ADVERTISEMENT

ಟೊಮೆಟೊ ಕೆ.ಜಿ.ಗೆ ₹ 5 ಏರಿಕೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2018, 10:19 IST
Last Updated 13 ಮಾರ್ಚ್ 2018, 10:19 IST
ಟೊಮೆಟೊ ಕೆ.ಜಿ.ಗೆ ₹ 5 ಏರಿಕೆ
ಟೊಮೆಟೊ ಕೆ.ಜಿ.ಗೆ ₹ 5 ಏರಿಕೆ   

ಹಾಸನ: ‘ಕಳೆದ ಕೆಲ ವಾರಗಳಿಂದ ಒಂದು ಕೆ.ಜಿ. ಟೊಮೆಟೊ ₹ 5ಕ್ಕೆ ಮಾರಾಟವಾಗುತ್ತಿತ್ತು, ಈ ವಾರ ಕೆ.ಜಿ., ₹ 10ಕ್ಕೆ ಮಾರಾಟವಾಗುತ್ತಿದ್ದು, ₹ 5 ಏರಿಕೆಯಾಗಿದೆ.

ಚನ್ನರಾಯಪಟ್ಟಣ, ಹೊಳೆನರಸೀಪುರದಿಂದ ಹಾಸನದ ಮಾರುಕಟ್ಟೆಗೆ ಟೊಮೆಟೊ ಆವಕ ಆಗುತ್ತಿದೆ. ಬೆಳೆ ಕುಸಿತದ ಪರಿಣಾಮ ಮಾರುಕಟ್ಟೆಗೆ ಟೊಮೆಟೊ ಆವಕವೂ ಕಡಿಮೆಯಾಗಿದೆ. ಇದೇ ಕಾರಣಕ್ಕೆ ಬೆಲೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲೂ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತರಕಾರಿ ವ್ಯಾಪಾರಿ ಪ್ರತಾಪ್‌.

ಕಳೆದ ಕೆಲ ದಿನಗಳ ಹಿಂದೆ ಒಂದು ಕೆ.ಜಿ. ₹ 25ಕ್ಕೆ ಮಾರಾಟವಾಗುತ್ತಿದ್ದ ಈರುಳ್ಳಿ ಈ ವಾರ ಕೆ.ಜಿ.ಗೆ ₹ 20ಕ್ಕೆ ಮಾರಾಟವಾಗುತ್ತಿದೆ. ದಪ್ಪ ಮೆಣಸಿನಕಾಯಿ ಬೆಲೆಯೂ ಕೆ.ಜಿ.ಗೆ ₹ 20 ಕುಸಿತ ಕಂಡಿದ್ದು, ₹ 40ಕ್ಕೆ ಮಾರಾಟವಾಗುತ್ತಿದೆ. ದಪ್ಪ ಮೆಣಸಿಕಾಯಿ ಬೆಂಗಳೂರು ಮತ್ತು ಚನ್ನರಾಯಪಟ್ಟಣದಿಂದ ಹಾಸನ ಮಾರುಕಟ್ಟೆಗೆ ಬರುತ್ತಿದೆ.

ADVERTISEMENT

ಹೀರೇಕಾಯಿ ಕೆ.ಜಿ.ಗೆ ₹ 40, ಹೂ ಕೋಸು ₹ 20, ಒಂದು ಕೆ.ಜಿ. ಎಲೆ ಕೋಸು ₹ 15, ಅವರೆಕಾಯಿ ಕೆ.ಜಿಗೆ ₹ 40, ಕ್ಯಾರೆಟ್‌ ಒಂದು ಕೆ.ಜಿ ಗೆ ₹ 30, ಬೆಂಡೇಕಾಯಿ ಒಂದು ಕೆ.ಜಿ. ಗೆ ₹ 30, ಆಲೂಗೆಡ್ಡೆ ಒಂದು ಕೆ.ಜಿ.ಗೆ ₹ 20, ನುಗ್ಗೆಕಾಯಿ ಒಂದು ಕೆ.ಜಿ.ಗೆ ₹ 50ರಂತೆ ಮಾರಾಟವಾದರೆ, ಕೊತ್ತಂಬರಿ ಪಾಲಾಕ್, ಲಾಳಿ, ಕರಿಬೇವು ಮತ್ತು ದಂಟು ಸೊಪ್ಪನ್ನು ಒಂದು ಕಂತೆಗೆ ₹ 5 ರಂತೆ ಮಾರಾಟಮಾಡಲಾಗುತ್ತಿದೆ. ತರಕಾರಿ ಬೆಳೆಯಲ್ಲಿ ಹೆಚ್ಚಿನ ಏರಿಳಿತವಾಗಿಲ್ಲ.

ಸೇಬು ಕೆ.ಜಿ.ಗೆ 120 ಸಪೋಟ ಒಂದು ಕೆ.ಜಿ. ₹ 60 ರಿಂದ 80, ಬಾಳೆಹಣ್ಣು ಒಂದು ಕೆ.ಜಿ.ಗೆ ₹ 60, ಮೂಸಂಬೆ ಕೆಜಿ ಗೆ ₹ 80, ಸೀತಾಫಲ ಕೆ.ಜಿಗೆ ₹ 100, ಕಿತ್ತಳೆ ಹಣ್ಣು ಕೆ.ಜಿ. ₹ 80, ದಾಳಿಂಬೆ ಕೆ.ಜಿ.ಗೆ ₹ 120, ಕಲ್ಲಂಗಡಿ ಹಣ್ಣು ಕೆ.ಜಿ.ಗೆ ₹ 20ಕ್ಕೆ ಮಾರಾಟವಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.