ADVERTISEMENT

ಬಿಹಾರಿ ಕೂಲಿಗಳ ದುಡಿಮೆಗೆ ಸಕಾಲ

ಉದಯ ಯು.
Published 17 ಮೇ 2012, 9:15 IST
Last Updated 17 ಮೇ 2012, 9:15 IST
ಬಿಹಾರಿ ಕೂಲಿಗಳ ದುಡಿಮೆಗೆ ಸಕಾಲ
ಬಿಹಾರಿ ಕೂಲಿಗಳ ದುಡಿಮೆಗೆ ಸಕಾಲ   

ಹಾಸನ: `ಊರಲ್ಲೂ ಈಗ ಮಾಡಲು ಅಂಥ ಕೆಲಸವೇನೂ ಇಲ್ಲ. ಒಂದು ತಿಂಗಳು ಇಲ್ಲಿ ದುಡಿದರೆ ಹತ್ತು-ಹನ್ನೆರಡು ಸಾವಿರ ರೂಪಾಯಿ ಸಂಪಾದಿಸಿ ಊರಿಗೆ ಮರಳಬ ಹುದು, ಅದಕ್ಕಾಗಿ ಈ ಹಂಗಾಮಿನಲ್ಲಿ ಪ್ರತಿವರ್ಷ ಹಾಸನಕ್ಕೆ ಬರುತ್ತೇವೆ...~ ಹೀಗೆ ಬಿಹಾರದಿಂದ ಬಂದಿದ್ದ ಸಾಹಿಲ್‌ಕುಮಾರ್ ಹೇಳುತ್ತಿದ್ದರೆ ದೇಶದ ಇತರ ಭಾಗಗಳಲ್ಲೂ ರೈತರ ಸ್ಥಿತಿ ಬೇರೆಯಾಗಿಲ್ಲೆ ಎನ್ನಿಸಿತು.

ಕಳೆದ ಹತ್ತು ಹದಿನೈದು ದಿನಗಳಿಂದ ಸಾಹಿಲ್ ಸೇರಿದಂತೆ ಬಿಹಾರದಿಂದ ಬಂದಿದ್ದ 35 ಕೂಲಿ ಕಾರ್ಮಿಕರು ಹಾಸನದ ಜಸ್ವಿಂದರ್ ಸಿಂಗ್ ಕೋಲ್ಡ್ ಸ್ಟೋರೇಜ್‌ನಲ್ಲಿ ದುಡಿಯು ತ್ತಿದ್ದಾರೆ.ಉಷ್ಣಾಂಶ ಸರಿಸುಮಾರು ಶೂನ್ಯದ ಆಸುಪಾಸಿನಲ್ಲಿರುವ ಕೋಲ್ಡ್ ಸ್ಟೋರೇಜ್‌ನಿಂದ ಆಲೂಗೆಡ್ಡೆ ಮೂಟೆಗ ಳನ್ನು ಹೊತ್ತು ಲಾರಿಗಳಿಗೆ ತುಂಬುವುದು ಇವರ ಕೆಲಸ.

ಹಾಸನದಲ್ಲಿ ಬಿತ್ತನೆ ಆಲೂಗೆಡ್ಡೆ ಮಾರಾಟ ಆರಂಭವಾಯಿ ತೆಂದರೆ ಇವರಿಗೆ ಬಿಡುವಿಲ್ಲದ ಕೆಲಸ. ಒಂದು ನಿಮಿಷವೂ ನಿಲ್ಲದಂತೆ ದುಡಿದರೂ ಹಂಗಾಮು ಮುಗಿಯುವವರೆಗೆ ಹತ್ತರಿಂದ 12 ಸಾವಿರ ರೂಪಾಯಿ ದುಡಿಯಬ ಹುದು ಅಷ್ಟೇ. ಆಲೂಗೆಡ್ಡೆ ಹಂಗಾಮು ಮುಗಿದರೆ ಗಂಟು ಮೂಟೆ ಕಟ್ಟಿಕೊಂಡು ಊರಿಗೆ ಮರಳುತ್ತಾರೆ.

