ADVERTISEMENT

ಪಾಶ್ಚಾತ್ಯ ಸಂಸ್ಕೃತಿ ಮೋಹ ತೊರೆಯಲು ಸಲಹೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2012, 10:00 IST
Last Updated 4 ಮಾರ್ಚ್ 2012, 10:00 IST

ಬಾಣಾವರ: ದೇಶಿ ಸಂಸ್ಕೃತಿಯ ಪರಿಚಯದ ಕಾರ್ಯಕ್ರಮ ಗಳಲ್ಲಿ ನಾಗರಿಕರನ್ನು ಜೋಡಿಸುವ ಕೆಲಸಗಳಲ್ಲಿ ವಿದ್ಯಾರ್ಥಿಗಳು ತೊಡಗಬೇಕು ಎಂದು ಪದವಿ ಪೂರ್ವ ಕಾಲೇಜಿನ ಪ್ರಾಂಶು ಪಾಲ ನಾಗರಾಜು ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ `ಸಾಂಸ್ಕೃತಿಕ ಹಬ್ಬ~ ಕಾರ್ಯಕ್ರಮದಲ್ಲಿ `ಸಂಸ್ಕೃತಿ ಹಾಗೂ ದೇಶಿ ಆಹಾರಗಳು~ ಕುರಿತು ಮಾತನಾಡಿದರು. ವಿದ್ಯಾರ್ಥಿ ಗಳು ಪಾಶ್ಚಾತ್ಯ ಸಂಸ್ಕೃತಿಯ ಮೊಹ ತೊರೆದು ದೇಶಿಯ ಸಂಸ್ಕೃತಿಯನ್ನು ನಿತ್ಯ ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಮತ್ತು ಮನುಷ್ಯ ಸಾತ್ವಿಕ ಆಹಾರದ ಮೂಲಕ ತಮ್ಮ ಆರೋಗ್ಯವನ್ನು ಕಾಪಡಿಕೊಳ್ಳಬಹುದು ಎಂದರು.

ಪದವಿ ಕಾಲೇಜು ಪ್ರಾಂಶುಪಾಲ ಜಿ.ಪಿ.ರಾಜು ಮಾತನಾಡಿದರು.ಅಹಾರಮೇಳ, ಮಾಹಿತಿ ಕಣಜ ವಸ್ತು ಪ್ರದರ್ಶನ ಏರ್ಪಡಿಸಲಾಗಿತು. ಪ್ರಥಮ ಬಿ.ಎ. ವಿದ್ಯಾರ್ಥಿ ಪ್ರೇಮ ಪ್ರಾರ್ಥನೆ ಮತ್ತು ವಿದ್ಯಾರ್ಥಿಗಳಾದ ಸುರೇಶ್, ಮಂಜುನಾಥ, ಸೌಮ್ಯ, ಶೀಲ, ಚೈತ್ರ, ಪಾಂಡುರಂಗ ಸ್ವರಚಿತ ಕವನ ವಾಚಿಸಿದರು. ಅಂತಿಮ ವರ್ಷದ ವಿದ್ಯಾರ್ಥಿ ಎ.ಪಿ.ಅರ್ಜುನ್, ನಿರ್ಮಲ ಮಾತನಾಡಿದರು.

ಗ್ರಂಥಾಪಾಲಕ ಕುಮಾರ ಸಾಂಸ್ಕೃತಿಕ ಹಬ್ಬ ಉದ್ಘಾಟಿಸಿದರೆ, ಬಿ.ಆರ್.ಮಹಾಲಿಂಗಪ್ಪ, ಸಹಾಯಕ ಪ್ರಾಧ್ಯಪಕ ಡಿ.ಎಲ್.ಹರೀಶ್, ಮಂಜುನಾಥಸ್ವಾಮಿ, ಮಾದಪ್ಪ, ಅನ್ನಪೂರ್ಣಮ್ಮ, ಅತಿಥಿ ಉಪನ್ಯಾಸಕರಾದ ಬಿ.ಸಿ.ವಿಜಯ್‌ಕುಮಾರ್, ಪುಟ್ಟಸ್ವಾಮಿ, ಶಶಿಕುಮಾರ್ ಇತರರು ಇದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.