ADVERTISEMENT

ಯುವಕರಿಗೆ ದೇಸಿ ಕಲೆ ಕಲಿಸಿಕೊಡಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 5:35 IST
Last Updated 13 ಸೆಪ್ಟೆಂಬರ್ 2011, 5:35 IST

ಹಾಸನ: ಕಲೆಗಳನ್ನು ಯುವ ಪೀಳಿಗೆಗೆ ಕಲಿಸಿಕೊಡುವ ಕಾರ್ಯವನ್ನು ವಿದ್ವಾಂಸರು ಮಾಡಬೇಕು. ಉಳಿದ ವರು ಅವರಿಗೆ ಪ್ರೋತ್ಸಾಹ ನೀಡಬೇಕು. ಇಲ್ಲವಾದಲ್ಲಿ ಸಂಸ್ಕೃತಿಯ ಗಂಧಗಾಳಿ ಇಲ್ಲದ ಯುವ ಪೀಳಿಗೆಯನ್ನು ನೋಡಬೇಕಾಗುತ್ತದೆ~ ಎಂದು ವರ್ತಕ ಆರ್. ರಾಜಣ್ಣ ನುಡಿದರು.

ನಗರದ ಮಹಾರಾಜ ಪಾರ್ಕ್‌ನಲ್ಲಿರುವ ವಿವೇಕಾನಂದ ಯೋಗ ಶಿಕ್ಷಣ ಕೇಂದ್ರದಲ್ಲಿ ಭಾನುವಾರ ಮುಂಜಾನೆ 6.30ಕ್ಕೆ ಹಮ್ಮಿಕೊಂಡಿದ್ದ ಗಂಗಮ್ಮ ಕೇಶವಮೂರ್ತಿ ಅವರ ಗಾನಮಂಜರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೋಗ ಗುರು ಎಚ್.ಬಿ. ರಮೇಶ್, `ಜನರಿಗೆ ದೇಹಾರೋಗ್ಯದ ಜತೆಗೆ ಮಾನಸಿಕ ಆರೋಗ್ಯವೂ ಮುಖ್ಯ. ಈ ನಿಟ್ಟಿನಲ್ಲಿ ಪ್ರತಿ ಭಾನುವಾರ ಮುಂಜಾನೆ ಶಾಲೆಯಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಹೆಚ್ಚು ಹೆಚ್ಚು ಜನರು ಇದರ ಲಾಭ ಪಡೆಯಬೇಕು~ ಎಂದರು.

ಗಂಗಮ್ಮ ಕೇಶವಮೂರ್ತಿ ಅವರು, ಅನಂತ ಚತುರ್ದಶಿಯ ಮಹತ್ವದ ಕುರಿತ ಮಹಾಭಾರತದ ಪ್ರಸಂಗವೊಂದರ ಆಯ್ದ ಭಾಗವನ್ನು ವಾಚನ ಮಾಡಿ ವಿಶ್ಲೇಷಣೆ ಮಾಡಿದರು.

ಗಮಕ ಕಲಾ ಪರಿಷತ್ತಿನ ಗಣೇಶ ಉಡುಪ, ಸಮಾಜ ಸೇವಕ ಡಾ. ವೈ ಎಸ್. ವೀರಭದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.