,
ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.