ADVERTISEMENT

ಬೇವು, ಮಾವು, ತೆಂಗಿನ ಮರ ಧರೆಗೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2012, 10:00 IST
Last Updated 24 ಏಪ್ರಿಲ್ 2012, 10:00 IST

ಅರಸೀಕೆರೆ: ಬರದ ದವಡೆಗೆ ಸಿಲುಕಿದ್ದ ಅರಸೀಕೆರೆ ತಾಲ್ಲೂಕಿನ ಕಣಕಟ್ಟೆ ಹೋಬಳಿಯಲ್ಲಿ ಭಾನುವಾರ ಸಂಜೆ ಬಿರುಗಾಳಿ, ಗುಡುಗು- ಸಿಡಿಲು ಸಹಿತ ಮಳೆಯಾಗಿದೆ. ಹಲವೆಡೆ ಮಾವಿನ ಮರ, ಬೇವಿನ ಮರ ಹಾಗೂ ತೆಂಗಿನ ಮರಗಳು ಧರೆಗುರುಳಿವೆ.

ತಾಲ್ಲೂಕಿನ ಮಾಡಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಯರೇಹಳ್ಳಿ, ಪಾಳ್ಯ ಹಾಗೂ ಗೊಲ್ಲರ ಹಟ್ಟಿಯಲ್ಲಿ 15ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ ಹಾರಿ ಹೋಗಿವೆ. ಹಲವು ಮನೆಗಳ ಹೆಂಚುಗಳು ಪುಡಿಯಾಗಿವೆ. ಯರೇಹಳ್ಳಿ ಗ್ರಾಮದ ಮುಂಭಾಗದ ತೇರಿನ ಮನೆಯ ಮೇಲ್ಛಾವಣಿ ಹಾಗೂ ಆಂಜನೇಯ ದೇಗುಲದ ಮುಂದಿನ ಶೆಡ್‌ಗೆ ಅಳವಡಿಸಲಾದ ಶೀಟ್‌ಗಳು ಬಿರುಗಾಳಿಗೆ ಹಾರಿ ಹೋಗಿವೆ.

ಗಾಳಿಯ ಆರ್ಭಟಕ್ಕೆ ಗ್ರಾಮದ ಹೊರಭಾಗದ ಗೊಲ್ಲರಹಟ್ಟಿಯ ಕಾಟಲಿಂಗೇಶ್ವರ ದೇವಾಲಯದ ಮುಂದಿನ ಸುಮಾರು ನೂರು ವರ್ಷದ ಬೇವಿನ ಮರ ಬುಡಮೇಲಾಗಿದೆ. ಈ ಮರ ದೇವಾಲಯದ ಮೇಲೆ ಬಿದ್ದಿರು ವುದರಿಂದ ದೇವಾಲಯದ ಒಂದು ಭಾಗದ ಮೇಲ್ಛಾವಣಿ ಹಾಳಾಗಿದೆ.

ಅಲ್ಲದೆ ಗ್ರಾಮದಲ್ಲಿ ಸುಮಾರು 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ರಾಮಲಿಂಗಪ್ಪ ಎಂಬುವರ ಹೊಸ ಮನೆಗೆ 15 ಸಾವಿರ ರೂಪಾಯಿ ಶೀಟ್ ತಂದು ಈಚೆಗೆ ಛಾವಣಿ ಸರಿ ಮಾಡಿಸ್ದಿದರು. ಸಂಜೆ ಬೀಸಿದ ಬಿರುಗಾಳಿಯ ಹೊಡೆತಕ್ಕೆ ಈ ಮನೆಯ ಒಂದೇ ಒಂದು ಶೀಟ್ ಸಹ ಉಳಿದಿಲ್ಲ. `ಮುಂದೇನು ಮಾಡುವುದು ಎಂಬುದು ತಿಳಿಯಂದತಾಗಿದೆ~ ಎಂದು ರಾಮ ಲಿಂಗಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

ಯರೇಹಳ್ಳಿ ಗ್ರಾಮದ ನಡುಲ ಮನೆ ಶಿವಣ್ಣ ಎಂಬುವರಿಗೆ ಸೇರಿದ ಹತ್ತು, ಚಂದ್ರಪ್ಪ ಅವರ ಐದು ಸೇರಿದಂತೆ ನೂರಕ್ಕೂ ಹೆಚ್ಚು ತೆಂಗಿನ ಮರಗಳು, ಮಾವಿನ ಮರಗಳು ಧರೆಗೆ ಉರುಳಿವೆ. ಕೈಸೇರುವ ಹಂತದಲ್ಲಿದ್ದ ಮಾವಿನ ಫಸಲು ನಷ್ಟವಾಗಿದೆ. ಈ ರೀತಿಯ ಮಳೆ ಗಾಳಿಯನ್ನು ಬಹಳ ವರ್ಷಗಳಿಂದ ನೋಡಿರಲಿಲ್ಲ ಎಂದು ಹಲವು ಗ್ರಾಮಸ್ಥರು ತಿಳಿಸಿದರು.

ಕಣಕಟ್ಟೆ ಹೋಬಳಿಯ ಕಾಮಸ ಮುದ್ರ, ತುಂಬಾಪುರ, ತುಡಿಕೇನಹಳ್ಳಿ ಗ್ರಾಮಗಳ್ಲ್ಲಲೂ ತಡ ರಾತ್ರಿ ಧಾರಾಕಾರ ಮಳೆಯಾಗಿದೆ. ಗುಡುಗು ಮಿಂಚು ಹಾಗೂ ಬಿರುಗಾಳಿ ಆರ್ಭಟಕ್ಕೆ ಮನೆಗಳ ಹೆಂಚುಗಳು ನೆಲಕಚ್ಚಿವೆ. ತೆಂಗಿನ ಮರಗಳು ಬುಡಮೇಲಾಗಿವೆ. ಹೋಬಳಿಯ ಬಹುತೇಕ ಕಡೆ ಸಂಜೆಯಿಂದಲೇ ವಿದ್ಯುತ್ ಕಡಿತ ಮಾಡಲಾಗಿದ್ದು, ಬಿರುಗಾಳಿಗೆ ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿವೆ.ಹಾನಿಗೆ ಒಳಗಾದ ಪ್ರದೇಶಗಳಿಗೆ ರಾಜಸ್ವ ನಿರೀಕ್ಷಕ ಉಮೇಶ, ಗ್ರಾಮ ಲೆಕ್ಕಾಧಿಕಾರಿಗಳು ಭೇಟಿ ನೀಡಿ ನಷ್ಟದ ಅಂದಾಜು ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.