ADVERTISEMENT

ಭೋವಿಗೆ ಮಾತ್ರ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ಮನವಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 6:26 IST
Last Updated 25 ಅಕ್ಟೋಬರ್ 2017, 6:26 IST

ರೋಣ: ‘ಭೋವಿ ಮತ್ತು ವಡ್ಡರ ಸಮು ದಾಯಗಳು ಪ್ರತ್ಯೇಕ ಜಾತಿಗಳಾಗಿವೆ. ಆದ್ದರಿಂದ ಭೋವಿ ಜನಾಂಗಕ್ಕೆ ಮಾತ್ರ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ನೀಡಬೇಕು’ ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಭೋವಿ ಸಮಾಜ ವಿವಿಧೋದ್ದೇಶ ಕಲ್ಯಾಣ ಸಂಘದ ವತಿಯಿಂದ ತಹಶೀಲ್ದಾರ್‌ ಶಿವಲಿಂಗ ಪ್ರಭುವಾಲಿಯವರಿಗೆ ಮನವಿ ಸಲ್ಲಿಸಲಾಯಿತು.

ಸಂಘದ ಪ್ರಧಾನ ಕಾರ್ಯದರ್ಶಿ ಕೇಶವ ಭೋವಿ ಮಾತನಾಡಿ ‘ರಾಜ್ಯದಲ್ಲಿ ವಡ್ಡರ ಸಮಾಜದವರು ಇತ್ತೀಚೆಗೆ ಭೋವಿ ಜಾತಿಯೆಂದು ಹೇಳಿಕೊಳ್ಳುತ್ತಿರುವುದು ದುರ್ದೈವ. 2002ರಲ್ಲಿ ರಾಜಕೀಯ ಮತ್ತು ಅಧಿಕಾರದ ದುರ್ಬಳಕೆಯಿಂದ ವಡ್ಡರ ಸಮಾಜದ ಕೆಲ ಉಪಪಂಗಡಗಳು ಪರಿಶಿಷ್ಟ ಜಾತಿಯಲ್ಲಿ ಸೇರ್ಪಡೆಗೊಂಡಿರುತ್ತವೆ. ಆದರೆ ವಡ್ಡರ ಜನಾಂಗದವರೆಲ್ಲರೂ ಈಗ ಭೋವಿ-ವಡ್ಡರ ಎಂದು ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಪಡೆಯುತ್ತಿರುವುದು ಗೊಂದಲವಾಗುತ್ತಿದೆ’ ಎಂದರು.

ಸಂಘದ ಸಂಘಟನಾ ಕಾರ್ಯದರ್ಶಿ ವಿ.ಟಿ.ಕರಿಸಕ್ಕಣ್ಣವರ, ಲಕ್ಷ್ಮಣ ಭೋವಿ, ಹುಚ್ಚಪ್ಪ ಭೋವಿ, ಮುತ್ತುರಾಜ ಭೋವಿ, ಚಂದ್ರಪ್ಪ ಭೋವಿ, ಮಲ್ಲಪ್ಪ ಭೋವಿ, ವೆಂಕಪ್ಪ ಭೋವಿ, ಶರಣಪ್ಪ ಭೋವಿ, ರವಿಕುಮಾರ ಭೋವಿ, ಗೋವಿಂದಪ್ಪ ಭೋವಿ, ಜಗದೀಶ ಭೋವಿ, ಮುತ್ತಪ್ಪ ಭೋವಿ, ಅನ್ನಕ್ಕ ಭೋವಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.