ADVERTISEMENT

ಬೆಂಕಿ: ಅಡಕೆ, ತೆಂಗು ಗಿಡಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 10:55 IST
Last Updated 17 ಏಪ್ರಿಲ್ 2013, 10:55 IST

ಜಾವಗಲ್: ಇಲ್ಲಿನ ದೊಡ್ಡಕೆರೆಯ ಅಂಗಳದಲ್ಲಿ ಬೆಳೆದಿರುವ ಜಾಲಿಗಿಡಗಳ ಪೊದೆಗಳಿಗೆ ಸೋಮವಾರ ಸಂಜೆ ಆಕಸ್ಮಿಕವಾಗಿ ತಗುಲಿದ ಬೆಂಕಿ ಕೆರೆಯ ಪಕ್ಕದಲ್ಲಿರುವ ತೋಟಕ್ಕೂ ವ್ಯಾಪಿಸಿ ಹುಣಸೆ ಮರ, ಅಡಿಕೆ ಸಸಿಗಳು ನಾಶವಾಗಿವೆ.

ತೋಟದವರು ಕೂಡಲೇ ಅಗ್ನಿ ಅನಾಹುತ ಸ್ಥಳಕ್ಕೆ ಧಾವಿಸಿ ತೋಟದಲ್ಲಿನ ಕೊಳವೆ ಬಾವಿಗಳಿಂದ ನೀರನ್ನು ತಂದು ಸುರಿದರು, ಅಗ್ನಿಶಾಮಕ ದಳದವರು ಧಾವಿಸಿ ಬೆಂಕಿ ನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.