ADVERTISEMENT

ಸೌಕರ್ಯ ಒದಗಿಸಲು ಅನುದಾನ: ಶಾಸಕ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2012, 5:52 IST
Last Updated 24 ಡಿಸೆಂಬರ್ 2012, 5:52 IST

ಆಲೂರು: `ಸರ್ಕಾರದ ವಿವಿಧ ಇಲಾಖೆಗಳು, ನಬಾರ್ಡ್ ಹಾಗೂ ಶಾಸಕರ ನಿಧಿಯಿಂದ ರೂ.5 ಕೋಟಿ ಅನುದಾನ ತಾಲ್ಲೂಕಿನ ಟಿ. ಗುಡ್ಡೇನ ಹಳ್ಳಿ, ಕಣತೂರು, ಮಡಬಲು ಮತ್ತು ಹುಣಸವಳ್ಳಿ ಗ್ರಾಮ ಪಂಚಾಯಿತಿಗೆ ಬಿಡುಗಡೆಯಾಗಿದೆ' ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ತಿಳಿಸಿದರು.

ತಾಲ್ಲೂಕಿನ ಟಿ. ಗುಡ್ಡೇನಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ನಿರ್ಮಿ ಸಲಾದ ರೂ.10 ಲಕ್ಷ ವೆಚ್ಚದ ರಾಜೀವ್ ಗಾಂಧಿ ಸೇವಾ ಕೇಂದ್ರ, ಗ್ರಂಥಾಲಯ ಕಟ್ಟಡ ಮತ್ತು ಕಾಂಕ್ರಿಟ್ ರಸ್ತೆ ಕಾಮಗಾರಿಯನ್ನು ಶನಿವಾರ ಉದ್ಘಾಟಿಸಿ ಅವರು ಮಾತಾಡಿದರು.

ಈ ನಾಲ್ಕು ಗ್ರಾಮ ಪಂಚಾಯಿತಿ ಗಳಲ್ಲಿ ಹಲವಾರು ಸಮಸ್ಯೆಗಳಿವೆ. ಇಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ಬಡ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಂಖ್ಯೆಯೂ ಹೆಚ್ಚಾಗಿದೆ. ಈ ಹಿನ್ನೆಲೆ ಯಲ್ಲಿ ಅನುದಾನ ಬಿಡುಗಡೆ ಮಾಡಿಸಿ ಹಲವು ಕಾರ್ಯಕ್ರಮ ಕೈಗೊಳ್ಳಲಾಗಿದೆ. ತಾಳೂರು ಪಂಚಾಯಿತಿಯ ಹರಿಹರ ಪುರದಿಂದ- ಸಮುದ್ರವಳ್ಳಿ ರಸ್ತೆಗೆ 10ಲಕ್ಷ ವೆಚ್ಚದ ಡಾಂಬರೀಕರಣ, ನಿಲುವಾಗಿಲು ರಸ್ತೆ ಅಭಿವೃದ್ಧಿಗೆ ರೂ. 30ಲಕ್ಷ, ಮಾರ್ಸನಹಳ್ಳಿಯಿಂದ- ಚಿಕ್ಕಣಗಾಲು ರಸ್ತೆ ದುರಸ್ತಿಗೆ ರೂ. 20 ಲಕ್ಷ ಬಿಡುಗಡೆಯಾಗಿದೆ. ಈ ಕೆಲಸ ಪ್ರಗತಿಯಲ್ಲಿದೆ. ಬರ ಪರಿಹಾರವಾಗಿ ರೂ.10.75 ಲಕ್ಷ ನಬಾರ್ಡ್‌ನಿಂದ ಇತರ ಕಾಮಗಾರಿಗಳಿಗೆ ತಕ್ಷಣ ಚಾಲನೆ ನೀಡಲಾಗುವುದು ಎಂದರು.

ನಾಲ್ಕು ಪಂಚಾಯಿತಿಗಳಿಗೆ ಐದು ಕೋಟಿ ವೆಚ್ಚ ಮಾಡಲಾಗುತ್ತಿದೆ. ಯಾವುದೇ ಕೆಲಸ ಕಾರ್ಯಗತವಾಗಲು ಅಧಿಕಾರಿಗಳ ಶ್ರಮ ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ. ನನ್ನ ಅವಧಿಯಲ್ಲಿ ಕ್ಷೇತ್ರದ ಪ್ರತಿ ಪಂಚಾಯಿತಿಯ ಸಮಸ್ಯೆ ಪರಿಹರಿಸಲು ಯತ್ನಿಸಿದ್ದೇನೆ ಎಂದು ತಿಳಿಸಿದರು.

ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕೆ.ಎಸ್. ಮಂಜೇಗೌಡ ಮಾತನಾಡಿ, ತಾಲ್ಲೂಕಿನ 15 ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ರಾಜೀವ್ ಗಾಂಧಿ ಸೇವಾ ಕೇಂದ್ರ ತೆರೆಯಲಾಗುತ್ತದೆ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಯಶೋಧ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಗೌಡೇಗೌಡ, ಜಿ.ಕೆ. ವೆಂಕಟೇಶ್, ಕಾರ್ಯನಿರ್ವಾಹ ಣಾಧಿಕಾರಿ ಶಿವಮೂರ್ತಿ, ಗ್ರಾಮಸ್ಥ ರಾದ ನಿಂಗರಾಜ್ ಮಾತಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಈರಯ್ಯ, ಸದಸ್ಯರಾದ ಲಕ್ಷ್ಮಮ್ಮ, ಜ್ಯೋತಿಸ್ವಾಮಿ, ರಾಮೇಗೌಡ, ಚಂದ್ರಮ್ಮ, ಗಾಯಿತ್ರಿ, ನಿಂಗಮ್ಮ, ಗೌರಮ್ಮ ಮತ್ತು ಚನ್ನಮ್ಮ, ಛಲವಾದಿ ಮಹಾಸಭಾ ಅಧ್ಯಕ್ಷ ಸಂತೋಷ್ ಮತ್ತು ದಸಂಸ ಸಂಚಾಲಕ ಬಸವರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.