ADVERTISEMENT

ವಿದ್ಯೆ ಕಲಿತರೂ ಪ್ರಜ್ಞಾವಂತಿಕೆ ಕಡಿಮೆ: ನಟರಾಜ್

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2013, 5:37 IST
Last Updated 6 ಆಗಸ್ಟ್ 2013, 5:37 IST

ಚನ್ನರಾಯಪಟ್ಟಣ: ದೇಶದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಪ್ರಜ್ಞಾವಂತರ ಕೊರತೆ ಇದೆ ಎಂದು ಪವಾಡ ಸಂಶೋಧನಾ ಕೇಂದ್ರದ ಗೌರವ ಕಾರ್ಯದರ್ಶಿ ಹುಲಿಕಲ್ ನಟರಾಜ್ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಏರ್ಪಡಿಸಿದ್ದ `ಎವರ್‌ಗ್ರೀನ್ ಮೂವ್‌ಮೆಂಟ್ ಸೊಸೈಟಿ'ಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು,  ಹಾಗಾಗಿ ದೇಶದಲ್ಲಿ ಅಹಿತಕರ ಘಟನೆ ಗಳು ಜಾಸ್ತಿಯಾಗುತ್ತಿವೆ. ಮಾನವೀಯ ಮೌಲ್ಯಗಳು ನೇಪಥ್ಯಕ್ಕೆ ಸರಿಯುತ್ತಿವೆ. ಆಧುನಿಕ ದಿನಗಳಲ್ಲಿ ಕೆಲವರು ಪುನರ್‌ಜನ್ಮದ ಕಲ್ಪನೆ ಪ್ರತಿಪಾದಿಸಿ ಮೌಢ್ಯ ವನ್ನು ಜನರಲ್ಲಿ ತುಂಬುವ ಮೂಲಕ ತಪ್ಪದಾರಿಗೆ ಎಳೆಯುತ್ತಿದ್ದಾರೆ.

ಮೌಢ್ಯ, ಅಂಧಕಾರದ ಬಗ್ಗೆ ವೈಭವೀಕರಣ ಸಲ್ಲದು ಎಂದರು. ಸಂಘದ ಗೌರವಾ ಧ್ಯಕ್ಷ ಹೊನ್ನಶೆಟ್ಟಿಹಳ್ಳಿ ಗಿರಿರಾಜ್, ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಮುಖ್ಯಸ್ಥ ಚಂದ್ರಶೇಖರಗುರೂಜಿ, ಮಂಗಳೂರಿನ ಕುಂಬ್ರಾ ಮಹಿಳಾ ಕಾಲೇಜಿನ ಮಹಾಕಾರ್ಯ ದರ್ಶಿ ಎಂ.ಎಸ್.ಎಂ.ಅಬ್ದುಲ್ ರಶೀದ್ ಜೈನಿಖಾ ಮಿಲ್ ಸಖಾಫಿ, ಆಲ್ಫೋನ್ಸ್‌ನ ಗರದ ಸಂತ ಆಲ್ಫೋನ್ಸರ ದೇವಾಲ ಯದ ಧರ್ಮಗುರು ಫ್ರೆಡರಿಕ್ ಡಿಸೋಜ, ಗೊಮ್ಮಟವಾಣಿ ಪತ್ರಿಕೆ ಸಂಪಾದಕ ಎಸ್.ಎನ್. ಅಶೋಕ್‌ಕುಮಾರ್, ಲಿಯಾಫಿಕ್ಲಬ್ ಅಧ್ಯಕ್ಷ ಪುಟ್ಟಸ್ವಾಮಿಗೌಡ, ನಾಡಪ್ರಭು ಕೆಂಪೇಗೌಡ ವೇದಿಕೆಯ ಸಂಸ್ಥಾಪಕ ಆನಂದ್, ಕಲಾವಿದ ಮಿಲ್ಟ್ರಿ ಮಂಜು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.