ಪ್ರತಿ ವರ್ಷ ಇಲ್ಲಿಗೆ ಕೂಲಿ ಆಳುಗಳಾಗಿ ಬರುವರೆಲ್ಲರೂ ಬರಿಯ ಕೂಲಿಗಳಲ್ಲ. ತಮ್ಮ ಊರಲ್ಲಿ ಸ್ವಂತ ಜಮೀನು, ಅಥವಾ ವ್ಯಾಪಾರ ಹೊಂದಿದವರೇ ಆಗಿರುತ್ತಾರೆ. `ಎರಡು-ಮೂರು ಎಕರೆ ಜಮೀನಿದೆ, ಮನೆ ಯಲ್ಲಿ ತುಂಬ ಜನರಿದ್ದಾರೆ, ಕೃಷಿಯಿಂದ ಬರುವ ಆದಾಯ ಎಷ್ಟು ಎಂಬುದು ಎಲ್ಲರಿಗೂ ತಿಳಿದ ವಿಚಾರ.

ಅಲ್ಲಿಯ ಕೃಷಿ ಕಾರ್ಯಗಳನ್ನು ಮುಗಿಸಿ ಬಂದಿದ್ದೇವೆ. ಸದ್ಯ ಮನೆಯವರು ನೋಡಿಕೊಳ್ಳುತ್ತಿದ್ದಾರೆ. ನಾವು ಒಂದಿಷ್ಟು ಹೆಚ್ಚಿನ ಆದಾಯ ಮಾಡಿ ಕೊಳ್ಳೋಣ ಅಂತ ಇಲ್ಲಿಗೆ ಬರುತ್ತೇವೆ~ ಎಂದು ಇನ್ನೊಬ್ಬ ಕಾರ್ಮಿಕ ನುಡಿಯುತ್ತಾರೆ.

ವಾಸ್ತವವಾಗಿ ಇವರಲ್ಲಿ ಅನೇಕರು ಫೆಬ್ರುವರಿ ಆರಂಭದಲ್ಲೇ ಹಾಸನಕ್ಕೆ ಬರು ತ್ತಾರೆ. ಗುತ್ತಿಗೆದಾರರೊಬ್ಬರು ಇವರನ್ನು ಅಲ್ಲಿಂದ ಕರೆತರುತ್ತಾರೆ. ಆಲೂಗೆಡ್ಡೆ ಮಾರಾಟ ಆರಂಭವಾಗುವವರೆಗೆ ಅಲ್ಲಿ- ಇಲ್ಲಿ ಕೂಲಿ ಕೆಲಸ ಮಾಡುತ್ತಾರೆ. ಬಿತ್ತನೆ ಆಲೂಗೆಡ್ಡೆ ಮಾರಾಟ ಆರಂಭವಾದರೆ ಎಲ್ಲರೂ ಕೋಲ್ಡ್ ಸ್ಟೋರೇಜ್ ಬಿಟ್ಟು ಬೇರೆಡೆಗೆ ಹೋಗುವುದಿಲ್ಲ.

ಪ್ರತಿ ವರ್ಷ ಬಿಹಾರದಿಂದ ಜನರನ್ನೇಕೆ ಕರೆತರುತ್ತೀರಿ ಎಂದರೆ, `ಕೋಲ್ಡ್ ಸ್ಟೋರೇ ಜ್‌ನಿಂದ ಆಲೂಗೆಡ್ಡೆಯನ್ನು ಲಾರಿಗಳಿಗೆ ತುಂಬುವ ಕೆಲಸ ಸುಲಭವಲ್ಲ. ಒಳಗೆ ಕೊರೆ ಯುವ ಚಳಿ ಇರುತ್ತದೆ. ನಾಲ್ಕು, ಐದನೇ ಮಹಡಿಯಿಂದ ಬೆನ್ನ ಮೇಲೆ ಮೂಟೆಗ ಳನ್ನು ಹೊತ್ತುತಂದು ಲಾರಿಗೆ ಲೋಡ್ ಮಾಡಬೇಕು. ಪ್ರತಿ ದಿನ ಕನಿಷ್ಠ ಎಂದರೂ 35-40 ಲಾರಿಗಳು ತುಂಬಬೇಕಾಗಿರುವು ದರಿಂದ ಕೆಲಸದ ನಡುವೆ ವಿರಾಮದ ಪ್ರಶ್ನೆ ಬರುವುದಿಲ್ಲ. ಇಲ್ಲಿಯ ಕಾರ್ಮಿಕರು ಇಂಥ ಕೆಲಸಕ್ಕೆ ಸಿದ್ಧ ಇರುವುದಿಲ್ಲ~ ಎಂದು ಗುತ್ತಿಗೆದಾರರು ನುಡಿಯುತ್ತಾರೆ.

