ADVERTISEMENT

ರಾಜ್ಯಪಾಲರಿಗೆ ಲಂಚದ ಚೆಕ್ ನೀಡಿಕೆ ಆರೋಪ: ಜಯಂತ್ ಬಿ.ವಿ. ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 8:50 IST
Last Updated 19 ಅಕ್ಟೋಬರ್ 2012, 8:50 IST

ಹಾಸನ:`ರಾಜ್ಯಪಾಲರಿಗೆ ಚೆಕ್ ನೀಡಿದ್ದು ಲಂಚ ನೀಡುವ ಉದ್ದೇಶದಿಂದಲ್ಲ, ನಮ್ಮ ವ್ಯವಸ್ಥೆಯಲ್ಲಿ ಆಗುತ್ತಿರುವ ಅನ್ಯಾಯದ ಕಡೆಗೆ ಜನರ ಮತ್ತು ಸರ್ಕಾರದ ಗಮನ ಸೆಳೆಯಬೇಕು ಎಂಬ ಉದ್ದೇಶ ದಿಂದ~ ಎಂದು ಲಂಚ ನೀಡಿದ ಆರೋಪದಲ್ಲಿ ಅಮಾನತುಗೊಂಡಿರುವ ಹಾಸನದ ಎಲ್.ವಿ. ಪಾಲಿಟೆಕ್ನಿಕ್ ತರಬೇತುದಾರ ಜಯಂತ್ ಬಿ.ವಿ. ಹೇಳಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
`ನಾನು 1985ರಲ್ಲಿ ಚಿಕ್ಕಮಗಳೂರಿನ ಡಿಎಸಿಜಿ ಕಾಲೇಜಿನಲ್ಲಿ ವೃತ್ತಿ ಆರಂಭಿಸಿದೆ. 2005ರಲ್ಲಿ ಈ ಕಾಲೇಜಿಗೆ ಪ್ರಾಂಶುಪಾಲರಾಗಿ ಬಂದಿದ್ದ ಪಿ.ಎಸ್. ಚಂದ್ರಶೇಖರ್ ಅವರು ಕಾಲೇಜಿನಲ್ಲಿ ಭ್ರಷ್ಟಾಚಾರ ಆರಂಭಿಸಿದರು. ಮೋಟಾರು ಹಾಳಾದಾಗ ನಮ್ಮಿಂದ ರಿಪೇರಿ ಮಾಡಿಸಿ ಬೋಗಸ್ ಬಿಲ್ ತರಲು ಹೇಳಿದರು. ಇದನ್ನು ವಿರೋಧಿಸಿದ ಕಾರಣಕ್ಕೆ ಕಿರುಕುಳ ನೀಡಲು ಆರಂಭಿಸಿದರು. ಇವರು ಧಾರವಾಡದಲ್ಲಿ ಕೆಲಸದ ಲ್ಲಿದ್ದಾಗಲೂ ಹತ್ತು ಸಾವಿರ ಲಂಚ ಪಡೆದು ಬಾಹ್ಯ ವಿದ್ಯಾರ್ಥಿಗಳಿಗೆ ನಕಲು ಮಾಡಲು ಅವಕಾಶ ನೀಡಿ ಸಿಕ್ಕಿಹಾಕಿಕೊಂಡಿದ್ದರು. ಚಿಕ್ಕಮಗಳೂರಿಗೆ ಬಂದ ಬಳಿಕ ಒಂದೇ ದಿನ 3500 ರೂಪಾಯಿ ಮೌಲ್ಯದ ಡೀಸೆಲ್ ಖರೀದಿಸಿದ್ದು, 180 ಮೀಟರ್ ಬಟ್ಟೆ ಖರೀದಿ, ಒಂದೇ ವರ್ಷದಲ್ಲಿ ಹಾಸ್ಟೆಲ್‌ಗೆ 35 ಗ್ಯಾಸ್ ಸಿಲಿಂಡರ್ ಖರೀದಿಸಿದ್ದು. ಹೀಗೆ ಹಲವು ಅಕ್ರಮಗಳನ್ನು ನಡೆಸಿದ್ದಾರೆ ಎಂದು ಆಪಾದಿಸಿದರು.

