ADVERTISEMENT

ತಂಬಾಕು ಧಾರಣೆ ಕುಸಿತ: ಸಂಕಷ್ಟದಲ್ಲಿ ಬೆಳೆಗಾರ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 8:05 IST
Last Updated 13 ಫೆಬ್ರುವರಿ 2012, 8:05 IST

ರಾಮನಾಥಪುರ: ತಂಬಾಕು ಮಾರುಕಟ್ಟೆಗೆ ಅವಕವಾಗುವ ಬೇಲ್‌ಗಳ ಸಂಖ್ಯೆ ಇಳಿಮುಖವಾಗಿ ಹರಾಜು ಪ್ರಕ್ರಿಯೆ ಮುಕ್ತಾಯದ ಹಂತ ತಲುಪಿ ದರೂ ಧಾರಣೆಯಲ್ಲಿ ಏರಿಕೆಯಾಗದೆ ರೈತರು ಕಂಗಲಾಗಿದ್ದಾರೆ.

ಈ ಬಾರಿ ಹರಾಜು ಆರಂಭದ ದಿನದಿಂದಲೂ ತಂಬಾಕಿಗೆ ಉತ್ತಮ ಧಾರಣೆ ಸಿಕ್ಕಿಲ್ಲ. ಬೆಲೆ ಏರಿಕೆಗೆ ಆಗ್ರಹಿಸಿ ಬೆಳೆಗಾರರು ಕಳೆದ ತಿಂಗಳು ರೈತ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಎಂ.ಕೆ. ಶೇಷೇಗೌಡರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮಾಡಿದಾಗ ಅಧಿಕಾರಿಗಳು ನೀಡಿದ ಭರವಸೆಯಲ್ಲಿಯೇ ಕಳೆಯು ವಂತಾಗಿದೆ.

ಮಾರುಕಟ್ಟೆಗೆ ಬರುತ್ತಿ ರುವ ಬೇಲ್‌ಗಳ ಸಂಖ್ಯೆ ಈಗ ಕಡಿಮೆಯಾಗುತ್ತಿವೆ. ಹಾಗಾಗಿ ಧಾರಣೆಯಲ್ಲಿ ಸುಧಾರಣೆ ಆಗಬ ಹುದು ಎಂದು ರೈತರು ಕಾಣುತ್ತಿದ್ದ ಕನಸು ನನಸಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ದಿನೇದಿನೇ ಬೆಲೆ ಕುಸಿತ ಕಂಡು ಮಾಡಿದ ಸಾಲ ತೀರಿಸಲು ಆಗದೇ ರೈತರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ಬೆಳೆಗಾರರು ಒಂದು ಸಿಂಗಲ್ ಬೇರಲ್ ಮನೆಯಲ್ಲಿ ಕನಿಷ್ಠ ಹತ್ತು ಕ್ವಿಂಟಾಲ್ ಹೊಗೆಸೊಪ್ಪು ಉತ್ಪಾದಿ ಸಲು 1 ಲಕ್ಷ ರೂಪಾಯಿ ಖರ್ಚು ಬೀಳುತ್ತಿದೆ. ರಸಗೊಬ್ಬರ, ಔಷಧಿಗಳ ಬಳಕೆ, ಆಳುಗಳ ಕೊರತೆ ನಡುವೆಯೂ ಹೆಚ್ಚುತ್ತಿರುವ ಕೂಲಿ, ಲೋಡುಗಟ್ಟಲೆ ಸೌದೆಯ ಬೆಲೆ ಇತ್ಯಾದಿ ಲೆಕ್ಕ ಕಲೆಹಾಕಿ ಹೊಗೆಸೊಪ್ಪು ಉತ್ಪಾದಿಸಲು ಮಾಡಿರುವ ಖರ್ಚಿಗೆ ಹೊಲಿಸಿದರೆ ಈಗ ಮಾರುಕಟ್ಟೆಯಲ್ಲಿ ದೊರೆಯು ತ್ತಿರುವ ಧಾರಣೆ ನೋಡಿದರೆ ತೊಡ ಗಿಸಿದ ಬಂಡವಾಡ ಕೈಸೇರುತ್ತಿಲ್ಲ.

ಪ್ರತಿವರ್ಷ ಅನಧಿಕೃತವಾಗಿ ಉತ್ಪಾ ದಿಸಿದ ಹೊಗೆಸೊಪ್ಪಿನ ಮಾರಾಟಕ್ಕೆ ತಾತ್ಕಾಲಿಕವಾಗಿ ಕಾರ್ಡ್‌ಗಳನ್ನು ವಿತರಣೆ ಮಾಡುತ್ತಿರುವ ಪರಿಣಾಮ ತಂಬಾಕು ಉತ್ಪಾದಿಸುತ್ತಿರುವವ ಸಂಖ್ಯೆ ಹೆಚ್ಚಿ ಬೆಳೆ ವಿಸ್ತರಣೆಯೇ ಬದಲಾಗತೊಡಗಿತು. ಈಗ ಬೆಳೆ ಪ್ರಮಾಣದ ಮಟ್ಟ ಜಾಸ್ತಿಯಾಗಿ ಬೇಡಿಕೆ ಇಲ್ಲದೇ ಬೆಲೆ ಕುಸಿತವಾಗಿದೆ. ಮಂಡಳಿ ಅಧಿಕಾರಿಗಳು ರೈತರ ಮುಂದೆ ನಂಬಲನರ್ಹವಾದಂತಹ ಕ್ಷುಲ್ಲಕ ಹೇಳಿಕೆಗಳನ್ನು ನಿಲ್ಲಿಸಿ ನ್ಯಾಯ ಯುತ ದರ ದೊರಕಿಸಲು ಮುಂದಾಗ ಬೇಕು ಎಂಬುದು ರೈತರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.