ADVERTISEMENT

ಮತಯಂತ್ರಗಳ ತಾಂತ್ರಿಕ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 7:17 IST
Last Updated 17 ಮಾರ್ಚ್ 2014, 7:17 IST

ಹಾಸನ: ಲೋಕಸಭಾ ಚುನಾವಣೆಗಾಗಿ­ತಂದು ಇಲ್ಲಿಯ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಇಟ್ಟಿರುವ ಮತಯಂತ್ರಗಳ ಮೊದಲ ಹಂತದ ತಾಂತ್ರಿಕ ಪರಿಶೀಲನೆ  ಜಿಲ್ಲಾ ಚುನಾವಣಾ ಅಧಿಕಾರಿ  ಅನ್ಬುಕುಮಾರ್‌ ಸಮ್ಮುಖದಲ್ಲಿ ಭಾನುವಾರ ನಡೆಯಿತು.

ಭಾರತ್ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್ ಸಂಸ್ಥೆಯ ತಂತ್ರಜ್ಞರು ಮತಯಂತ್ರಗಳ ತಪಾಸಣೆ ನಡೆಸಿದರು. ಬಿಇಎಲ್ ನ ಆರು ಮಂದಿ ತಾಂತ್ರಿಕ ಪರಿಣತರು ಪರಿಶೀಲನೆ ನಡೆಸುತ್ತಿದ್ದು, ಎಲ್ಲಾ ಮತಯಂತ್ರಗಳು ಸಮರ್ಪಕ­ವಾಗಿ­ದೆಯೇ ಎಂಬುದನ್ನು ಪರೀಕ್ಷೆಗಳ ಮೂಲಕ ಖಾತರಿಪಡಿಸಿ­ಕೊಳ್ಳ­ಲಾ­ಯಿತು.

ಈ ತಂಡವು ಹಾಸನ ಲೋಕಸಭಾ ಚುನಾವಣೆಯಲ್ಲಿ ಬಳಸುವ 2,780 ಬ್ಯಾಲೆಟ್ ಯೂನಿಟ್ ಮತ್ತು 2,180 ಕಂಟ್ರೋಲ್ ಯೂನಿಟ್‌ಗಳನ್ನು ಪರಿಶೀಲಿ­ಸ­ಲಿದ್ದು, ಮುಂದಿನ ಒಂದು ವಾರ ಈ ಪ್ರಕ್ರಿಯೆ ನಡೆಯಲಿದೆ. ಅಣಕು ಮತದಾನ ಮಾಡಿ ಯಂತ್ರಗಳು ಸರಿ ಇವೆಯೇ ಎಂದು ಪರಿಶೀಲಿಸಿ ನಂತರ ಸಂಪೂರ್ಣವಾಗಿ ಹೊಸದಾಗಿ ಮತದಾನ ಪ್ರಕ್ರಿಯೆಗೆ ಸಿದ್ಧಪಡಿಸಿ ಇಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಅನ್ಬುಕುಮಾರ್‌ ಮಾಹಿತಿ ನೀಡಿದರು.

ಹೆಚ್ಚವರಿ ಜಿಲ್ಲಾಧಿಕಾರಿ
ಡಾ. ಎಚ್.ಎನ್. ಗೊಪಾಲಕೃಷ್ಣ, ತಹಶೀಲ್ದಾರ್ ಮಂಜುನಾಥ್‌, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಪಲ್ಲವಿ, ಹಾಸನ ತಾಲ್ಲೂಕು ತಹಶೀಲ್ದಾರ್ ಮಂಜುನಾಥ್ ಹಾಗೂ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.