ಗ್ಯಾಸ್ ಖರೀದಿ ಸಂಬಂಧ ನಾನು ದೂರು ನೀಡಿದ ಹಿನ್ನೆಲೆಯಲ್ಲಿ ಬೋಗಸ್ ಬಿಲ್ ನೀಡಿದ್ದ ಏಜನ್ಸಿ ಯವರಿಗೆ ವಾಣಿಜ್ಯ ತೆರಿಗೆ ಇಲಾ ಖೆಗೆ ಇಲಾಖೆಯವರು 1.20ಲಕ್ಷ ರೂಪಾಯಿ ದಂಡ ವಿಧಿಸಿದ್ದರು. ಭ್ರಷ್ಟಾಚಾರಕ್ಕೆ ಕೈಜೋ ಡಿಸಿಲ್ಲ ಎಂಬ ಕಾರಣಕ್ಕೆ ಪ್ರಾಂಶುಪಾಲರು ನನ್ನ ವಿರುದ್ಧ ಕತ್ತಿ ಮಸೆಯು ತ್ತಿದ್ದರು. 2009ರಲ್ಲಿ ಪರೀಕ್ಷೆಗೆ ಬಳಕೆಯಾ ಗುವ ಒಎಂಆರ್ ಶೀಟ್ ಕಾಣೆಯಾದವು. ಪ್ರಾಂಶುಪಾಲರು ಅದನ್ನು ನಾನೇ ಕಳ್ಳತನ ಮಾಡಿದ್ದೇನೆ ಎಂದು ಇಲಾಖೆಗೆ ದೂರು ನೀಡಿದರು. ತನಿಖೆಯಾಗಿ, ಸುಳ್ಳು ದೂರು ಎಂದು ಸಾಬೀತಾಗಿತ್ತು. ಬಳಿಕ ರಿಜಿಸ್ಟ್ರಾರ್ ಹಾಗೂ ಪ್ರಾಂಶುಪಾಲರ ವಿರುದ್ಧ ನಾನು ದೂರು ದಾಖಲಿಸಿದ್ದೆ. ಕೊನೆಗೆ ನನ್ನನ್ನು ಬೇಲೂರಿನ ಪಾಲಿಟೆಕ್ನಿಕ್‌ಗೆ ಡೆಪ್ಯುಟೇಶನ್ ಮೇಲೆ ಕಳುಹಿಸಲಾ ಯಿತು ಎಂದು ತಿಳಿಸಿದರು.

ಎಲೆಕ್ಟ್ರಿಕಲ್ ವಿಭಾಗ ಇರದ ಬೇಲೂರಿನ ಕಾಲೇಜಿಗೆ ನಾನು ಬಂದಾಗ ಅಲ್ಲಿಯೂ ಕೆಲವು ಅಧಿಕಾರಿಗಳು ಭಾರಿ ಭ್ರಷ್ಟಾಚಾರ ನಡೆಸುತ್ತಿರುವುದು ಬೆಳಕಿಗೆ ಬಂದಿತು. ಲಕ್ಷಾಂತರ ರೂಪಾಯಿ ಬೆಲೆಬಾಳುವ ಉಪಕರಣಗಳನ್ನು ಈವರೆಗೆ ಬಳಸಿಲ್ಲ. ಲೇತ್ ಮಶೀನ್ ಇಡಲು ಜಾಗವಿಲ್ಲದೆ ಚಿಕ್ಕಮಗಳೂರಿನ ಸಂಸ್ಥೆ ಯೊಂದರಲ್ಲಿ ಇಡಲಾಗಿದೆ. ಒಟ್ಟಾರೆ 14 ಲಕ್ಷ ರೂಪಾಯಿ ಬೆಲೆ ಬಾಳುವ ವಸ್ತುಗಳಿಗೆ ಇಲಾಖೆ ಅಧಿಕಾರಿಗಳು 48 ಲಕ್ಷ ರೂಪಾಯಿ ಬಿಲ್ ಮಾಡಿ ದ್ದರು. ವ್ಯಾಟ್ ಮೀಟರ್ ಒಂದಕ್ಕೆ ಮೂಲ ಬೆಲೆಗಿಂತ ಎಂಟು ಪಟ್ಟು ಹೆಚ್ಚು ಬೆಲೆ ಕೊಟ್ಟು ಖರೀದಿಸಿದ್ದರು. ದಾಖಲೆ ಸಹಿತ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದೆ. ಯಾರೂ ಈ ಬಗ್ಗೆ ತನಿಖೆ ಮಾಡಿಲ್ಲ ಎಂದು ಅವರು ಆರೋಪಿಸಿದರು.

ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಎಚ್.ಯು. ತಳವಾರ ಅವರೂ ಇಡೀ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಉನ್ನತ ಶಿಕ್ಷಣ ನಿರ್ದೇಶನಾಲ ಯದ ಅಧೀನ ಕಾರ್ಯದರ್ಶಿ ಬಿ.ಎನ್.ಜಗದೀಶ್ ಅವರೂ ಒಂದೆರಡು ಬಾರಿ ಸುಳ್ಳು ಮಾಹಿತಿಗಳನ್ನು ನೀಡಿ ಹಾದಿತಪ್ಪಿಸಲು ಪ್ರಯತ್ನಿಸಿದ್ದರು. ಈ ಬಗ್ಗೆ ಸಕಲ ವಿವರಗಳೊಂದಿಗೆ ಸರ್ಕಾರಕ್ಕೆ ದೂರು ನೀಡಿದ್ದೆ. ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗದಿದ್ದಾಗ ಒಂದು ಪತ್ರವನ್ನು ರಾಜ್ಯಪಾಲರಿಗೆ ಬರೆಯುತ್ತಿದ್ದೆ. ಕೊನೆಗೆ ಯಾವ ಪ್ರಯತ್ನವೂ ಫಲ ನೀಡದಿರುವುದನ್ನು ಅರಿತು ಈ ಅವ್ಯವಸ್ಥೆಯತ್ತ ಗಮನ ಸೆಳೆಯುವ ಉದ್ದೇಶದಿಂದ ಒಂದು ಲಕ್ಷ ರೂಪಾಯಿಯ ಚೆಕ್ ನೊಂದಿಗೆ ರಾಜ್ಯಪಾಲರಿಗೆ ಪತ್ರ ಬರೆದಿದ್ದೆ~ ಎಂದರು.

ನನ್ನ ವರ್ಗಾವಣೆಯಲ್ಲಿ ಅಕ್ರಮ ನಡೆದಿದೆ. ವರ್ಗಾವಣೆಯ ಆದೇಶಪತ್ರ ಕೊಟ್ಟಿಲ್ಲ, ಕೆಲವು ದಿನಗಳ ವೇತನವನ್ನು ಇನ್ನೂ ನೀಡಿಲ್ಲ.  ಎಲ್ಲ ಕಾನೂನುಗಳನ್ನೂ ಸರ್ಕಾರ ಉಲ್ಲಂಘಿ ಸಿದೆ ಈಗ ಇಡೀ ಪ್ರಕರಣದ ಬಗ್ಗೆ ಹೈಕೋರ್ಟ್ ಮುಖ್ಯ ನ್ಯಾಯಾಧೀಶರೇ ವಿಚಾರಣೆ ಮಾಡಬೇಕಾಗಿರುವುದರಿಂದ ಸತ್ಯ ಹೊರಬರುತ್ತದೆ ಎಂಬ ವಿಶ್ವಾಸವಿದೆ. ಯಾವುದೇ ಸ್ಥಿತಿ ಬಂದರೂ ಹೋರಾಟ ನಿಲ್ಲುವುದಿಲ್ಲ~ ಎಂದು ಹಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.