ADVERTISEMENT

ರೋಗಿಗಳನ್ನು ದೇವರಂತೆ ನೋಡಿ:ನರ್ಸ್‌ಗಳಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 5:10 IST
Last Updated 7 ಫೆಬ್ರುವರಿ 2012, 5:10 IST

ಹೊಳೆನರಸೀಪುರ:  ರೋಗಿಗಳನ್ನು ದೇವರಂತೆ ಭಾವಿಸಿ ಸೇವೆ ನೀಡಿದಾಗ  ನಿಮ್ಮ ಸೇವೆ ಸಾರ್ಥಕವಾಗುತ್ತದೆ ಎಂದು ಬೆಂಗಳೂರು ಆರ್.ವಿ. ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಬಿ.ಎಸ್. ರಾಜಶೇಖರಯ್ಯ ಸಲಹೆ ನೀಡಿದರು.

ಸೋಮವಾರ ಪಟ್ಟಣದ ಸರ್ಕಾರಿ ನರ್ಸಿಂಗ್ ಕಾಲೇಜಿನ ನೂತನ ವಿದ್ಯಾರ್ಥಿಗಳ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿ,  ರೋಗಿಗಳ ಕಾಯಿಲೆಗೆ  ನೀಡುತ್ತಿರುವ ಔಷಧಗಳ ದಾಖಲೆಗಳನ್ನು ಜವಾ ಬ್ದಾರಿಯಿಂದ ನಿರ್ವಹಿಸಿ. ವೈದ್ಯರು ನೀಡಿದ ಸಲಹೆಯಂತೆ ಉಪಚಾರ ನೀಡಡಬೇಕು ಎಂದರು.

 ತಾಲ್ಲೂಕು ವೈದ್ಯಾಧಿಕಾರಿ ಡಾ. ರಾಜೇಶ್ ಮಾತನಾಡಿ, ವೈದ್ಯರು ಮತ್ತು ನರ್ಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇಬ್ಬರ ಸೇವೆಯಿಂದ ರೋಗಿಯು ಬೇಗ ಗುಣವಾಗುತ್ತಾರೆ ಎಂದರು.

ಇದೇ ಸಂದರ್ಭದಲ್ಲಿ ಪ್ರಥಮ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಪುರಭಾಧ್ಯಕ್ಷೆ ವಿನೋದಾ, ಮುಖ್ಯಾಧಿಕಾರಿ ಶಾಂತಶೆಟ್ಟಿ, ಪ್ರಾಂಶು ಪಾಲರಾದ ಸರೋಜಿನಿ ದೇವಿ ವೇದಿಕೆಯಲ್ಲಿದ್ದರು.

ಉಪ ಪ್ರಾಂಶುಪಾಲರಾದ ದ್ರಾಕ್ಷಾಯಿಣಿ ನಿರೂಪಿಸಿದರು. ರಾಮು ಸ್ವಾಗತಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.