ಕೋಲ್ಡ್ ಸ್ಟೋರೇಜ್‌ನಿಂದ ಒಂದು ಮೂಟೆ ಹೊತ್ತು ಲಾರಿಗೆ ಹಾಕಿದರೆ ಕಾರ್ಮಿಕರಿಗೆ 2.35 ರಿಂದ 3.50 ರೂಪಾ ಯಿವರೆಗೆ ಕೂಲಿ ನೀಡಲಾಗುತ್ತದೆ. ಮಾರಾಟ ಆರಂಭವಾದ ದಿನಗಳಲ್ಲಿ ಸ್ಟೋರೇಜ್  ಬಾಗಿಲಿನಿಂದಲೇ ಚೀಲಗಳಿರುತ್ತವೆ. ಪ್ರತಿ ದಿನ 30 -40 ಲಾರಿಗಳನ್ನು ತುಂಬಬಹುದು ಆದರೆ ದಿನ ಕಳೆದಂತೆ ಮೊದಲ ಮಹಡಿ, ಎರಡು, ಮೂರನೇ ಮಹಡಿಗಳಿಂದ ಹೊತ್ತು ತರಬೇಕು.

ಇಡೀ ದಿನ ದುಡಿದರೂ 20 ರಿಂದ 25 ಲಾರಿಗಳನ್ನು ಮಾತ್ರ ತುಂಬಲು ಸಾಧ್ಯ. ದುಡಿಮೆ ಹೆಚ್ಚು, ಆದಾಯ ಕಡಿಮೆಯಾಗುತ್ತದೆ. ಎಷ್ಟೇ ಕಷ್ಟಪಟ್ಟರೂ 200 ರಿಂದ 225 ಮೂಟೆಗಳನ್ನು ಮಾತ್ರ ಹೊರಲು ಸಾಧ್ಯ. ಆ ಲೆಕ್ಕದಲ್ಲಿ ನಮ್ಮ ಆದಾಯವನ್ನು ಲೆಕ್ಕ ಹಾಕಬಹುದು ಎಂದು ಕಾರ್ಮಿಕರು ನುಡಿಯುತ್ತಾರೆ.

ಇವರಲ್ಲಿ ಅನೇಕ ಮಂದಿ ಹಾಸನದಲ್ಲಿ ಕೆಲಸ ಮುಗಿದರೆ ಇನ್ನೊಂದು ರಾಜ್ಯಕ್ಕೆ ಹೋಗಿ ಇದೇ ಕೆಲಸ ಮಾಡುತ್ತಾರೆ. ನಾಲ್ಕಾರು ತಿಂಗಳ ಕಾಲ ಹೀಗೆ ದುಡಿದು ಕೈಯಲ್ಲಿ ಒಂದಿಷ್ಟು ಉಳಿತಾಯ ಮಾಡಿ ಕೊಂಡು ಊರಿಗೆ ಮರಳುತ್ತಾರೆ. ಇವರಲ್ಲಿ ಅನೇಕರಿಗೆ ತಮ್ಮ ಊರಲ್ಲಿ ಸ್ವಂತ ಜಮೀನು ಇದ್ದರೂ ಈ ಆದಾಯ ಇಲ್ಲದಿದ್ದರೆ ಜೀವನ ನಡೆಸುವುದೇ ಕಷ್ಟವಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.